ಏಪ್ರಿಲ್ 29–ಮೇ 5
ಕೀರ್ತನೆ 34-35
ಗೀತೆ 9 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ‘ಯಾವಾಗ್ಲೂ ಯೆಹೋವನನ್ನ ಹೊಗಳಿ’
(10 ನಿ.)
ಕಷ್ಟಗಳಿದ್ರೂ ದಾವೀದ ಯೆಹೋವನನ್ನ ಹೊಗಳ್ತಿದ್ದ (ಕೀರ್ತ 34:1; ಕಾವಲಿನಬುರುಜು07 3/1 ಪುಟ 24 ಪ್ಯಾರ 11)
ಅವನು ತನ್ನ ಬಗ್ಗೆ ಕೊಚ್ಕೊಳ್ಳದೆ ಯೆಹೋವನನ್ನ ಹೊಗಳಿದ (ಕೀರ್ತ 34:2-4; ಕಾವಲಿನಬುರುಜು07 3/1 ಪುಟ 25 ಪ್ಯಾರ 13)
ಅವನು ಯೆಹೋವನನ್ನ ಹೊಗಳಿದ್ದಕ್ಕೆ ಅವನ ಜೊತೆ ಇದ್ದವ್ರಿಗೂ ಬಲ ಸಿಕ್ತು (ಕೀರ್ತ 34:5; ಕಾವಲಿನಬುರುಜು07 3/1 ಪುಟ 26 ಪ್ಯಾರ 15)
ದಾವೀದ ಅಬೀಮೆಲೆಕನನ್ನ ಬಿಟ್ಟು ಹೊದ್ಮೇಲೆ ಕಾಡಲ್ಲಿದ್ದ. ಆಗ ಸೌಲನಿಂದ ಬೇಜಾರಾದ 400 ಗಂಡಸ್ರು ಅವನ ಜೊತೆ ಸೇರ್ಕೊಂಡ್ರು. (1ಸಮು 22:1, 2) ದಾವೀದ 34ನೇ ಕೀರ್ತನೆಯನ್ನ ಬರಿಯುವಾಗ ಈ ಗಂಡಸ್ರ ಬಗ್ಗೇನೇ ಅವನು ಯೋಚಿಸಿರಬಹುದು.
ನಿಮ್ಮನ್ನೇ ಕೇಳ್ಕೊಳ್ಳಿ, ‘ಮುಂದಿನ ಸಲ ನಾನು ಕೂಟದಲ್ಲಿ ಬೇರೆಯವ್ರ ಜೊತೆ ಮಾತಾಡುವಾಗ ಯೆಹೋವನನ್ನ ಹೇಗೆ ಹೊಗಳಬಹುದು?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಕೀರ್ತ 35:19—“ನನ್ನನ್ನ ದ್ವೇಷಿಸೋರು ನನ್ನನ್ನ ನೋಡಿ ದುರುದ್ದೇಶದಿಂದ ಕಣ್ಣು ಮಿಟುಕಿಸೋಕೆ ಬಿಡಬೇಡ” ಅಂತ ದಾವೀದ ಹೇಳಿದ್ರ ಅರ್ಥ ಏನು? (ಕಾವಲಿನಬುರುಜು06 5/15 ಪುಟ 20 ಪ್ಯಾರ 2)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 34:1-22 (ಪ್ರಗತಿ ಪಾಠ 5)
4. ಸಂಭಾಷಣೆ ಶುರುಮಾಡಿ
(2 ನಿ.) ಅನೌಪಚಾರಿಕ ಸಾಕ್ಷಿ: ನೀವು ಸಾಕ್ಷಿ ಕೊಡೋಕೆ ಮುಂಚೆನೇ ಸಂಭಾಷಣೆ ನಿಂತುಹೋಗುತ್ತೆ. (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ: (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್ 4)
6. ನಿಮ್ಮ ನಂಬಿಕೆ ಬಗ್ಗೆ ಹೇಳಿ
(5 ನಿ.) ಅಭಿನಯ. ijwfq ಲೇಖನ 59—ವಿಷ್ಯ: ಯೆಹೋವನ ಸಾಕ್ಷಿಗಳು ಯಾವ ಹಬ್ಬ ಮಾಡಬೇಕೆಂದು ಹೇಗೆ ತೀರ್ಮಾನ ಮಾಡುತ್ತಾರೆ? (ಪ್ರಗತಿ ಪಾಠ 17)
ಗೀತೆ 104
7. ಕೂಟಗಳಲ್ಲಿ ಯೆಹೋವನನ್ನ ಹೊಗಳೋ ಮೂರು ವಿಧಗಳು
(15 ನಿ.) ಚರ್ಚೆ.
ಯೆಹೋವನನ್ನ ಹೊಗಳೋಕೆ ಕೂಟಗಳಲ್ಲಿ ನಮಗೆ ಅವಕಾಶಗಳು ಸಿಗುತ್ತೆ. ಅಂಥ ಮೂರು ಅವಕಾಶಗಳ ಬಗ್ಗೆ ಈಗ ನೋಡೋಣ.
ಮಾತಾಡುವಾಗ: ನೀವು ಬೇರೆಯವ್ರ ಹತ್ರ ಮಾತಾಡುವಾಗ ಯೆಹೋವ ಮಾಡಿರೋ ಒಳ್ಳೇ ವಿಷ್ಯಗಳ ಬಗ್ಗೆ ಹೇಳಿ. (ಕೀರ್ತ 145:1, 7) ನಿಮಗೆ ಪ್ರಯೋಜನ ಆಗಿರೋ ಯಾವುದಾದ್ರೂ ವಿಷ್ಯ ಓದಿದ್ದೀರಾ ಅಥವಾ ಕೇಳಸ್ಕೊಂಡಿದ್ದೀರಾ? ಸೇವೆಯಲ್ಲಿ ನಿಮಗೆ ಯಾವುದಾದ್ರೂ ಒಳ್ಳೇ ಅನುಭವ ಸಿಕ್ಕಿದ್ಯಾ? ಬೇರೆಯವ್ರಿಂದ ನಿಮಗೆ ಪ್ರೋತ್ಸಾಹ ಸಿಕ್ಕಿದ್ಯಾ? ಯೆಹೋವ ಮಾಡಿರೋ ಯಾವುದಾದ್ರೂ ಸೃಷ್ಟಿಯನ್ನ ನೋಡಿ ನಿಮಗೆ ಆಶ್ಚರ್ಯ ಆಗಿದ್ಯಾ? ಇಂಥ ವಿಷ್ಯಗಳ ಬಗ್ಗೆ ಕೂಟಕ್ಕೆ ಬಂದಾಗ ಮಾತಾಡಿ. ಯಾಕಂದ್ರೆ ಇವೆಲ್ಲ ಯೆಹೋವ ನಮಗಾಗಿ ಕೊಟ್ಟಿರೋ ಗಿಫ್ಟ್‌ಗಳು. (ಯಾಕೋ 1:17) ಹಾಗಾಗಿ ಕೂಟಗಳಿಗೆ ಬೇಗ ಬನ್ನಿ. ಆಗ ಯೆಹೋವನನ್ನ ಹೊಗಳೋಕೆ ಆಗುತ್ತೆ.
ಉತ್ರ ಹೇಳುವಾಗ: ಕೂಟದಲ್ಲಿ ಒಂದು ಉತ್ರನಾದ್ರೂ ಹೇಳೋಕೆ ಪ್ರಯತ್ನಿಸಿ. (ಕೀರ್ತ 26:12) ಪ್ರಶ್ನೆಗೆ ನೇರವಾದ ಉತ್ರ ಕೊಡಬಹುದು, ಬೇರೆ ಪಾಯಿಂಟ್‌ಗಳಿದ್ರೆ ಹೇಳಬಹುದು, ವಚನ ಬಳಸಿ ಹೇಳಬಹುದು, ಚಿತ್ರದ ಬಗ್ಗೆ ಮತ್ತು ನಾವು ಹೇಗೆ ಅನ್ವಯಿಸಬಹುದು ಅಂತ ಹೇಳಬಹುದು. ಬೇರೆಯವರೂ ಕೈ ಎತ್ತೋದ್ರಿಂದ ಜಾಸ್ತಿ ಉತ್ರಗಳನ್ನ ತಯಾರಿಸಿ. ಅಷ್ಟೇ ಅಲ್ಲ 30 ಸೆಕೆಂಡು ಅಥವಾ ಅದ್ರ ಒಳಗೆ ಉತ್ರ ಕೊಟ್ರೆ “ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ” ಬೇರೆಯವರೂ ಕೋಡೋಕೆ ಅವಕಾಶ ಸಿಗುತ್ತೆ.—ಇಬ್ರಿ 13:15.
ಹಾಡುವಾಗ: ಸಂತೋಷದಿಂದ ಗೀತೆಗಳನ್ನ ಹಾಡಿ. (ಕೀರ್ತ 147:1) ಕೆಲವೊಮ್ಮೆ ನಿಮಗೆ ಕೂಟಗಳಲ್ಲಿ ಉತ್ರ ಸಿಗದೇ ಇರಬಹುದು. ಅದ್ರಲ್ಲೂ ಜಾಸ್ತಿ ಜನ ಸಭೆಯಲ್ಲಿದ್ರೆ ಸಿಗ್ಲಿಕ್ಕಿಲ್ಲ, ಆದ್ರೆ ಎಲ್ರಿಗೂ ಹಾಡೋಕೆ ಅವಕಾಶ ಸಿಕ್ಕೇ ಸಿಗುತ್ತೆ. ನಿಮಗೆ ಚೆನ್ನಾಗಿ ಹಾಡೋಕೆ ಬರದೇ ಇರಬಹುದು, ಆದ್ರೂ ನೀವು ಮನಸ್ಸಾರೆ ಹಾಡುವಾಗ ಯೆಹೋವನನ್ನ ಖುಷಿಪಡಿಸ್ತೀರ! (2ಕೊರಿಂ 8:12) ಅದಕ್ಕೆ ನೀವು ಚೆನ್ನಾಗಿ ಹಾಡೋಕೆ ಮನೆಯಲ್ಲೇ ಪ್ರ್ಯಾಕ್ಚೀಸ್ ಮಾಡಬಹುದು.
ನಮ್ಮ ಇತಿಹಾಸ ಸಾಗುತ್ತಿದೆ—ಹಾಡೆಂಬ ಉಡುಗೊರೆ, ಭಾಗ 1 ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಯೆಹೋವನಿಗೆ ಹಾಡಿ ಹೊಗಳೋದ್ರ ಬಗ್ಗೆ ಈ ವಿಡಿಯೋದಿಂದ ನೀವೇನು ಕಲಿತ್ರಿ?
8. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 9ರ ಪ್ಯಾರ 1-7, ವಿಭಾಗ 3ರ ಪರಿಚಯ ಮತ್ತು ಪುಟ 70ರಲ್ಲಿರೋ ಚೌಕ