ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

‘ನಿಮ್ಮ ತಂದೆತಾಯಿಯನ್ನು ಸನ್ಮಾನಿಸಿ’

‘ನಿಮ್ಮ ತಂದೆತಾಯಿಯನ್ನು ಸನ್ಮಾನಿಸಿ’

ಯೇಸು ಭೂಮಿಯಲ್ಲಿದ್ದಾಗ ‘ತಂದೆತಾಯಿಯನ್ನು ಸನ್ಮಾನಿಸಬೇಕು’ ಎಂಬ ಆಜ್ಞೆಗೆ ಪ್ರಾಮುಖ್ಯತೆ ಕೊಟ್ಟನು. (ವಿಮೋ 20:12; ಮತ್ತಾ 15:4) ಆತನು ಯಾವುದೇ ಹಿಂಜರಿಕೆ ಇಲ್ಲದೆ ಅದನ್ನು ಹೇಳಿದನು. ಯಾಕೆಂದರೆ ಚಿಕ್ಕವನಿದ್ದಾಗ ಯೇಸು ತನ್ನ ಹೆತ್ತವರಿಗೆ “ಅಧೀನನಾಗಿ ಮುಂದುವರಿದನು.” (ಲೂಕ 2:51) ದೊಡ್ಡವನಾದ ಮೇಲೂ ಅವನಲ್ಲಿ ಈ ಗೌರವ ಇತ್ತು. ಆದ್ದರಿಂದ ತಾನು ತೀರಿಹೋಗುವ ಮುಂಚೆ ತನ್ನ ತಾಯಿಯನ್ನು ನೋಡಿಕೊಳ್ಳಲು ಏರ್ಪಾಡನ್ನು ಮಾಡಿದನು.—ಯೋಹಾ 19:26, 27.

ಇಂದು ಸಹ ಕ್ರೈಸ್ತ ಯುವಜನರು ತಮ್ಮ ತಂದೆತಾಯಿಗೆ ವಿಧೇಯರಾಗುವ ಮೂಲಕ ಮತ್ತು ಗೌರವದಿಂದ ಮಾತಾಡುವ ಮೂಲಕ ಅವರನ್ನು ಸನ್ಮಾನಿಸುತ್ತಾರೆ. ಹೆತ್ತವರನ್ನು ಸನ್ಮಾನಿಸಬೇಕೆಂಬುದು ಶಾಶ್ವತವಾದ ಆಜ್ಞೆ. ನಮ್ಮ ಹೆತ್ತವರಿಗೆ ವಯಸ್ಸಾದರೂ ನಾವು ಅವರ ಸಲಹೆ ಪಡೆಯುವ ಮೂಲಕ ಅವರನ್ನು ಸನ್ಮಾನಿಸಬೇಕು. (ಜ್ಞಾನೋ 23:22) ಭಾವನಾತ್ಮಕವಾಗಿ ಮತ್ತು ಭೌತಿಕವಾಗಿ ಅವರಿಗೆ ಏನು ಬೇಕೋ ಅದನ್ನು ಮಾಡುವ ಮೂಲಕ ನಾವು ಅವರನ್ನು ಸನ್ಮಾನಿಸುತ್ತೇವೆಂದು ತೋರಿಸುತ್ತೇವೆ. (1ತಿಮೊ 5:8) ನಾವು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನಮ್ಮ ಹೆತ್ತವರ ಜೊತೆ ಒಳ್ಳೆಯ ಮಾತುಕತೆ ಇರುವುದಾದರೆ ಅದೇ ನಾವು ಅವರನ್ನು ಸನ್ಮಾನಿಸುತ್ತೇವೆ ಎನ್ನುವುದಕ್ಕೆ ಪುರಾವೆ.

ಹೆತ್ತವರ ಜೊತೆ ಮಾತಾಡೋದು ಹೇಗೆ? ಎಂಬ ವಿಡಿಯೋ ನೋಡಿ, ಈ ಪ್ರಶ್ನೆಗಳನ್ನು ಉತ್ತರಿಸಿ:

  • ನಿಮ್ಮ ಹೆತ್ತವರ ಜೊತೆ ಮಾತಾಡಲು ನಿಮಗೆ ಯಾಕೆ ಕಷ್ಟ ಅನಿಸುತ್ತದೆ?

  • ಅವರ ಜೊತೆ ಮಾತಾಡುವಾಗ ಅವರನ್ನು ಸನ್ಮಾನಿಸುತ್ತೀರೆಂದು ಹೇಗೆ ತೋರಿಸಬಹುದು?

  • ಅವರ ಜೊತೆ ಮಾತಾಡುವುದರಿಂದ ಯಾವ ಪ್ರಯೋಜನವಿದೆ? (ಜ್ಞಾನೋ 15:22)

    ಹೆತ್ತವರೊಂದಿಗೆ ಮಾತಾಡಿ ಸಲಹೆ ಪಡೆದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ