ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 1-7

ಕೀರ್ತನೆ 23-25

ಏಪ್ರಿಲ್‌ 1-7

ಗೀತೆ 22 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಯೆಹೋವ ನನ್ನ ಕುರುಬ”

(10 ನಿ.)

ಯೆಹೋವ ಮುಂದೆ ನಿಂತು ನಮ್ಮನ್ನ ನಡೆಸ್ತಾನೆ (ಕೀರ್ತ 23:1-3; ಕಾವಲಿನಬುರುಜು11-E 5/1 ಪುಟ 31 ಪ್ಯಾರ 3)

ಯೆಹೋವ ನಮ್ಮನ್ನ ಕಾಪಾಡ್ತಾನೆ (ಕೀರ್ತ 23:4; ಕಾವಲಿನಬುರುಜು11-E 5/1 ಪುಟ 31 ಪ್ಯಾರ 4)

ಯೆಹೋವ ನಮ್ಮನ್ನ ನೋಡ್ಕೊಳ್ತಾನೆ (ಕೀರ್ತ 23:5; ಕಾವಲಿನಬುರುಜು11-E 5/1 ಪುಟ 31 ಪ್ಯಾರ 5)

ಒಬ್ಬ ಪ್ರೀತಿಯ ಕುರುಬ ತನ್ನ ಕುರಿಗಳನ್ನ ಚೆನ್ನಾಗಿ ನೋಡ್ಕೊಳ್ಳೋ ತರ ಯೆಹೋವ ನಮ್ಮನ್ನೂ ನೋಡ್ಕೊಳ್ತಾನೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಯೆಹೋವ ನನ್ನನ್ನ ಹೇಗೆಲ್ಲಾ ನೋಡ್ಕೊಂಡಿದ್ದಾನೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಪರಿಸರ ಹಾಳಾಗೋದನ್ನ ನೋಡಿ ಬೇಜಾರಾಗ್ತಿದೆ ಅಂತ ಹೇಳೋ ವ್ಯಕ್ತಿ ಹತ್ರ ಒಂದು ಬೈಬಲ್‌ ವಚನ ತೋರಿಸಿ ಮಾತಾಡಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನ ತಗೊಂಡ ಒಬ್ಬ ವ್ಯಕ್ತಿಗೆ ಬೈಬಲ್‌ ಸ್ಟಡಿ ಹೇಗಿರುತ್ತೆ ಅಂತ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 3)

6. ಶಿಷ್ಯರಾಗೋಕೆ ಕಲಿಸಿ

ನಮ್ಮ ಕ್ರೈಸ್ತ ಜೀವನ

ಗೀತೆ 65

7. ಅಪರಿಚಿತರ ಸ್ವರವನ್ನ ನಾವು ಕೇಳಿಸ್ಕೊಳ್ಳಲ್ಲ

(15 ನಿ.) ಚರ್ಚೆ.

ಕುರಿಗಳಿಗೆ ತಮ್ಮ ಕುರುಬನ ಧ್ವನಿ ಚೆನ್ನಾಗಿ ಗೊತ್ತಿರುತ್ತೆ. ಅವು ಅವನ ಮಾತು ಕೇಳ್ತವೆ, ಅವನ ಹಿಂದೆನೇ ಹೋಗ್ತವೆ. ಬೇರೆ ಯಾರು ಕರೆದ್ರೂ ಅವ್ರ ಹಿಂದೆ ಹೋಗಲ್ಲ, ಅವ್ರಿಂದ ದೂರ ಓಡಿ ಹೋಗ್ತವೆ. (ಯೋಹಾ 10:5) ಅದೇ ತರ ನಾವೂ ನಮ್ಮನ್ನ ಪ್ರೀತಿಸೋ ಕುರುಬರಾದ ಯೆಹೋವ ಮತ್ತು ಯೇಸು ಮಾತನ್ನ ಕೇಳ್ತೀವಿ, ಅವ್ರನ್ನ ಪೂರ್ತಿಯಾಗಿ ನಂಬ್ತೀವಿ. (ಕೀರ್ತ 23:1; ಯೋಹಾ 10:11) ಆದ್ರೆ ನಮ್ಮ ನಂಬಿಕೆನ ಹಾಳು ಮಾಡೋಕೆ ಕೆಲವರು “ಸುಳ್ಳು” ಹೇಳ್ತಾರೆ. ಅವ್ರ ಮಾತನ್ನ ನಾವು ಕೇಳಲ್ಲ.—2ಪೇತ್ರ 2:1, 3.

ಭೂಮಿ ಮೇಲೆ ಮೊದಲನೇ ಸಲ ಅಪರಿಚಿತನ ಸ್ವರ ಕೇಳಿಬಂದಿದ್ದು ಯಾವಾಗ ಅಂತ ಆದಿಕಾಂಡ 3ನೇ ಅಧ್ಯಾಯದಲ್ಲಿದೆ. ಅಲ್ಲಿ ಸೈತಾನ ಹಾವನ್ನ ಬಳಸ್ಕೊಂಡು ಹವ್ವಳ ಹತ್ರ ಮಾತಾಡಿದ. ತಾನು ಯಾರು ಅಂತ ಅವಳಿಗೆ ಗೊತ್ತಾಗಬಾರದು ಅಂತ ಹಾಗೆ ಮಾಡಿದ. ಅವಳ ಮೇಲೆ ತನಗೆ ಕಾಳಜಿ ಇದೆ ಅನ್ನೋ ತರ ನಾಟಕ ಮಾಡಿದ. ಯೆಹೋವ ದೇವರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ. ಹವ್ವ ಅದನ್ನ ನಂಬಿಬಿಟ್ಟಳು. ಇದ್ರಿಂದ ಅವಳೂ, ಅವಳ ಕುಟುಂಬದವರೂ ತುಂಬ ಕಷ್ಟ ಅನುಭವಿಸಬೇಕಾಯ್ತು.

ಇವತ್ತೂ ಕೂಡ ಸೈತಾನ ಯೆಹೋವ ಮತ್ತು ಆತನ ಸಂಘಟನೆ ಮೇಲೆ ಸಂಶಯ ಬರೋ ಹಾಗೆ ಸುಳ್ಳು ಸುದ್ದಿಗಳನ್ನ, ತಪ್ಪು ಮಾಹಿತಿಗಳನ್ನ, ಅರ್ಧ ಸತ್ಯಗಳನ್ನ ಹಬ್ಬಿಸ್ತಿದ್ದಾನೆ. ಇದು ಅಪರಿಚಿತರ ಸ್ವರ ತರ ಇದೆ. ಹಾಗಾಗಿ ಇಂಥ ಸುದ್ದಿಗಳಿಂದ ನಾವು ಓಡಿಹೋಗಬೇಕು! ಕೆಲವೊಂದು ಸಲ ನಮಗೆ ‘ಏನಿದು ನೋಡೋಣ’ ಅಂತ ಅನಿಸಬಹುದು. ಆದ್ರೆ ಸೈತಾನ ಹವ್ವಳನ್ನ ದಾರಿ ತಪ್ಪಿಸೋಕೆ ಜಾಸ್ತಿ ಏನೂ ಮಾತಾಡ್ಲಿಲ್ಲ ಅನ್ನೋದನ್ನ ನೆನಪಿಡಿ. ಹಾಗಾಗಿ ಸ್ವಲ್ಪ ಕೇಳಿಸ್ಕೊಳ್ಳೋದು ಕೂಡ ನಮಗೆ ಅಪಾಯನೇ. (ಆದಿ 3:1, 4, 5) ಆದ್ರೆ ಒಂದುವೇಳೆ ನಮ್ಮನ್ನ ತುಂಬ ಪ್ರೀತಿಸೋ, ಕಾಳಜಿ ತೋರಿಸೋ ವ್ಯಕ್ತಿ ನಮ್ಮ ಹತ್ರ ಯೆಹೋವನ ಸಂಘಟನೆ ಬಗ್ಗೆ ತಪ್ಪಾದ ಸುದ್ದಿ ಹೇಳೋಕೆ ಬಂದ್ರೆ ನಾವೇನು ಮಾಡಬೇಕು?

‘ಅಪರಿಚಿತರ ಸ್ವರದಿಂದ’ ದೂರ ಇರಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಜಾಸ್ಮಿನ್‌ನಿಂದ ನಾವೇನು ಕಲಿತೀವಿ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 33 ಮತ್ತು ಪ್ರಾರ್ಥನೆ