ಬೈಬಲಿನಲ್ಲಿರುವ ನಿಧಿ
ಯೋಚಿಸದೆ ನಡ್ಕೊಳ್ತೀರಾ?
ದಾವೀದನ ಬೇಡಿಕೆಯನ್ನು ಅವಮಾನಿಸಲಾಯಿತು (1ಸಮು 25:7-11; ಅನುಕರಿಸಿ ಪುಟ 89 ಪ್ಯಾರ 10-12)
ನಾಬಾಲನ ಮನೆಯಲ್ಲಿರುವ ಎಲ್ಲಾ ಗಂಡಸರನ್ನು ಕೊಲ್ಲಬೇಕು ಅಂತ ದಾವೀದ ಯೋಚಿಸದೆ ತೀರ್ಮಾನಿಸಿದ (1ಸಮು 25:13, 21, 22)
ದಾವೀದನ ಮೇಲೆ ರಕ್ತಾಪರಾಧ ಬರದ ಹಾಗೆ ಅಬೀಗೈಲ್ ತಡೆದಳು (1ಸಮು 25:25, 26, 32, 33; ಅನುಕರಿಸಿ ಪುಟ 92 ಪ್ಯಾರ 18)
ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಕೋಪ ಬಂದಾಗ, ನಾನು ವಸ್ತುಗಳನ್ನು ಖರೀದಿಸುವಾಗ ಅಥವಾ ನನಗೆ ನಿರುತ್ಸಾಹ ಆದಾಗ ನಾನು ಯೋಚಿಸದೆ ನಡೆದುಕೊಳ್ತೀನಾ? ಅಥವಾ ಅದಕ್ಕೂ ಮುಂಚೆ ಯೋಚ್ನೆ ಮಾಡ್ತೀನಾ?’—ಜ್ಞಾನೋ 15:28; 22:3.