ಮಾರ್ಚ್ 8-14
ಅರಣ್ಯಕಾಂಡ 9-10
ಗೀತೆ 26 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 9:13—ಈ ವಚನದಲ್ಲಿ ಇಸ್ರಾಯೇಲ್ಯರಿಗೆ ಕೊಟ್ಟಿರೋ ನಿರ್ದೇಶನದಿಂದ ಕ್ರೈಸ್ತರು ಯಾವ ಪಾಠ ಕಲಿಬಹುದು? (it-1-E ಪುಟ 199 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 10:17-36 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಸ್ಮರಣೆಯ ಆಮಂತ್ರಣ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸಿದ ಮೇಲೆ ಯೇಸುವಿನ ಮರಣವನ್ನು ಸ್ಮರಿಸಿ ವಿಡಿಯೋವನ್ನ ಪರಿಚಯಿಸಿ ಮತ್ತು ಚರ್ಚಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 11)
ಪುನರ್ಭೇಟಿ: (3 ನಿ.) ನೀವು ಹಿಂದೆ ಸಾಕ್ಷಿ ನೀಡಿದ್ದ ಒಬ್ಬ ಜೊತೆ ಕೆಲಸಗಾರನನ್ನ ಅಥವಾ ಸಹಪಾಠಿಯನ್ನ ಸ್ಮರಣೆಗೆ ಆಮಂತ್ರಿಸಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿ.) ಬೈಬಲ್ ಕಲಿಸುತ್ತದೆ ಪುಟ 214, ಟಿಪ್ಪಣಿ 16—ನಿಮ್ಮ ಬೈಬಲ್ ವಿದ್ಯಾರ್ಥಿಯನ್ನ ಸ್ಮರಣೆಗೆ ಆಮಂತ್ರಿಸಿ ಮತ್ತು ಅವರು ಸ್ಮರಣೆಯ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ಯಾಕೆ ಸೇವಿಸಬಾರದು ಅಂತ ವಿವರಿಸಿ. (ಪ್ರಗತಿ ಪಾಠ 17)
ನಮ್ಮ ಕ್ರೈಸ್ತ ಜೀವನ
ಸಾರುವ ಕೆಲಸವನ್ನ ಬೆಂಬಲಿಸಲು ಬೆತೆಲ್‌ನಲ್ಲಾದ ಬದಲಾವಣೆಗಳು: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: 2015 ರ ವಾರ್ಷಿಕ ಕೂಟದಲ್ಲಿ ಯಾವ ಪ್ರಕಟಣೆ ಮಾಡಲಾಯ್ತು ಮತ್ತು ಯಾವ ಎರಡು ಕಾರಣಗಳಿಗೆ ಬದಲಾವಣೆಗಳನ್ನ ಮಾಡಲಾಯ್ತು? ಬೆತೆಲಿನಲ್ಲಿ ಯಾವ ಬದಲಾವಣೆಗಳನ್ನ ಮಾಡಲಾಯ್ತು ಮತ್ತು ಅದ್ರಿಂದ ಹೇಗೆ ಸಹಾಯ ಆಗಿದೆ? ಈ ಪ್ರಕಟಣೆ, ಬ್ರಿಟನ್ ಬ್ರಾಂಚಿನ ಸ್ಥಳಾಂತರದ ಪ್ರಾಜೆಕ್ಟ್ ಮೇಲೆ ಯಾವ ಪರಿಣಾಮ ಬೀರಿತು? ಯೆಹೋವನೇ ನಮ್ಮನ್ನ ಮಾರ್ಗದರ್ಶಿಸಿ ಮುನ್ನಡೆಸ್ತಿದ್ದಾನೆ ಅಂತ ಈ ಬದಲಾವಣೆಗಳಿಂದ ಹೇಗೆ ಗೊತ್ತಾಗುತ್ತೆ?
ನಾವು ಬೆತೆಲ್‌ಗೆ ಬರಲು ಕಾರಣ ಏನು?: (5 ನಿ.) ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 6 ಪ್ಯಾರ 1-6, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 112 ಮತ್ತು ಪ್ರಾರ್ಥನೆ