ನಮ್ಮ ಕ್ರೈಸ್ತ ಜೀವನ
ವಿವೇಚನೆಯಿಂದ ಸಾಹಿತ್ಯ ಬಳಸಿ
“ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಹೇಳಿದನು. (ಮತ್ತಾ 10:8) ಯೇಸುವಿನ ಈ ಮಾತಿಗೆ ಕಿವಿಗೊಟ್ಟು ನಾವು ಬೈಬಲನ್ನು ಮತ್ತು ಬೈಬಲ್ ಸಾಹಿತ್ಯವನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ. (2ಕೊರಿಂ 2:17) ಆದರೆ, ಈ ಪ್ರಕಾಶನಗಳಲ್ಲಿ ದೇವರ ವಾಕ್ಯದ ಅಮೂಲ್ಯ ಸತ್ಯಗಳಿವೆ. ಇವುಗಳನ್ನು ಮುದ್ರಿಸಿ, ಪ್ರಪಂಚದ ಎಲ್ಲಾ ಸಭೆಗಳಿಗೆ ಕಳುಹಿಸಲು ಅಪಾರ ಶ್ರಮ ಮತ್ತು ಹಣವನ್ನು ವ್ಯಯಿಸಲಾಗುತ್ತದೆ. ಆದ್ದರಿಂದ, ನಾವು ಅಗತ್ಯವಿರುವುದನ್ನು ಮಾತ್ರವೇ ಪಡೆಯಬೇಕು.
ಬೇರೆಯವರಿಗೆ ಸಾಹಿತ್ಯವನ್ನು ಕೊಡುವಾಗೆಲ್ಲಾ ನಾವು ವಿವೇಚನೆ ಬಳಸಬೇಕು, ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಸಹ. (ಮತ್ತಾ 7:6) ಹಾದು ಹೋಗುವವರಿಗೆಲ್ಲಾ ಸುಮ್ಮನೆ ಸಾಹಿತ್ಯ ಕೊಡುವುದಿಲ್ಲ. ಅವರಿಗೆ ಆಸಕ್ತಿ ಇದೆಯಾ ಎಂದು ತಿಳಿಯಲು ಅವರೊಂದಿಗೆ ಮಾತಾಡುತ್ತೇವೆ. ಆದರೆ, ಯಾರಾದರೂ ‘ನನಗೆ ಈ ಸಾಹಿತ್ಯ ಬೇಕು’ ಎಂದು ನಿರ್ದಿಷ್ಟವಾಗಿ ಕೇಳಿದರೆ ನಾವು ಉದಾರವಾಗಿ ಕೊಡುತ್ತೇವೆ.—ಜ್ಞಾನೋ 3:27, 28.