ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 14-15

ಕೆಲವರ ಕೈಯಿಂದ ಹಲವರಿಗೆ ಉಣಿಸಿದನು

ಕೆಲವರ ಕೈಯಿಂದ ಹಲವರಿಗೆ ಉಣಿಸಿದನು

ಕ್ರಿ.ಶ. 32​ರಲ್ಲಿ ಪಸ್ಕಹಬ್ಬಕ್ಕೆ ಮುಂಚೆ ಯೇಸು ಮಾಡಿದ ಈ ಅದ್ಭುತವನ್ನು ನಾಲ್ಕು ಸುವಾರ್ತಾ ಲೇಖಕರೂ ದಾಖಲಿಸಿದ್ದಾರೆ.

ಯೇಸು ಈ ಅದ್ಭುತದಲ್ಲಿ ಮಾಡಿದಂತೆಯೇ ಇಂದಿನ ತನಕ ಕೆಲವರ ಕೈಯಿಂದ ಹಲವರಿಗೆ ಆಧ್ಯಾತ್ಮಿಕವಾಗಿ ಉಣಿಸುತ್ತಿದ್ದಾನೆ.

14:16-21

  • ತನ್ನ ಶಿಷ್ಯರ ಹತ್ತಿರ ಕೇವಲ ಐದು ರೊಟ್ಟಿ ಮತ್ತು ಎರಡು ಮೀನು ಇದ್ದರೂ ಜನರ ಗುಂಪಿಗೆ ಊಟ ಕೊಡುವಂತೆ ಯೇಸು ಹೇಳಿದನು

  • ಯೇಸು ರೊಟ್ಟಿ ಮತ್ತು ಮೀನನ್ನು ತೆಗೆದುಕೊಂಡು ಪ್ರಾರ್ಥಿಸಿ ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನು ಜನರ ಗುಂಪಿಗೆ ಹಂಚಿದರು

  • ಯೇಸು ಮಾಡಿದ ಅದ್ಭುತದಿಂದ ಎಲ್ಲರಿಗೂ ಸಾಕಾಗಿ ಉಳಿಯುವಷ್ಟು ಆಹಾರ ಸಿಕ್ಕಿತು. ಯೇಸು ಕೆಲವರ ಕೈಯಿಂದ ಅಂದರೆ ಶಿಷ್ಯರ ಕೈಯಿಂದ ಹಲವರಿಗೆ ಉಣಿಸಿದನು

  • ಕಡೇ ದಿವಸದಲ್ಲಿ “ತಕ್ಕ ಸಮಯಕ್ಕೆ [ಆಧ್ಯಾತ್ಮಿಕ] ಆಹಾರವನ್ನು” ಕೊಡಲಿಕ್ಕಾಗಿ ಒಂದು ಮಾಧ್ಯಮವನ್ನು ನೇಮಿಸುವೆನೆಂದು ಯೇಸು ಮುಂತಿಳಿಸಿದನು.—ಮತ್ತಾ 24:45

  • ಯೇಸು 1919​ರಲ್ಲಿ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಅಂದರೆ ಅಭಿಷಿಕ್ತರ ಒಂದು ಚಿಕ್ಕ ಗುಂಪನ್ನು “ತನ್ನ ಮನೆಯವರಿಗೆ” ಆಧ್ಯಾತ್ಮಿಕ ಆಹಾರ ಕೊಡಲು ನೇಮಿಸಿದನು

  • ತಾನು ನೇಮಿಸಿರುವ ಅಭಿಷಿಕ್ತರ ಈ ಚಿಕ್ಕ ಗುಂಪನ್ನು ಉಪಯೋಗಿಸಿ ಯೇಸು ಪ್ರಥಮ ಶತಮಾನದಲ್ಲಿ ಮಾಡಿದಂತೆ ಇಂದು ಸಹ ಉಣಿಸುತ್ತಿದ್ದಾನೆ

ಯೇಸು ತನ್ನ ಜನರಿಗೆ ಆಧ್ಯಾತ್ಮಿಕವಾಗಿ ಉಣಿಸಲು ಉಪಯೋಗಿಸುತ್ತಿರುವ ಮಾಧ್ಯಮವನ್ನು ಗುರುತಿಸಿ ಅದಕ್ಕೆ ಗೌರವ ಕೊಡುತ್ತಿದ್ದೇನೆಂದು ನಾನು ಹೇಗೆ ತೋರಿಸಬಹುದು?