ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ

ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ

ಸೃಷ್ಟಿ ಯೆಹೋವ ದೇವರ ಮಹಿಮೆಗೆ ಹಿಡಿದ ಕನ್ನಡಿಯಂತಿದೆ. (ಕೀರ್ತ 19:1-4; 139:14) ಆದರೆ ಈ ಲೋಕ, ಜೀವದ ಮೂಲದ ಬಗ್ಗೆ ಸುಳ್ಳು ಸಿದ್ಧಾಂತಗಳನ್ನು ಹಬ್ಬಿಸಿ ದೇವರ ಹೆಸರಿಗೆ ಮಣ್ಣೆರೆಚಲು ಪ್ರಯತ್ನಿಸುತ್ತಿದೆ. (ರೋಮ 1:18-25) ಇಂಥ ಸಿದ್ಧಾಂತಗಳು ನಿಮ್ಮ ಮಕ್ಕಳ ಹೃದಮನಗಳಲ್ಲಿ ಬೇರೂರದಂತೆ ಹೇಗೆ ಎಚ್ಚರವಹಿಸಬಹುದು? ಯೆಹೋವನು ಇದ್ದಾನೆಂದು ಮತ್ತು ಅವರ ಮೇಲೆ ಅಪಾರ ಪ್ರೀತಿ ಇಟ್ಟಿದ್ದಾನೆಂದು ನಂಬಿಕೆ ಬೆಳೆಸಿಕೊಳ್ಳಲು ಅವರಿಗೆ ಚಿಕ್ಕಪ್ರಾಯದಿಂದಲೇ ಸಹಾಯ ಮಾಡಿ. (2ಕೊರಿಂ 10:4, 5; ಎಫೆ 6:16) ಶಾಲೆಯಲ್ಲಿ ಅವರು ಕಲಿಯುತ್ತಿರುವ ವಿಷಯಗಳ ಬಗ್ಗೆ ಅವರ ಮನದ ಮಾತೇನೆಂದು ಜಾಣ್ಮೆಯಿಂದ ತಿಳಿದುಕೊಳ್ಳಿ. ಲಭ್ಯವಿರುವ ಅನೇಕ ಸಾಧನಗಳನ್ನು ಉಪಯೋಗಿಸಿ ಅವರಿಗೆ ಮನವರಿಕೆ ಮಾಡಿ.—ಜ್ಞಾನೋ 20:5; ಯಾಕೋ 1:19.

ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ? ಎಂಬ ವಿಡಿಯೋ ಹಾಕಿ. ನಂತರ, ಮುಂದಿನ ಪ್ರಶ್ನೆಗಳನ್ನು ಚರ್ಚಿಸಿ:

  • ಯಾರು ದೇವರಲ್ಲಿ ನಂಬಿಕೆಯಿಡುವುದಿಲ್ಲ ಎಂದು ಜನ ಅಂದ್ಕೊಂಡಿದ್ದಾರೆ?

  • ಶಾಲೆಯಲ್ಲಿ ನಿಮಗೇನು ಕಲಿಸಿದ್ದಾರೆ?

  • ಯೆಹೋವನು ನಿಜವಾಗಲೂ ಇದ್ದಾನೆಂದು ನಿಮಗೆ ಹೇಗೆ ಗೊತ್ತು?

  • ದೇವರೇ ಎಲ್ಲವನ್ನು ಸೃಷ್ಟಿಸಿದ್ದು ಎಂದು ನೀವು ಹೇಗೆ ಬೇರೊಬ್ಬರಿಗೆ ರುಜುಪಡಿಸಬಲ್ಲಿರಿ?