ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 12-13

ಗೋದಿ ಮತ್ತು ಕಳೆಗಳ ದೃಷ್ಟಾಂತ

ಗೋದಿ ಮತ್ತು ಕಳೆಗಳ ದೃಷ್ಟಾಂತ

ಯೇಸು ಗೋದಿ ವರ್ಗಕ್ಕೆ ಸೇರಿದ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಹೇಗೆ ಮತ್ತು ಯಾವಾಗ ಮಾನವಕುಲದಿಂದ ಬೇರ್ಪಡಿಸುವನು ಎಂದು ತೋರಿಸಲು ಅವನು ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ಉಪಯೋಗಿಸಿದನು. ಈ ಕೆಲಸ ಕ್ರಿ.ಶ. 33​ರಲ್ಲಿ ಆರಂಭವಾಯಿತು.

13:24

‘ಒಬ್ಬ ಮನುಷ್ಯ ತನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದನು’

  • ಬಿತ್ತುವವನು: ಯೇಸು ಕ್ರಿಸ್ತ

  • ಒಳ್ಳೇ ಬೀಜ ಬಿತ್ತನೆ: ಯೇಸುವಿನ ಶಿಷ್ಯರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದ್ದು

  • ಹೊಲ: ಲೋಕವೆಂಬ ಮಾನವಕುಲ

13:25

“ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು”

  • ವೈರಿ: ಸೈತಾನ

  • ಜನರು ನಿದ್ರೆಮಾಡುತ್ತಿದ್ದ ಸಮಯ: ಅಪೊಸ್ತಲರ ಮರಣ

13:30

“ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ”

  • ಗೋದಿ: ಅಭಿಷಿಕ್ತ ಕ್ರೈಸ್ತರು

  • ಕಳೆಗಳು: ನಕಲಿ ಕ್ರೈಸ್ತರು

‘ಮೊದಲು ಕಳೆಗಳನ್ನು ಒಟ್ಟುಗೂಡಿಸಿ, ನಂತರ ಗೋದಿಯನ್ನು ಕಣಜಕ್ಕೆ ತುಂಬಿಸಿ’

  • ಆಳುಗಳು/ಕೊಯ್ಯುವವರು: ದೇವದೂತರು

  • ಕಳೆಗಳ ಒಟ್ಟುಗೂಡಿಸುವುದು: ನಕಲಿ ಕ್ರೈಸ್ತರನ್ನು ಅಭಿಷಿಕ್ತ ಕ್ರೈಸ್ತರಿಂದ ಬೇರ್ಪಡಿಸುವುದು

  • ಕಣಜಕ್ಕೆ ತುಂಬಿಸುವುದು: ಅಭಿಷಿಕ್ತ ಕ್ರೈಸ್ತರನ್ನು ಪುನಃಸ್ಥಾಪಿಸಲಾದ ಸಭೆಯಲ್ಲಿ ಒಟ್ಟುಗೂಡಿಸುವುದು

ಕೊಯ್ಲಿನ ಕಾಲ ಆರಂಭವಾದಾಗ ಸತ್ಯ ಕ್ರೈಸ್ತರನ್ನು ಯಾವುದು ನಕಲಿ ಕ್ರೈಸ್ತರಿಂದ ಬೇರ್ಪಡಿಸಿತು?

ಈ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳುವುದರಿಂದ ನನಗೆ ಯಾವ ಪ್ರಯೋಜನವಿದೆ?