ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಹೆಚ್ಚು ಖುಷಿ ಕಂಡುಕೊಳ್ಳಿ

ಯೆಹೋವ ದೇವರ ಸ್ನೇಹಿತರಾಗಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

ಯೆಹೋವ ದೇವರ ಸ್ನೇಹಿತರಾಗಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

ತನ್ನನ್ನು ಪ್ರೀತಿಯಿಂದ ಆರಾಧಿಸಬೇಕು ಅಂತ ಯೆಹೋವ ದೇವರು ಇಷ್ಟಪಡುತ್ತಾರೆ. (ಮತ್ತಾ 22:37, 38) ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವ ದೇವರ ಜೊತೆ ಬಲವಾದ ಬಂಧ ಇದ್ರೆ ಬದಲಾವಣೆ ಮಾಡೋಕೆ, ಯಾವುದೇ ಸಮಸ್ಯೆ ಬಂದ್ರೂ ಎದುರಿಸೋಕೆ ಆಗುತ್ತೆ. (1ಯೋಹಾ 5:3) ಅವರಿಗೆ ದೇವರ ಮೇಲೆ ಪ್ರೀತಿ ಇರೋದ್ರಿಂದ ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ತಾರೆ.

ಯೆಹೋವ ದೇವರು ಅವರನ್ನು ಎಷ್ಟು ಪ್ರೀತಿಸ್ತಾರೆ ಅಂತ ತಿಳಿಯಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ: “ಇದ್ರಿಂದ ಯೆಹೋವ ದೇವರ ಬಗ್ಗೆ ಏನು ಕಲಿತಿರಿ? ಯೆಹೋವ ದೇವರು ನಿಮ್ಮನ್ನು ಪ್ರೀತಿಸುತ್ತಾರೆ ಅಂತ ಹೇಗೆ ಗೊತ್ತಾಗುತ್ತೆ?” ಅಷ್ಟೇ ಅಲ್ಲ, ಯೆಹೋವ ದೇವರು ಅವರಿಗಾಗಿ ಏನೆಲ್ಲ ಮಾಡ್ತಿದ್ದಾರೆ ಅಂತ ತಿಳಿಯೋಕೆ ಸಹಾಯ ಮಾಡಿ. (2ಪೂರ್ವ 16:9) ನಿಮ್ಮ ಪ್ರಾರ್ಥನೆಗೆ ಯೆಹೋವ ಹೇಗೆ ಉತ್ತರ ಕೊಟ್ರು ಅಂತ ಅವರಿಗೆ ತಿಳಿಸಿ. ಅವರ ಪ್ರಾರ್ಥನೆಗೂ ಹೇಗೆ ಉತ್ತರ ಸಿಗ್ತು ಅಂತ ಯೋಚಿಸೋಕೆ ಪ್ರೋತ್ಸಾಹಿಸಿ. ವಿದ್ಯಾರ್ಥಿಗಳು ಯೆಹೋವನ ಸ್ನೇಹಿತರಾಗಿ ಸತ್ಯದಲ್ಲಿ ನಡೆಯುತ್ತಾ ಇರುವುದನ್ನು ನೋಡುವಾಗ ನಮಗೆ ತುಂಬ ಖುಷಿಯಾಗುತ್ತೆ.

ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ . . . ಯೆಹೋವ ದೇವ್ರ ಸ್ನೇಹಿತರಾಗಲು ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ಜಾಸ್ಮಿನ್‌ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಿದಳು?

  • ನೀತಾ ಜಾಸ್ಮಿನಿಗೆ ಹೇಗೆಲ್ಲಾ ಸಹಾಯ ಮಾಡಿದರು?

  • ಆ ಸಮಸ್ಯೆಗಳನ್ನು ಜಾಸ್ಮಿನ್‌ ಹೇಗೆ ನಿಭಾಯಿಸಿದಳು?