ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 8-14

ಕೀರ್ತನೆ 26-28

ಏಪ್ರಿಲ್‌ 8-14

ಗೀತೆ 29 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ನೀತಿಯಿಂದ ನಡೆಯೋಕೆ ದಾವೀದ ಏನು ಮಾಡಿದ?

(10 ನಿ.)

ಒಳ್ಳೇ ವ್ಯಕ್ತಿಯಾಗೋಕೆ ಸಹಾಯ ಮಾಡು ಅಂತ ದಾವೀದ ಯೆಹೋವನ ಹತ್ರ ಕೇಳ್ಕೊಂಡ (ಕೀರ್ತ 26:1, 2; ಕಾವಲಿನಬುರುಜು04 12/1 ಪುಟ 14 ಪ್ಯಾರ 8-9)

ದಾವೀದ ಕೆಟ್ಟವ್ರ ಸಹವಾಸ ಮಾಡ್ಲಿಲ್ಲ (ಕೀರ್ತ 26:4, 5; ಕಾವಲಿನಬುರುಜು04 12/1 ಪುಟ 15 ಪ್ಯಾರ 12-13)

ಯೆಹೋವನನ್ನ ಆರಾಧಿಸೋದಂದ್ರೆ ಅವನಿಗೆ ತುಂಬ ಇಷ್ಟ ಆಗಿತ್ತು (ಕೀರ್ತ 26:8; ಕಾವಲಿನಬುರುಜು04 12/1 ಪುಟ 16 ಪ್ಯಾರ 17-18)


ದಾವೀದ ತಪ್ಪುಗಳನ್ನ ಮಾಡಿದ್ರೂ “ಪೂರ್ಣ ಹೃದಯದಿಂದ ಮತ್ತು ನೀತಿಯಿಂದ” ನಡೆದ. (1ಅರ 9:4) ದಾವೀದ ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸಿದ್ರಿಂದಾನೇ ಅವನು ಎಷ್ಟು ನೀತಿವಂತ ಆಗಿದ್ದ ಅಂತ ಎಲ್ರಿಗೂ ಗೊತ್ತಾಯ್ತು.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಮನೆ-ಮನೆ ಸೇವೆ: ಬೋಧನಾ ಸಾಧನದಿಂದ ಒಂದು ಕರಪತ್ರ ಬಳಸಿ. (ಪ್ರಗತಿ ಪಾಠ 3)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ನೀವು ಕಳೆದ ಸಲ ಕೊಟ್ಟ ಕರಪತ್ರದ ಹಿಂದೆ ಇರೋ ಪ್ರಶ್ನೆ ಬಗ್ಗೆ ಚರ್ಚಿಸಿ. jw.org ವೆಬ್‌ಸೈಟ್‌ ತೋರಿಸಿ ಅಲ್ಲಿ ಏನೆಲ್ಲಾ ಇದೆ ಅಂತ ತಿಳಿಸಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 3)

6. ಭಾಷಣ

(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 3—ವಿಷ್ಯ: ಇಡೀ ಭೂಮಿ ಸುಂದರ ಪರದೈಸ್‌ ಆಗುತ್ತೆ. (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

ಗೀತೆ 135

7. ನಿಯತ್ತಿಂದ ನಡ್ಕೊಳ್ಳೋ ಯುವಜನ್ರು

(15 ನಿ.) ಚರ್ಚೆ.

ಯುವಜನ್ರು ಯೆಹೋವನಿಗೆ ನಿಯತ್ತಿಂದ ನಡ್ಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಾರೆ. ಆದ್ರೆ ಅಪರಿಪೂರ್ಣತೆಯಿಂದ ಮತ್ತು ಯೌವನದಲ್ಲಿ ಬರೋ ತೀವ್ರ ಲೈಂಗಿಕ ಆಸೆಗಳಿಂದ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಕೆಲವೊಮ್ಮೆ ಕಷ್ಟ ಆಗಬಹುದು. (ರೋಮ 7:21; 1ಕೊರಿಂ 7:36) ಲೈಂಗಿಕ ಸಂಬಂಧ ಇಟ್ಕೊಳ್ಳೋಕೆ ಅಥವಾ ಸಲಿಂಗಕಾಮಿಗಳಾಗೋಕೆ ಜನ್ರು ಒತ್ತಾಯ ಮಾಡುವಾಗ ಅದನ್ನೂ ಯುವಜನ್ರು ಎದುರಿಸಬೇಕು. (ಎಫೆ 2:2) ಎಷ್ಟೇ ಕಷ್ಟ ಆದ್ರೂ ನಿಯತ್ತಿಂದ ನಡ್ಕೊಳ್ಳೋಕೆ, ಯೆಹೋವನ ಮನಸ್ಸನ್ನ ಖುಷಿ ಪಡಿಸೋಕೆ ಅವರು ಮಾಡೋ ಪ್ರಯತ್ನ ನೋಡುವಾಗ ನಮಗೆ ತುಂಬ ಹೆಮ್ಮೆ ಅನಿಸುತ್ತೆ.

ನನ್ನ ಹದಿವಯಸ್ಸಿನ ಜೀವನ—ಮದುವೆಗೆ ಮುಂಚೆ ಸೆಕ್ಸ್‌ ಮಾಡುವ ಒತ್ತಡನಾ ಹೇಗೆ ಎದುರಿಸಬಹುದು? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಕೊರಿ ಮತ್ತು ಕ್ಯಾಮರಿನ್‌ಗೆ ಯಾವ ಒತ್ತಡ ಬಂತು?

  • ನಿಯತ್ತಿಂದ ನಡ್ಕೊಳ್ಳೋಕೆ ಅವ್ರಿಗೆ ಯಾವುದು ಸಹಾಯ ಮಾಡ್ತು?

  • ಇಂಥ ಒತ್ತಡವನ್ನ ಎದುರಿಸೋಕೆ ನಿಮಗೆ ಯಾವ ಬೈಬಲ್‌ ತತ್ವ ಸಹಾಯ ಮಾಡುತ್ತೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 60 ಮತ್ತು ಪ್ರಾರ್ಥನೆ