ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 52-57

ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು

ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು

‘ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು ಆಗಿದ್ದನು. ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿದೆವು’

53:3-5

  • ಯೇಸುವನ್ನು ದ್ವೇಷಿಸಿ, ದೇವದೂಷಕ ಎಂಬ ಆರೋಪ ಹೊರಿಸಲಾಯಿತು. ಅಸಹ್ಯಕರವಾದ ಒಂದು ರೋಗದಿಂದ ಬಾಧಿಸಲ್ಪಟ್ಟಿದ್ದಾನೋ ಎಂಬಂತೆ ದೇವರು ಅವನನ್ನು ಶಿಕ್ಷಿಸುತ್ತಿದ್ದಾನೆ ಎಂದು ಕೆಲವರು ಭಾವಿಸಿದರು

‘ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು ಮತ್ತು ಯೆಹೋವನ ಸಂಕಲ್ಪವು ಅವನ ಕೈಯಿಂದ ನೆರವೇರುವದು’

53:10

  • ಜನ ತನ್ನ ಮಗನನ್ನು ಸಾಯಿಸುವುದನ್ನು ನೋಡುವಾಗ ಯೆಹೋವನಿಗೆ ತುಂಬ ಸಂಕಟವಾಯಿತು. ಆದರೆ ಆತನ ನಂಬಿಗಸ್ತಿಕೆಯನ್ನು ನೋಡುವಾಗ ಯೆಹೋವನಿಗೆ ಸಂತೋಷವಾಯಿತು. ಯೇಸುವಿನ ಸಾವಿನಿಂದಾಗಿ ದೇವಸೇವಕರ ನಿಷ್ಠೆಯ ಬಗ್ಗೆ ಸೈತಾನನು ಹಾಕಿದ ಸವಾಲಿಗೆ ಉತ್ತರ ಸಿಕ್ಕಿತು. ಜೊತೆಗೆ, ಪಶ್ಚಾತ್ತಾಪಪಡುವ ಮಾನವರಿಗೆ ಆಶೀರ್ವಾದ ಸಿಕ್ಕಿತು. ಹೀಗೆ ಯೇಸುವಿನ ಸಾವಿನಿಂದ ‘ಯೆಹೋವನ ಸಂಕಲ್ಪ’ ನೆರವೇರಿತು.