ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 4-10

ಕೀರ್ತನೆ 16-17

ಮಾರ್ಚ್‌ 4-10

ಗೀತೆ 75 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಯೆಹೋವನೇ, ಎಲ್ಲ ಒಳ್ಳೇ ವಿಷ್ಯಗಳು ನಿನ್ನಿಂದಾನೇ ಬರುತ್ತೆ”

(10 ನಿ.)

ಯೆಹೋವನ ಸೇವೆ ಮಾಡುವವ್ರ ಜೊತೆ ಸ್ನೇಹ ಬೆಳೆಸ್ಕೊಂಡ್ರೆ ಖುಷಿಯಾಗಿ ಇರ್ತೀವಿ (ಕೀರ್ತ 16:2, 3; ಕಾವಲಿನಬುರುಜು18.12 ಪುಟ 26 ಪ್ಯಾರ 11)

ಯೆಹೋವನ ಜೊತೆ ನಮಗೆ ಒಳ್ಳೇ ಸಂಬಂಧ ಇದ್ರೆ ಜೀವನದಲ್ಲಿ ಖುಷಿಯಾಗಿ ಇರ್ತೀವಿ (ಕೀರ್ತ 16:5, 6; ಕಾವಲಿನಬುರುಜು14 2/15 ಪುಟ 29 ಪ್ಯಾರ 4)

ಯೆಹೋವ ನಮ್ಮನ್ನ ಯಾವಾಗ್ಲೂ ಕಾಪಾಡೋದ್ರಿಂದ ನಾವು ಯಾವುದಕ್ಕೂ ಭಯಪಡಲ್ಲ (ಕೀರ್ತ 16:8, 9; ಕಾವಲಿನಬುರುಜು08 2/15 ಪುಟ 3 ಪ್ಯಾರ 2-3)

ಎಲ್ಲ ಒಳ್ಳೇ ವಿಷ್ಯಗಳು ಯೆಹೋವನಿಂದಾನೇ ಬರುತ್ತೆ. ಹಾಗಾಗಿ ಆತನನ್ನ ನಾವು ಆರಾಧಿಸ್ತಾ ಇದ್ರೆ ದಾವೀದನ ತರ ನಮ್ಮ ಜೀವನನೂ ಚೆನ್ನಾಗಿರುತ್ತೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಸತ್ಯಕ್ಕೆ ಬರೋ ಮುಂಚೆ ನನ್ನ ಜೀವನ ಹೇಗಿತ್ತು? ಈಗ ಹೇಗಿದೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 17:8—“ನಿನ್ನ ಕಣ್ಣಗುಡ್ಡೆ” ಅಂತ ಈ ವಚನದಲ್ಲಿ ಹೇಳಿರೋದ್ರ ಅರ್ಥ ಏನು? (it-2-E ಪುಟ 714)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(1 ನಿ.) ಮನೆ-ಮನೆ ಸೇವೆ: ಸ್ಮರಣೆಯ ಆಮಂತ್ರಣ ಪತ್ರ ಕೊಡಿ. (ಪ್ರಗತಿ ಪಾಠ 11)

5. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಸ್ಮರಣೆಯ ಆಮಂತ್ರಣ ಪತ್ರ ಕೊಡಿ. ಮನೆಯವರು ಆಸಕ್ತಿ ತೋರಿಸಿದ್ರೆ ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ತೋರಿಸಿ, ಚರ್ಚಿಸಿ. (ಪ್ರಗತಿ ಪಾಠ 9)

6. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ: ಸ್ಮರಣೆಯ ಆಮಂತ್ರಣ ಪತ್ರ ಕೊಡಿ. (ಪ್ರಗತಿ ಪಾಠ 2)

7. ಶಿಷ್ಯರಾಗೋಕೆ ಕಲಿಸಿ

ನಮ್ಮ ಕ್ರೈಸ್ತ ಜೀವನ

ಗೀತೆ 148

8. ಸ್ಮರಣೆಗೆ ನಾವು ಈಗ್ಲೇ ಹೇಗೆ ತಯಾರಾಗಬಹುದು?

(15 ನಿ.) ಚರ್ಚೆ.

ಯೇಸು ಹೇಳಿದ ಹಾಗೆ ನಾವು ಆತನ ಮರಣದ ಸ್ಮರಣೆಯನ್ನ ಮಾರ್ಚ್‌ 24, ಭಾನುವಾರ ಮಾಡ್ತೀವಿ. ಆ ದಿನ ನಾವು ಯೆಹೋವ ಮತ್ತು ಯೇಸು ತೋರಿಸಿದ ಪ್ರೀತಿಯನ್ನ ನೆನಪಿಸ್ಕೊಳ್ತೀವಿ. (ಲೂಕ 22:19; ಯೋಹಾ 3:16; 15:13) ಈ ವಿಶೇಷ ಕಾರ್ಯಕ್ರಮಕ್ಕೆ ನಾವು ಹೇಗೆ ತಯಾರಾಗಬಹುದು?

  • ವಿಶೇಷ ಭಾಷಣಕ್ಕೆ ಮತ್ತು ಸ್ಮರಣೆಗೆ ಜನ್ರನ್ನ ಕರೆಯೋಕೆ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ. ನೀವು ಯಾರನ್ನೆಲ್ಲ ಕರೀಬೇಕು ಅಂತಿದ್ದೀರೋ ಅವ್ರ ಹೆಸ್ರನ್ನ ಬರೆದಿಟ್ಟು, ಅವ್ರನ್ನ ಆಮಂತ್ರಿಸಿ. ಒಂದುವೇಳೆ ಅವರು ತುಂಬ ದೂರದಲ್ಲಿ ಇರೋದಾದ್ರೆ jw.orgನಲ್ಲಿ ಅವ್ರಿಗೆ ಹತ್ರ ಆಗೋ ಕೂಟ ಎಲ್ಲಿ ನಡಿಯುತ್ತೆ, ಎಷ್ಟೊತ್ತಿಗೆ ನಡಿಯುತ್ತೆ ಅಂತ ತಿಳಿಸಿದೆ. ಅದನ್ನ ನೋಡೋಕೆ ಅವ್ರಿಗೆ ಹೇಳಿ

  • ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಸೇವೆ ಜಾಸ್ತಿ ಮಾಡಿ. 15 ಅಥವಾ 30 ತಾಸಿನ ಸಹಾಯಕ ಪಯನೀಯರ್‌ ಸೇವೆ ಮಾಡೋಕೆ ಆಗುತ್ತಾ ಅಂತ ನೋಡಿ

  • ಪುಟ 6-7ರಲ್ಲಿರೋ “2024ರ ಸ್ಮರಣೆಯ ಬೈಬಲ್‌ ಓದುವಿಕೆ ಶೆಡ್ಯೂಲ್‌” ನೋಡಿ. ಇದ್ರಲ್ಲಿ ಯೇಸು ಭೂಮಿ ಮೇಲಿದ್ದ ಕೊನೇ ವಾರದಲ್ಲಿ ಯಾವೆಲ್ಲಾ ಘಟನೆಗಳು ನಡಿತು ಅಂತ ಇದೆ. ಇದನ್ನ ನೀವು ಮಾರ್ಚ್‌ 18ರಿಂದ ಓದೋಕೆ ಶುರುಮಾಡಿ. ನೀವು ಪ್ರತಿದಿನ ಎಷ್ಟೆಷ್ಟು ಓದಬೇಕು ಅಂತ ತೀರ್ಮಾನ ಮಾಡಿ

  • ಸ್ಮರಣೆಯ ದಿನ jw.orgನಲ್ಲಿ ವಿಶೇಷ ಮಾರ್ನಿಂಗ್‌ ವರ್ಷಿಪ್‌ ವಿಡಿಯೋ ನೋಡಿ

  • ಹೊಸಬರು ಮತ್ತು ನಿಷ್ಕ್ರಿಯರು ಸ್ಮರಣೆಗೆ ಬಂದಾಗ ಅವ್ರನ್ನ ಪ್ರೀತಿಯಿಂದ ಸ್ವಾಗತಿಸಿ. ಅವರು ಕೇಳೋ ಪ್ರಶ್ನೆಗಳಿಗೆ ಉತ್ರ ಕೊಡೋಕೆ ರೆಡಿಯಾಗಿರಿ. ಅವ್ರಿಗೆ ಸಹಾಯ ಮಾಡೋಕೆ ಮತ್ತೆ ಭೇಟಿಮಾಡಿ

  • ಸ್ಮರಣೆಯ ಮುಂಚೆ ಮತ್ತು ಸ್ಮರಣೆ ಮುಗಿದ ಮೇಲೆ ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ

ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಸ್ಮರಣೆಯ ಅಭಿಯಾನದಲ್ಲಿ ಜನ್ರನ್ನ ಆಮಂತ್ರಿಸೋಕೆ ಈ ವಿಡಿಯೋ ಹೇಗೆ ಸಹಾಯ ಮಾಡುತ್ತೆ?

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 137 ಮತ್ತು ಪ್ರಾರ್ಥನೆ