ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ರೋಮನ್ನರಿಗೆ 9-11

ಆಲೀವ್‌ ಮರದ ದೃಷ್ಟಾಂತ

ಆಲೀವ್‌ ಮರದ ದೃಷ್ಟಾಂತ

11:16-26

ಸಾಂಕೇತಿಕ ಆಲೀವ್‌ ಮರದ ಭಾಗಗಳು ಏನನ್ನು ಸೂಚಿಸುತ್ತವೆ?

  • ಮರ: ಅಬ್ರಹಾಮನ ಒಡಂಬಡಿಕೆಯ ಮೂಲಕ ದೇವರ ಉದ್ದೇಶದ ನೆರವೇರಿಕೆ

  • ಕಾಂಡ: ಅಬ್ರಹಾಮನ ಸಂತತಿಯ ಪ್ರಧಾನ ಭಾಗವಾದ ಯೇಸು

  • ಕೊಂಬೆಗಳು: ಅಬ್ರಹಾಮನ ಸಂತತಿಯ ದ್ವಿತೀಯ ಭಾಗವಾಗಿರುವ 1,44,000 ಮಂದಿ

  • “ಮುರಿದುಹಾಕಲ್ಪಟ್ಟ” ಕೊಂಬೆಗಳು: ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರು

  • “ಕಸಿಕಟ್ಟಿದ” ಕೊಂಬೆಗಳು: ಅನ್ಯಜನಾಂಗಗಳ ಆತ್ಮಾಭಿಷಿಕ್ತ ಕ್ರೈಸ್ತರು

ಪ್ರವಾದನೆಗೆ ಅನುಸಾರ, ಅಬ್ರಹಾಮನ ಸಂತತಿ ಅಂದರೆ ಯೇಸು ಮತ್ತು 1,44,000 ಮಂದಿಯ ಮೂಲಕ “ಅನ್ಯಜನಾಂಗಗಳ ಜನರಿಗೆ” ಆಶೀರ್ವಾದ ಸಿಗುತ್ತದೆ.—ರೋಮ 11:12; ಆದಿ 22:18

ಅಬ್ರಹಾಮನ ಸಂತತಿಯ ಸಂಬಂಧದಲ್ಲಿ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಿದ ವಿಧದಿಂದ ಆತನ ಬಗ್ಗೆ ನಾನೇನು ಕಲಿಯಬಹುದು?