‘ಯೆಹೋವನ ಶುಭವರುಷದ ಬಗ್ಗೆ ಸಾರಿ’
‘ಯೆಹೋವನ ಶುಭವರುಷ’ ಯಾವುದೇ ಒಂದು ವರ್ಷವಲ್ಲ
-
ತಾನು ತಿಳಿಸುವ ಬಿಡುಗಡೆಯ ಸಂದೇಶಕ್ಕೆ ಪ್ರತಿಕ್ರಿಯಿಸಲು ಯೆಹೋವನು ದೀನಜನರಿಗೆ ಕೊಡುವ ಸಮಯಾವಧಿಯೇ ಶುಭವರುಷ
-
ಮೊದಲನೇ ಶತಮಾನದಲ್ಲಿ ಈ ಶುಭವರುಷವು ಕ್ರಿ.ಶ. 29ರಲ್ಲಿ ಯೇಸು ಸೇವೆಯನ್ನು ಪ್ರಾರಂಭಿಸಿದಾಗ ಆರಂಭವಾಯಿತು. ಇದು ‘ದೇವರು ಮುಯ್ಯಿತೀರಿಸುವ ದಿನದವರೆಗೆ’ ಮುಂದುವರಿಯಿತು, ಅಂದರೆ ಕ್ರಿ.ಶ. 70ರಲ್ಲಿ ಯೆರೂಸಲೇಮ್ ನಾಶವಾಗುವವರೆಗೆ ಮುಂದುವರಿಯಿತು.
-
ನಮ್ಮೀ ದಿನಗಳಲ್ಲಿ, ಶುಭವರುಷವು 1914ರಲ್ಲಿ ಯೇಸು ಸ್ವರ್ಗದಲ್ಲಿ ರಾಜನಾದಾಗ ಆರಂಭವಾಯಿತು. ಇದು ಮಹಾ ಸಂಕಟದಲ್ಲಿ ಕೊನೆಗೊಳ್ಳಲಿದೆ.
ಯೆಹೋವನು ‘ನೀತಿವೃಕ್ಷಗಳನ್ನು’ ಕೊಟ್ಟು ತನ್ನ ಜನರನ್ನು ಆಶೀರ್ವದಿಸುತ್ತಾನೆ
-
ಪ್ರಪಂಚದ ಅತಿ ಎತ್ತರದ ಮರಗಳು ಸಾಮಾನ್ಯವಾಗಿ ಕಾಡಿನಲ್ಲಿ ಒಟ್ಟೊಟ್ಟಿಗೆ ಬೆಳೆಯುತ್ತವೆ. ಇದರಿಂದ ಒಂದು ಮರಕ್ಕೆ ಇನ್ನೊಂದು ಮರ ಆಸರೆಯಾಗುತ್ತದೆ
-
ಬೇರುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಮರಗಳು ಬಿರುಗಾಳಿಗೂ ಜಗ್ಗದೆ ನಿಲ್ಲುತ್ತವೆ
-
ಬೆಳೆದ ಮರಗಳು ಹೊಸ ಸಸಿಗಳಿಗೆ ನೆರಳನ್ನು ನೀಡುತ್ತವೆ. ಅವುಗಳಿಂದ ಉದುರುವ ಎಲೆಗಳು ಮಣ್ಣನ್ನು ಫಲವತ್ತಾಗಿ ಮಾಡುತ್ತವೆ
ಲೋಕವ್ಯಾಪಕ ಕ್ರೈಸ್ತ ಸಭೆಯ ಪ್ರತಿಯೊಬ್ಬರೂ ‘ನೀತಿವೃಕ್ಷಗಳಿಂದ’ ಅಂದರೆ ಅಭಿಷಿಕ್ತರಿಂದ ಬೆಂಬಲ ಮತ್ತು ಸಂರಕ್ಷಣೆ ಪಡೆಯುತ್ತಿದ್ದಾರೆ