ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು​ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು​ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ

ಏಕೆ ಪ್ರಾಮುಖ್ಯ: ‘ಮನುಷ್ಯನ ಹೃದಯದ ಸಂಕಲ್ಪವು ಆಳವಾದ ಬಾವಿಯ ನೀರಿನಂತೆ.’ ಆದರೆ ಪ್ರಶ್ನೆಗಳು ಬಕೆಟ್‌ನಂತಿದ್ದು ಹೃದಯದಲ್ಲಿರುವ ಯೋಚನೆಗಳನ್ನು ಹೊರಗೆ ತೆಗೆಯಲು ಸಹಾಯ ಮಾಡುತ್ತವೆ. (ಜ್ಞಾನೋ 20:5) ಕೇಳುಗರು ನಮ್ಮ ಸಂಭಾಷಣೆಯಲ್ಲಿ ಒಳಗೂಡಲು ಪ್ರಶ್ನೆಗಳು ಸಹಾಯ ಮಾಡುತ್ತವೆ. ಒಳ್ಳೇ ಪ್ರಶ್ನೆಗಳನ್ನು ಕೇಳುವ ಮೂಲಕ ಜನರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬಹುದು. ಯೇಸು ಪರಿಣಾಮಕಾರಿ ಪ್ರಶ್ನೆಗಳನ್ನು ಉಪಯೋಗಿಸಿದನು. ಆತನನ್ನು ನಾವು ಹೇಗೆ ಅನುಕರಿಸಬಹುದು?

ಹೇಗೆ ಮಾಡುವುದು:

  • ದೃಷ್ಟಿಕೋನ ಪ್ರಶ್ನೆಗಳನ್ನು ಕೇಳಿ. ಯೇಸು ತನ್ನ ಶಿಷ್ಯರ ಅನಿಸಿಕೆಗಳನ್ನು ತಿಳಿದುಕೊಳ್ಳಲು ಅನೇಕ ಪ್ರಶ್ನೆಗಳನ್ನು ಕೇಳಿದನು. (ಮತ್ತಾ 16:13-16; ಶುಶ್ರೂಷಾ ಶಾಲೆ ಪುಟ 238 ಪ್ಯಾರ 4-6) ನೀವು ಯಾವ ದೃಷ್ಟಿಕೋನ ಪ್ರಶ್ನೆಗಳನ್ನು ಕೇಳಬಹುದು?

  • ಮಾರ್ಗದರ್ಶಕ ಪ್ರಶ್ನೆಗಳನ್ನು ಕೇಳಿ. ಪೇತ್ರನ ಯೋಚನೆಯನ್ನು ಸರಿ ಮಾಡಲು ಯೇಸು ಪ್ರಶ್ನೆಗಳನ್ನು ಕೇಳಿ, ಅದಕ್ಕಿರಬಹುದಾದ ಉತ್ತರಗಳನ್ನು ಸಹ ಹೇಳಿದನು. ಇದರಿಂದ ಪೇತ್ರನಿಗೆ ಸರಿಯಾದ ತೀರ್ಮಾನಕ್ಕೆ ಬರಲು ಸಾಧ್ಯವಾಯಿತು. (ಮತ್ತಾ 17:24-26) ಸರಿಯಾದ ತೀರ್ಮಾನಕ್ಕೆ ಬರಲು ನೀವು ಯಾವ ರೀತಿಯ ಮಾರ್ಗದರ್ಶಕ ಪ್ರಶ್ನೆಗಳನ್ನು ಕೇಳಬಹುದು?

  • ಶ್ಲಾಘಿಸಿ. ಶಾಸ್ತ್ರಿಯೊಬ್ಬನು “ಬುದ್ಧಿವಂತಿಕೆಯಿಂದ ಉತ್ತರಿಸಿದ್ದನ್ನು” ನೋಡಿ ಯೇಸು ಅವನನ್ನು ಶ್ಲಾಘಿಸಿದನು. (ಮಾರ್ಕ 12:34) ಮನೆಯವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟಾಗ ಅವರನ್ನು ಹೇಗೆ ಶ್ಲಾಘಿಸಬಹುದು?

ಯೇಸು ಮಾಡಿದ್ದನ್ನೇ ಮಾಡಿ—ಸತ್ಯ ಕಲಿಸಿ ಎಂಬ ವಿಡಿಯೋದ ಮೊದಲ ಭಾಗವನ್ನು ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಈ ವಿಡಿಯೋದಲ್ಲಿ ನೋಡಿದಂತೆ ಸಹೋದರನು ಹೇಳಿದ ಮಾಹಿತಿ ಸರಿಯಾಗಿದ್ದರೂ ಬೋಧಿಸಿದ ವಿಧ ಸರಿಯಾಗಿರಲಿಲ್ಲ ಯಾಕೆ?

  • ಮಾಹಿತಿಯನ್ನು ಕೇವಲ ವಿವರಿಸಿದರಷ್ಟೇ ಸಾಕಾಗಲ್ಲ ಯಾಕೆ?

ವಿಡಿಯೋದ ಎರಡನೇ ಭಾಗವನ್ನು ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಹೋದರನು ಪ್ರಶ್ನೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿದನು?

  • ಆ ಸಹೋದರನು ಕಲಿಸಿದ ವಿಧದಿಂದ ನಾವು ಇನ್ನೂ ಯಾವ ವಿಷಯಗಳನ್ನು ಕಲಿಯಬಹುದು?

ನಮ್ಮ ಬೋಧನೆ ಬೇರೆಯವರ ಮೇಲೆ ಯಾವ ಪರಿಣಾಮ ಬೀರುತ್ತದೆ? (ಲೂಕ 24:32)