ಎಡವಬೇಡಿ, ಎಡವಿಸಬೇಡಿ
ಎಡವುವುದು ಮತ್ತು ಎಡವಿಸುವುದು ಎಷ್ಟು ಗಂಭೀರ ಎಂದು ಯೇಸು ದೃಷ್ಟಾಂತಗಳ ಮೂಲಕ ಕಲಿಸಿದನು.
-
“ಎಡವುಗಲ್ಲು” ಅನ್ನುವುದು ಒಬ್ಬ ವ್ಯಕ್ತಿ ತಪ್ಪಾದ ವಿಷಯವನ್ನು ಮಾಡುವಂತೆ, ನೈತಿಕವಾಗಿ ಅಶುದ್ಧನಾಗುವಂತೆ ಅಥವಾ ಪಾಪ ಮಾಡುವಂತೆ ನಡೆಸುವ ಒಂದು ಕ್ರಿಯೆ ಅಥವಾ ಸನ್ನಿವೇಶಕ್ಕೆ ಸೂಚಿಸುತ್ತದೆ
-
ಬೇರೆಯವರನ್ನು ಎಡವಿಸುವವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಸಮುದ್ರಕ್ಕೆ ಎಸೆಯುವುದೇ ಒಳ್ಳೇದು
-
ಕೈ, ಕಣ್ಣಿನಂಥ ಪ್ರಾಮುಖ್ಯ ಅಂಗಗಳು ಒಂದುವೇಳೆ ಬೇರೆಯವರನ್ನು ಎಡವಿಸುತ್ತಿರುವುದಾದರೆ ಅವುಗಳನ್ನು ಕತ್ತರಿಸಿ ಬಿಸಾಡುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು
-
ಕೈ, ಕಣ್ಣಿನಷ್ಟು ಪ್ರಾಮುಖ್ಯವಾದ ವಿಷಯಗಳನ್ನು ಇಟ್ಟುಕೊಂಡು ಶಾಶ್ವತ ನಾಶನವನ್ನು ಸೂಚಿಸುವ ಗೆಹೆನ್ನಕ್ಕೆ ಹೋಗುವ ಬದಲು ಅವುಗಳು ಇಲ್ಲದೇ ದೇವರ ರಾಜ್ಯಕ್ಕೆ ಹೋಗುವುದು ಉತ್ತಮ
ನನ್ನ ಜೀವನದಲ್ಲಿ ಯಾವುದು ಎಡವುಗಲ್ಲಾಗುವ ಸಾಧ್ಯತೆ ಇದೆ? ಅದರಿಂದ ನಾನು ಮತ್ತು ಬೇರೆಯವರು ಎಡವದಂತೆ ನಾನು ಹೇಗೆ ನೋಡಿಕೊಳ್ಳಬಹುದು?