ಬೈಬಲಿನಲ್ಲಿರುವ ರತ್ನಗಳು
ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ
ಕೋರಹನಲ್ಲಿ ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಇದ್ದಿದ್ರಿಂದ ಯೆಹೋವನ ಏರ್ಪಾಡಿನ ವಿರುದ್ಧ ತಿರುಗಿಬಿದ್ದ (ಅರ 16:1-3; ಕಾವಲಿನಬುರುಜು11 9/15 ಪುಟ 27 ಪ್ಯಾರ 12)
ಕೋರಹನಿಗೆ ದೇವರು ಹಲವಾರು ಸುಯೋಗಗಳನ್ನ ಕೊಟ್ಟಿದ್ದ ಮತ್ತು ಒಳ್ಳೇ ಸ್ಥಾನದಲ್ಲಿ ಇಟ್ಟಿದ್ದ. ಇಷ್ಟೆಲ್ಲ ಇದ್ರೂ ಕೋರಹನಿಗೆ ತೃಪ್ತಿ ಇರ್ಲಿಲ್ಲ (ಅರ 16:8-10; ಕಾವಲಿನಬುರುಜು11 9/15 ಪುಟ 27 ಪ್ಯಾರ 11)
ಕೋರಹನಲ್ಲಿ ತಪ್ಪಾದ ಯೋಚ್ನೆ ಇದ್ದಿದ್ರಿಂದ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿದ (ಅರ 16:32, 35)
ಯೆಹೋವನ ಸೇವೆಯಲ್ಲಿ ನಮಗೆ ಎಷ್ಟೇ ಸುಯೋಗಗಳಿದ್ರೂ ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸವನ್ನ ಬೆಳೆಸಿಕೊಳ್ಳಬಾರದು. ನಾವು ಸತ್ಯದಲ್ಲಿ ಇರೋ ವರ್ಷಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗ್ತಾ ಹೋದಂತೆ ನಮ್ಮಲ್ಲಿರೋ ದೀನತೆನೂ ಹೆಚ್ಚಾಗ್ತಾ ಹೋಗಬೇಕು.