ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ

ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ

ಕೋರಹ, ದಾತಾನ್‌ ಮತ್ತು ಅಬೀರಾಮ ಯೆಹೋವನು ಆರಾಧನೆಗಾಗಿ ಮಾಡಿದ ಏರ್ಪಾಡಿನ ವಿರುದ್ಧ ದಂಗೆ ಎದ್ರು. ಹೀಗೆ ಯೆಹೋವನಿಗೆ ನಿಷ್ಠೆ ತೋರಿಸಲು ತಪ್ಪಿಹೋದ್ರು. ಹಾಗಾಗಿ ಯೆಹೋವನು ಆ ಮೂವರನ್ನ ಮತ್ತು ಅವರನ್ನ ಬೆಂಬಲಿಸಿದ ಎಲ್ಲರನ್ನ ನಾಶಮಾಡಿದ. (ಅರ 16:26, 27, 31-33) ಯೆಹೋವನಿಗೆ ನಿಷ್ಠೆ ತೋರಿಸೋಕೆ ನಮಗೆ ಯಾವೆಲ್ಲಾ ಸನ್ನಿವೇಶಗಳಲ್ಲಿ ಕಷ್ಟ ಆಗಬಹುದು? ನಿಷ್ಠೆ ಇಲ್ಲದ ಜನರನ್ನ ಅನುಕರಿಸದೇ ಇರೋಕೆ ಯಾವ ಬೈಬಲ್‌ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ?

ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ನಾಡಿಯಾಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವಳಿಗೆ ಸಹಾಯ ಮಾಡ್ತು?

  • ನಿರಾಶೆಗೊಂಡ ಒಬ್ಬ ಸಹೋದರನಿಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?

  • ಟೆರೆಂನ್ಸ್‌ಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?

  • ಒಬ್ಬ ಸಹೋದರನಿಗೆ ಶಾಲೆಯಲ್ಲಿ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?