ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ

ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ

ನೀವು ತುಂಬ ಸಮಯದಿಂದ ಕಷ್ಟ ಅನುಭವಿಸುತ್ತಾ ಇರೋದಾದ್ರೆ ಸಾಮಾನ್ಯವಾಗಿ ನಿಮಗೆ ನಿರುತ್ಸಾಹ ಆಗುತ್ತೆ. ದಾವೀದನಿಗೆ, ರಾಜ ಸೌಲನಿಂದ ಬರುವ ಕಷ್ಟಗಳು ಕೊನೆಯಾಗುತ್ತೆ ಮತ್ತು ಯೆಹೋವ ದೇವರು ಮಾತು ಕೊಟ್ಟ ಹಾಗೆ ರಾಜನಾಗ್ತೀನಿ ಅಂತ ಗೊತ್ತಿತ್ತು. (1ಸಮು 16:13) ದಾವೀದನಲ್ಲಿದ್ದ ನಂಬಿಕೆ ಯೆಹೋವನಿಗಾಗಿ ತಾಳ್ಮೆಯಿಂದ ಕಾಯೋಕೆ ಸಹಾಯ ಮಾಡ್ತು.

ನಾವು ಕಷ್ಟಗಳನ್ನು ಅನುಭವಿಸುವಾಗ ಆ ಸನ್ನಿವೇಶಗಳನ್ನು ಬದಲಾಯಿಸೋಕೆ ನಮ್ಮಲ್ಲಿರುವ ಜಾಣತನ, ಜ್ಞಾನ, ಯೋಚಿಸುವ ಸಾಮರ್ಥ್ಯ ಸಹಾಯ ಮಾಡಬಹುದು. (1ಸಮು 21:12-14; ಜ್ಞಾನೋ 1:4) ನಮ್ಮ ಕಷ್ಟಗಳನ್ನು ಸರಿಪಡಿಸುವಾಗ ಬೈಬಲ್‌ ತತ್ವಗಳನ್ನು ಪಾಲಿಸಿದ್ರೂ ಕೆಲವೊಮ್ಮೆ ನಮ್ಮ ಕಷ್ಟಗಳು ಹಾಗೇ ಇರುತ್ತೆ. ಇಂಥ ಸಮಯದಲ್ಲಿ ನಾವು ತಾಳ್ಮೆಯಿಂದ ಇದ್ದು ಯೆಹೋವನಿಗಾಗಿ ಕಾಯಬೇಕು. ಆತನು ಆದಷ್ಟು ಬೇಗ ನಮ್ಮ ಕಷ್ಟವನ್ನೆಲ್ಲ ತೆಗೆದುಹಾಕಿ ನಮ್ಮ “ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.” (ಪ್ರಕ 21:4) ಕೆಲವೊಮ್ಮೆ ಯೆಹೋವ ದೇವರ ಸಹಾಯದಿಂದ ಅಥವಾ ಬೇರೆ ಕಾರಣಗಳಿಂದ ನಮ್ಮ ಕಷ್ಟಗಳು ಸರಿಯಾಗಬಹುದು. ಆದ್ರೆ ಬದಲಾಗದಿರುವ ಒಂದು ವಿಷಯ ಏನಂದ್ರೆ, ಎಲ್ಲಾ ಕಷ್ಟಗಳು ಒಂದು ದಿನ ಕೊನೆಯಾಗುತ್ತೆ. ಇದು ನಮಗೆ ಸಾಂತ್ವನ ಕೊಡುತ್ತೆ.

ಒಡೆದ ಪ್ರಪಂಚದಲ್ಲೂ ಒಗ್ಗಟ್ಟಿನ ಜನ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ದಕ್ಷಿಣ ಅಮೆರಿಕದಲ್ಲಿದ್ದ ಕೆಲವು ಸಹೋದರರು ಯಾವ ಕಷ್ಟಗಳನ್ನು ಎದುರಿಸಿದ್ರು?

  • ಅವರು ತಾಳ್ಮೆ ಮತ್ತು ಪ್ರೀತಿಯನ್ನು ಹೇಗೆ ತೋರಿಸಿದ್ರು?

  • ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಅವರು ಹೇಗೆ ಗಮನ ಕೊಡ್ತಾ ಇದ್ರು?—ಫಿಲಿ 1:10