ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಎಸ್ತೇರಳು 1–5

ಎಸ್ತೇರಳು ದೇವಜನರ ಪರವಾಗಿ ನಿಂತಳು

ಎಸ್ತೇರಳು ದೇವಜನರ ಪರವಾಗಿ ನಿಂತಳು

ಎಸ್ತೇರಳು ದೇವಜನರ ಪರವಾಗಿ ಹೋರಾಡುವಾಗ ಬಲವಾದ ನಂಬಿಕೆ ಮತ್ತು ಧೈರ್ಯ ತೋರಿಸಿದಳು

  • ಅರಸನು ಕರೆಸಿದರೆ ಹೊರತು ಅವನಿರುವ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವ ಸಾಧ್ಯತೆ ಇತ್ತು. 30 ದಿನಗಳಿಂದ ಅರಸನು ಎಸ್ತೇರಳನ್ನು ಕರೆದಿರಲಿಲ್ಲ

  • ಒಂದನೇ ಸರ್ಕ್ಸೀಸ್‌ ಎಂದು ಸಹ ಕರೆಯಲಾಗಿದ್ದ ಅಹಷ್ವೇರೋಷನು ತುಂಬ ಕೋಪಿಷ್ಠನಾಗಿದ್ದನು. ಒಮ್ಮೆ ಆತನು ಇತರರಿಗೆ ಎಚ್ಚರಿಕೆ ಕೊಡಲಿಕ್ಕಾಗಿ ಒಬ್ಬ ಮನುಷ್ಯನನ್ನು ಎರಡು ತುಂಡುಗಳಾಗಿ ಕತ್ತರಿಸುವಂತೆ ಆಜ್ಞಾಪಿಸಿದನು. ವಷ್ಟಿರಾಣಿ ತನ್ನ ಮಾತನ್ನು ಕೇಳದೇ ಇದ್ದಾಗ ಅವಳನ್ನು ರಾಣಿಯ ಸ್ಥಾನದಿಂದ ತಳ್ಳಿಬಿಟ್ಟನು

  • ಎಸ್ತೇರಳು ತಾನೊಬ್ಬ ಯೆಹೂದ್ಯಳೆಂದು ಹೇಳಬೇಕಿತ್ತು ಮತ್ತು ಅರಸನು ಭರವಸೆ ಇಟ್ಟ ಸಲಹೆಗಾರನೇ ಅವನಿಗೆ ಮೋಸ ಮಾಡುತ್ತಿದ್ದಾನೆಂದು ಸ್ಪಷ್ಟಪಡಿಸಬೇಕಿತ್ತು