ನಮ್ಮ ಕ್ರೈಸ್ತ ಜೀವನ
ನಿಮ್ಮ ನಿರೀಕ್ಷೆಯಲ್ಲಿ ಆನಂದಿಸಿರಿ
ನಿರೀಕ್ಷೆಯು ಲಂಗರದಂತಿದೆ. (ಇಬ್ರಿ 6:19) ಸಮುದ್ರದಲ್ಲಿ ಬಿರುಗಾಳಿ ಬಂದಾಗ ಆಧ್ಯಾತ್ಮಿಕ ಹಡಗೊಡೆತ ಅನುಭವಿಸದಿರಲು ಅದು ನಮಗೆ ಸಹಾಯ ಮಾಡುತ್ತದೆ. (1ತಿಮೊ 1:18, 19) ಆಶಾಭಂಗ, ಆರ್ಥಿಕ ನಷ್ಟ, ದೀರ್ಘಕಾಲಿಕ ಅಸ್ವಸ್ಥತೆ, ಆತ್ಮೀಯರೊಬ್ಬರ ಸಾವು ಅಥವಾ ನಮ್ಮ ಸಮಗ್ರತೆಗೆ ಬರುವ ಯಾವುದೇ ಅಪಾಯಗಳು ಈ ಬಿರುಗಾಳಿಯನ್ನು ಸೂಚಿಸುತ್ತವೆ.
ನಂಬಿಕೆ ಮತ್ತು ನಿರೀಕ್ಷೆ ನಮ್ಮ ಬಹುಮಾನದ ಮೇಲೆ ದೃಷ್ಟಿ ಇಡಲು ಸಹಾಯ ಮಾಡುತ್ತದೆ. (2ಕೊರಿಂ 4:16-18; ಇಬ್ರಿ 11:13, 26, 27) ನಮಗೆ ಭೂನಿರೀಕ್ಷೆಯಿರಲಿ ಸ್ವರ್ಗದ ನಿರೀಕ್ಷೆಯಿರಲಿ, ದೇವರ ವಾಕ್ಯದಲ್ಲಿರುವ ವಾಗ್ದಾನಗಳ ಬಗ್ಗೆ ನಾವು ಕ್ರಮವಾಗಿ ಧ್ಯಾನಿಸುವ ಮೂಲಕ ಆ ನಿರೀಕ್ಷೆಯನ್ನು ಬಲಪಡಿಸಿಕೊಳ್ಳುತ್ತಾ ಇರಬೇಕು. ಆಗ ಪರೀಕ್ಷೆಗಳು ಬಂದರೂ ಆನಂದವನ್ನು ಕಾಪಾಡಿಕೊಳ್ಳಲು ಸಾಧ್ಯ.—1ಪೇತ್ರ 1:6, 7.
ನಿರೀಕ್ಷೆಯಲ್ಲಿ ಆನಂದಿಸಿ ಎಂಬ ವಿಡಿಯೋ ನೋಡಿದ ನಂತರ ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
-
ಮೋಶೆ ಹೇಗೆ ಉತ್ತಮ ಮಾದರಿ ಇಟ್ಟಿದ್ದಾನೆ?
-
ಕುಟುಂಬದ ಶಿರಸ್ಸುಗಳಿಗೆ ಯಾವ ಜವಾಬ್ದಾರಿ ಇದೆ?
-
ಕುಟುಂಬ ಆರಾಧನೆಯಲ್ಲಿ ನೀವು ಯಾವ ವಿಷಯಗಳನ್ನು ಚರ್ಚಿಸಬಹುದು?
-
ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ನಿರೀಕ್ಷೆ ಹೇಗೆ ಸಹಾಯಮಾಡುತ್ತದೆ?
-
ನೀವು ಯಾವ ವಿಷಯಗಳಿಗಾಗಿ ಎದುರುನೋಡುತ್ತೀರಿ?