ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?
ಇಸ್ರಾಯೇಲ್ಯರು ಯಜ್ಞಗಳನ್ನು ಮತ್ತು ನೈವೇದ್ಯಗಳನ್ನು ಅರ್ಪಿಸಬೇಕು ಅಂತ ಧರ್ಮಶಾಸ್ತ್ರದಲ್ಲಿ ಹೇಳಲಾಗಿತ್ತು. ಈ ಯಜ್ಞಗಳು ಯೆಹೋವನಿಗೆ ಇಷ್ಟ ಆಗ್ತಿತ್ತು. ಅಷ್ಟೇ ಅಲ್ಲ ಇದು ಯೇಸು ಅರ್ಪಿಸಲಿದ್ದ ವಿಮೋಚನಾ ಮೌಲ್ಯವನ್ನ ಅಥವಾ ಅದರಿಂದ ಸಿಗುವ ಆಶೀರ್ವಾದಗಳನ್ನ ಸೂಚಿಸುತ್ತಿತ್ತು.—ಇಬ್ರಿ 8:3-5; 9:9; 10:5-10.
-
ಯಜ್ಞಗಳಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಗಳಲ್ಲಿ ಯಾವುದೇ ದೋಷ, ಕಳಂಕ ಇರಬಾರದಿತ್ತು. ಅದೇ ತರ ಯೇಸು ಯಾವುದೇ ದೋಷ ಕಳಂಕ ಇಲ್ಲದ ತನ್ನ ಪರಿಪೂರ್ಣ ದೇಹವನ್ನ ಯಜ್ಞವಾಗಿ ಅರ್ಪಿಸಿದ.—1ಪೇತ್ರ 1:18, 19
-
ಯಜ್ಞಗಳಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಗಳು ಯಾವುದೇ ಕುಂದು-ಕೊರತೆ ಇಲ್ಲದೆ ಸಂಪೂರ್ಣವಾಗಿ ಇರಬೇಕಿತ್ತು. ಅದೇ ತರ ಯೇಸು ತನ್ನನ್ನೇ ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡ
-
ಸಮಾಧಾನಯಜ್ಞಗಳನ್ನ ಅರ್ಪಿಸಿದರೆ ಯೆಹೋವನೊಂದಿಗೆ ಒಳ್ಳೇ ಸ್ನೇಹ ಸಂಬಂಧ ಇರುತಿತ್ತು. ಅದೇ ತರ ಕ್ರಿಸ್ತನ ಸಂಧ್ಯಾ ಭೋಜನದಲ್ಲಿ ಪಾಲು ತೆಗೆದುಕೊಳ್ಳೋ ಅಭಿಷಿಕ್ತರಿಗೆ ಯೆಹೋವನೊಂದಿಗೆ ಆಪ್ತ ಸಂಬಂಧ ಇದೆ