ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ತಾಳಿಕೊಂಡು ಕಾಯುತ್ತಾ ಇರಿ

ತಾಳಿಕೊಂಡು ಕಾಯುತ್ತಾ ಇರಿ

ದೇವರ ರಾಜ್ಯಕ್ಕೋಸ್ಕರ ಎಷ್ಟು ಸಮಯದಿಂದ ಕಾಯುತ್ತಾ ಇದ್ದೀರಿ? ಏನೇ ಕಷ್ಟ ಬಂದರೂ ಸಹಿಸಿಕೊಂಡು ಕಾಯುತ್ತಾ ಇದ್ದೀರಾ? (ರೋಮ 8:25) ಕೆಲವು ಕ್ರೈಸ್ತರು ದ್ವೇಷ, ಅನ್ಯಾಯ, ಸೆರೆವಾಸ ಅನುಭವಿಸುತ್ತಿದ್ದಾರೆ. ಕೆಲವರು ಪ್ರಾಣಾಪಾಯವನ್ನೂ ಎದುರಿಸಿದ್ದಾರೆ. ಇನ್ನು ಕೆಲವರು ಗಂಭೀರ ಕಾಯಿಲೆ ಅಥವಾ ವಯಸ್ಸಾಗುತ್ತಾ ಇರುವುದರಿಂದ ಬರುವ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದಾರೆ.

ಏನೇ ಕಷ್ಟ ಬಂದರೂ ಸಹಿಸಿಕೊಂಡು ಕಾಯುತ್ತಾ ಇರಲು ಯಾವುದು ಸಹಾಯ ಮಾಡುತ್ತದೆ? ಪ್ರತಿ ದಿನ ಬೈಬಲ್‌ ಓದಿ ಧ್ಯಾನಿಸಿ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ನಿರೀಕ್ಷೆಯ ಮೇಲೆ ಗಮನ ಇಡಬೇಕು. (2ಕೊರಿಂ 4:16-18; ಇಬ್ರಿ 12:2) ಯೆಹೋವನ ಹತ್ತಿರ ಯಾಚಿಸಬೇಕು, ಪವಿತ್ರಾತ್ಮ ಕೊಡುವಂತೆ ಬೇಡಿಕೊಳ್ಳಬೇಕು. (ಲೂಕ 11:10, 13; ಇಬ್ರಿ 5:7) ಆಗ ‘ಆನಂದದಿಂದ ತಾಳಿಕೊಳ್ಳಲು’ ನಮ್ಮ ಪ್ರೀತಿಯ ತಂದೆ ಸಹಾಯ ಮಾಡುತ್ತಾನೆ.—ಕೊಲೊ 1:11.

ನಾವು ‘ತಾಳ್ಮೆಯಿಂದ ಓಡಬೇಕು’—ಬಹುಮಾನ ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯಿಂದ ಎಂಬ ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಜೀವನದಲ್ಲಿ ಅನಿರೀಕ್ಷಿತವಾಗಿ ಏನು ನಡೆಯಬಹುದು? (ಪ್ರಸಂ 9:11)

  • ಕಷ್ಟಗಳು ಬಂದಾಗ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ?

  • ಮುಂಚಿನಷ್ಟು ಯೆಹೋವನ ಸೇವೆ ಮಾಡಲು ಆಗದಿದ್ದರೂ ನಮ್ಮಿಂದ ಎಷ್ಟು ಆಗುತ್ತೋ ಅಷ್ಟನ್ನು ಮಾಡುವುದರ ಮೇಲೆ ಯಾಕೆ ಗಮನ ಇಡಬೇಕು?

  • ಬಹುಮಾನದ ಮೇಲೆ ನಿಮ್ಮ ಗಮನ ಇರಲಿ

    ಬಹುಮಾನ ಗೆದ್ದೇ ಗೆಲ್ಲುತ್ತೇವೆ ಅಂತ ಭರವಸೆಯಿಂದ ಇರಲು ಯಾವುದು ಸಹಾಯ ಮಾಡುತ್ತದೆ?