ಏಪ್ರಿಲ್ 28–ಮೇ 4
ಜ್ಞಾನೋಕ್ತಿ 11
ಗೀತೆ 154 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಹೇಳಬೇಡಿ!
(10 ನಿ.)
ನಿಮ್ಮ ‘ನೆರೆಯವನಿಗೆ’ ತೊಂದ್ರೆ ಆಗೋ ಯಾವುದನ್ನೂ ಹೇಳಬೇಡಿ (ಜ್ಞಾನೋ 11:9, ಪಾದಟಿಪ್ಪಣಿ; w02 5/15 26 ¶4)
ಒಗ್ಗಟ್ಟನ್ನ ಹಾಳು ಮಾಡುವ ಮಾತುಗಳನ್ನ ಹೇಳಬೇಡಿ (ಜ್ಞಾನೋ 11:11; w02 5/15 27 ¶3-4)
ಗುಟ್ಟಾಗಿ ಇಡಬೇಕಾದ ವಿಷ್ಯವನ್ನ ಯಾರಿಗೂ ಹೇಳಬೇಡಿ (ಜ್ಞಾನೋ 11:12, 13; w02 5/15 27 ¶6)
ನಿಮ್ಮನ್ನೇ ಕೇಳ್ಕೊಳ್ಳಿ: ಲೂಕ 6:45ರಲ್ಲಿ ಯೇಸು ಹೇಳಿರೋ ಮಾತುಗಳು ಬೇರೆಯವ್ರಿಗೆ ತೊಂದ್ರೆ ಆಗದೇ ಇರೋ ತರ ಮಾತಾಡೋಕೆ ಹೇಗೆ ಸಹಾಯ ಮಾಡುತ್ತೆ?
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಜ್ಞಾನೋ 11:17—ದಯೆ ತೋರಿಸೋದ್ರಿಂದ ನಮಗೇ ಒಳ್ಳೇದಾಗುತ್ತೆ, ಹೇಗೆ? (g20.1 11, ಚೌಕ)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 11:1-20 (th ಪಾಠ 5)
4. ಸಂಭಾಷಣೆ ಶುರುಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಅವಕಾಶ ನೋಡಿ ಇತ್ತೀಚೆಗೆ ನೀವು ಕೂಟದಲ್ಲಿ ಕಲಿತ ಒಂದು ವಿಷ್ಯನಾ ಹೇಳಿ. (lmd ಪಾಠ 2 ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಬೋಧನಾ ಸಾಧನದಿಂದ ಒಂದು ವಿಡಿಯೋ ತೋರಿಸಿ. (lmd ಪಾಠ 8 ಪಾಯಿಂಟ್ 3)
6. ಶಿಷ್ಯರಾಗೋಕೆ ಕಲಿಸಿ
(4 ನಿ.) ಸಾರ್ವಜನಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ, ಅದನ್ನ ಹೇಗೆ ಮಾಡೋದು ಅಂತ ತೋರಿಸಿ. (lmd ಪಾಠ 10 ಪಾಯಿಂಟ್ 3)
ಗೀತೆ 157
7. ನಿಮ್ಮ ನಾಲಿಗೆಯನ್ನ ಶಾಂತಿ ಹಾಳು ಮಾಡೋಕೆ ಬಿಡಬೇಡಿ
(15 ನಿ.) ಚರ್ಚೆ.
ನಾವೆಲ್ಲರೂ ಅಪರಿಪೂರ್ಣರಾಗಿರೋದ್ರಿಂದ ಮಾತಲ್ಲಿ ಎಡವಿ ಬೀಳ್ತೀವಿ. (ಯಾಕೋ 3:8) ನಾವು ಯಾವ ವಿಷ್ಯದಲ್ಲಿ ತಪ್ಪಾಗಿ ಮಾತಾಡಿಬಿಡ್ತೀವಿ ಅಂತ ಯೋಚ್ನೆ ಮಾಡಿದ್ರೆ ಬೇರೆವ್ರಿಗೆ ನೋವಾಗೋ ತರ ಮಾತಾಡಿ ಆಮೇಲೆ ‘ಅಯ್ಯೋ ಹೀಗೆ ಹೇಳಿಬಿಟ್ನಲ್ಲಾ’ ಅಂತ ಬೇಜಾರು ಪಡೋ ಪರಿಸ್ಥಿತಿ ಬರಲ್ಲ. ಈ ಮುಂದಿನ ಕೆಲವು ಮಾತುಗಳು ಸಭೆಯ ಶಾಂತಿಯನ್ನ ಹಾಳು ಮಾಡ್ತವೆ:
-
ಜಂಬದ ಮಾತು. ಜಂಬ ಕೊಚ್ಕೊಳ್ಳೋರು ಯಾವಾಗ್ಲೂ ತಮ್ಮ ಬಗ್ಗೆನೇ ಹೊಗಳ್ಕೊತಾರೆ. ಇದ್ರಿಂದ ಪೈಪೋಟಿ, ದ್ವೇಷ ಬೆಳೆಯುತ್ತೆ.—ಜ್ಞಾನೋ 27:2
-
ಅಪ್ರಾಮಾಣಿಕ ಮಾತು. ಅಪ್ರಾಮಾಣಿಕ ಮಾತಿನಲ್ಲಿ ಬರೀ ಸುಳ್ಳು ಹೇಳೋದಷ್ಟೇ ಅಲ್ಲ, ಬೇಕು ಬೇಕಂತ ಬೇರೆಯವರನ್ನ ತಪ್ಪು ದಾರಿಗೆ ನಡೆಸೋದು ಸೇರಿದೆ. ನಾವು ಒಂದು ಚಿಕ್ಕ ವಿಷ್ಯದಲ್ಲಿ ಅಪ್ರಾಮಾಣಿಕವಾಗಿ ಮಾತಾಡಿದ್ರೂ ಇದ್ರಿಂದ ನಮ್ಮ ಹೆಸ್ರು ಹಾಳಾಗುತ್ತೆ, ಬೇರೆವ್ರ ನಂಬಿಕೆನೂ ಕಳ್ಕೊತೀವಿ.—ಪ್ರಸಂ 10:1
-
ಹರಟೆ ಮಾತು. ಬೇರೆಯವರ ಬಗ್ಗೆ ಮತ್ತು ಅವರ ಜೀವನದಲ್ಲಿ ಏನು ನಡೀತಿದೆ ಅನ್ನೋದ್ರ ಬಗ್ಗೆ ತಪ್ಪು ತಪ್ಪಾಗಿ ಮಾತಾಡೋದು, ಅವರ ವೈಯಕ್ತಿಕ ವಿಷ್ಯಗಳನ್ನ ಡಂಗೂರ ಸಾರಿಕೊಂಡು ಬರೋದೇ ಹರಟೆ ಮಾತು. (1ತಿಮೊ 5:13) ಇಂಥಾ ಮಾತಿಂದ ಜಗಳ ಆಗುತ್ತೆ ಮತ್ತು ಒಗ್ಗಟ್ಟು ಹಾಳಾಗುತ್ತೆ.
-
ಕೋಪದಿಂದ ಆಡೋ ಮಾತು. ಯಾರು ನಮಗೆ ಬೇಜಾರು ಮಾಡಿದ್ದಾರೋ ಅವ್ರ ಬಗ್ಗೆ ಕೆಂಡ ಕಾರುತ್ತಾ ಕೋಪದಿಂದ ಮಾತಾಡೋದು ಇದ್ರಲ್ಲಿ ಸೇರಿದೆ. (ಎಫೆ 4:26) ಇದ್ರಿಂದ ತುಂಬಾ ನೋವಾಗುತ್ತೆ.—ಜ್ಞಾನೋ 29:22
“ಶಾಂತಿಯನ್ನು ಹಾಳು ಮಾಡುವ ವಿಷಯಗಳಿಂದ ‘ದೂರ ಇರಿ’”—ತುಣುಕು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
-
ನಾವು ಹುಷಾರಾಗಿ ಮಾತಾಡಿಲ್ಲ ಅಂದ್ರೆ ಹೇಗೆ ಸಭೆಯ ಶಾಂತಿ ಹಾಳಾಗುತ್ತೆ?
ಶಾಂತಿಯಿಂದ ಇರೋಕೆ ಹೇಗೆ ಸಹಾಯ ಆಯ್ತು ಅಂತ ತಿಳ್ಕೊಳ್ಳೋಕೆ “ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ” ಅನ್ನೋ ವಿಡಿಯೋ ನೋಡಿ.
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 25 ¶14-21