ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಹೆಚ್ಚು ಖುಷಿ ಕಂಡುಕೊಳ್ಳಿ

ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ

ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ

ನೈತಿಕವಾಗಿ ಯಾರು ಶುದ್ಧರಾಗಿರುತ್ತಾರೋ ಅವರಿಗೆ ಮಾತ್ರ ಯೆಹೋವನ ಜೊತೆ ಒಳ್ಳೆ ಸ್ನೇಹ ಸಂಬಂಧ ಬೆಳೆಸಿಕೊಳ್ಳಲು ಸಾಧ್ಯ! (1ಪೇತ್ರ 1:14-16) ಬೈಬಲ್‌ ವಿದ್ಯಾರ್ಥಿಗಳು ದುಶ್ಚಟಗಳನ್ನು ಬಿಡೋದಾದರೆ ಅವರ ಕುಟುಂಬ ಸಂತೋಷವಾಗಿರುತ್ತೆ, ಒಳ್ಳೆ ಆರೋಗ್ಯ ಇರುತ್ತೆ ಮತ್ತು ಆರ್ಥಿಕ ಪ್ರಯೋಜನಗಳೂ ಆಗುತ್ತೆ.

ಯೆಹೋವ ದೇವರು ಇಟ್ಟಿರುವ ನೀತಿ-ನಿಯಮಗಳು, ಅದನ್ನು ಕೊಟ್ಟಿರೋದಕ್ಕೆ ಇರೋ ಕಾರಣಗಳು ಮತ್ತು ಅದನ್ನು ಪಾಲಿಸುವಾಗ ಸಿಗುವ ಪ್ರಯೋಜನಗಳ ಬಗ್ಗೆ ಹೇಳಿಕೊಡಿ. ಯೆಹೋವ ದೇವರಿಗೆ ಇಷ್ಟವಾಗಿರೋದನ್ನು ಯೋಚಿಸಿ ತಿಳಿಯೋಕೆ ಅವರಿಗೆ ಸಹಾಯ ಮಾಡಿ. (ಎಫೆ 4:22-24) ಯೆಹೋವ ದೇವರ ಸಹಾಯದಿಂದ ದುಶ್ಚಟ ಬಿಡೋಕೆ ಆಗುತ್ತೆ ಅಂತ ಅವರಿಗೆ ಮನವರಿಕೆ ಮಾಡಿಸಿ. (ಫಿಲಿ 4:13) ತಪ್ಪು ಮಾಡುವ ಪ್ರೇರಣೆ ಬಂದಾಗ ಯೆಹೋವನಿಗೆ ಅಂಗಲಾಚಿ ಬೇಡಿಕೊಳ್ಳಲು ಕಲಿಸಿ. ತಪ್ಪು ಮಾಡುವ ಸನ್ನಿವೇಶವನ್ನು ಗುರುತಿಸಿ ಅದರಿಂದ ದೂರ ಇರೋಕೆ ಸಹಾಯ ಮಾಡಿ. ದುಶ್ಚಟಗಳಿಗೆ ಬದಲು, ಪ್ರಯೋಜನ ಆಗೋ ಕೆಲವು ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಲು ಪ್ರೋತ್ಸಾಹಿಸಿ. ಯೆಹೋವನ ಸಹಾಯದಿಂದ ಬೈಬಲ್‌ ವಿದ್ಯಾರ್ಥಿಗಳು ಬದಲಾವಣೆ ಮಾಡೋದನ್ನು ನೋಡಿ ನಮಗೆ ತುಂಬ ಖುಷಿಯಾಗುತ್ತೆ.

ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡಿ . . . ದುಶ್ಚಟ ಬಿಡಲು ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ಹಿರಿಯರು ಮತ್ತು ನೀತಾ, ಜಾಸ್ಮಿನ್‌ ಮೇಲೆ ಹೇಗೆ ನಂಬಿಕೆ ತೋರಿಸಿದರು?

  • ಜಾಸ್ಮಿನಿಗೆ ನೀತಾ ಇನ್ನೂ ಯಾವೆಲ್ಲ ಸಹಾಯ ಮಾಡಿದರು?

  • ಜಾಸ್ಮಿನ್‌ ಯೆಹೋವ ದೇವರಿಂದ ಹೇಗೆ ಸಹಾಯ ಪಡೆದಳು?