ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 4-5

ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ

ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ

5:5-7, 11

ಇಸ್ರಾಯೇಲ್ಯರಿಗೆ ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಬಡತನ ಅಡ್ಡಿ ಬರುತ್ತಿರಲಿಲ್ಲ. ಯಾಕಂದ್ರೆ ಒಬ್ಬ ಕಡು ಬಡವ ಸಹ ತನ್ನ ಕೈಲಾದಷ್ಟು ಖರ್ಚಿನಲ್ಲೇ ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಬಹುದಿತ್ತು. ಅವರು ಗೋಧಿ ಹಿಟ್ಟನ್ನು ಅರ್ಪಿಸಬಹುದಿತ್ತು. ಆದರೆ ಅದು ಅತಿಥಿಗಳಿಗೆ ಕೊಡಲು ಉಪಯೋಗಿಸುತ್ತಿದ್ದ ಹಿಟ್ಟಿನ ಹಾಗೆ ‘ಹಸನಾಗಿ’ ಅಂದರೆ ನುಣುಪಾಗಿ ಇರಬೇಕಿತ್ತು. (ಆದಿ 18:6) ಅದನ್ನ ಯೆಹೋವನು ಸ್ವೀಕರಿಸುತ್ತಿದ್ದನು. ಇಂದು ಸಹ ಕೆಲವು ಕಾರಣಗಳಿಂದ ಯೆಹೋವನ ಸೇವೆನ ನಮ್ಮಿಂದ ಅಷ್ಟು ಚೆನ್ನಾಗಿ ಮಾಡೋಕೆ ಆಗದೇ ಇರಬಹುದು. ಆದರೆ ನಮ್ಮ ಕೈಲಾದಷ್ಟು ಅತ್ಯುತ್ತಮವಾದ “ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು” ಅರ್ಪಿಸಿದ್ರೆ ಯೆಹೋವನು ಅದನ್ನ ಸ್ವೀಕರಿಸುತ್ತಾನೆ.—ಇಬ್ರಿ 13:15.

ಅನಾರೋಗ್ಯದ ಕಾರಣ ಅಥವಾ ವಯಸ್ಸಾಗಿರೋ ಕಾರಣ ಯೆಹೋವನ ಸೇವೆನ ಅಷ್ಟು ಚೆನ್ನಾಗಿ ಮಾಡೋಕೆ ಆಗದಿದ್ರೆ ಈ ವಿಷಯ ನಿಮ್ಮನ್ನ ಹೇಗೆ ಪ್ರೋತ್ಸಾಹಿಸುತ್ತೆ?