ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 17-23

ಜ್ಞಾನೋಕ್ತಿ 5

ಮಾರ್ಚ್‌ 17-23

ಗೀತೆ 79 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಲೈಂಗಿಕ ಅನೈತಿಕತೆಯಿಂದ ದೂರ ಇರಿ

(10 ನಿ.)

ಲೈಂಗಿಕ ಅನೈತಿಕತೆ ಅನ್ನೋ ಬಲೆಗೆ ನಾವು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳಬಹುದು (ಜ್ಞಾನೋ 5:3; w00 7/15 29 ¶1)

ಲೈಂಗಿಕ ಅನೈತಿಕತೆಯ ಬಲೆಗೆ ಬಿದ್ದರೆ ನೋವು ಮತ್ತು ಬೇಸರ ಕಟ್ಟಿಟ್ಟ ಬುತ್ತಿ (ಜ್ಞಾನೋ 5:4, 5; w00 7/15 29 ¶2)

ಲೈಂಗಿಕ ಅನೈತಿಕತೆಯಿಂದ ದೂರ ಇರಿ (ಜ್ಞಾನೋ 5:8; w00 7/15 29 ¶5)

ಒಬ್ಬ ಸಹೋದರಿ ತನ್ನ ಮೊಬೈಲ್‌ ನಂಬರನ್ನ ಒಬ್ಬ ಹುಡುಗನಿಗೆ ಕೊಡಲ್ಲ ಅಂತ ಹೇಳ್ತಿದ್ದಾಳೆ

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 5:9—ಲೈಂಗಿಕ ಅನೈತಿಕತೆ ನಿಮಗಿರೋ ‘ಒಳ್ಳೇ ಹೆಸರನ್ನ ಹೇಗೆ ಹಾಳು ಮಾಡುತ್ತೆ?’ (w00 7/15 29 ¶7)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ. ಕ್ರೈಸ್ತರಲ್ಲದವರಿಗೆ ಸ್ಮರಣೆಯ ಆಮಂತ್ರಣ ಪತ್ರ ಕೊಡಿ, ಆ ವ್ಯಕ್ತಿ ಇರೋ ಕಡೆ ಸ್ಮರಣೆ ಕಾರ್ಯಕ್ರಮ ಎಲ್ಲಿ ನಡಿಯುತ್ತೆ ಅಂತ jw.orgನಲ್ಲಿ ಹುಡುಕಿ ಅವ್ರಿಗೆ ಹೇಳಿ. (lmd ಪಾಠ 6 ಪಾಯಿಂಟ್‌ 4)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ಹೋದ ಸಲ ಹೋದಾಗ ಮನೆಯವನು ಸ್ಮರಣೆಯ ಆಮಂತ್ರಣ ಪತ್ರವನ್ನ ತಗೊಂಡು ತನಗೆ ಆಸಕ್ತಿ ಇದೆ ಅಂತ ಹೇಳಿದ್ದಾನೆ. (lmd ಪಾಠ 9 ಪಾಯಿಂಟ್‌ 5)

6. ಶಿಷ್ಯರಾಗೋಕೆ ಕಲಿಸಿ

(5 ನಿ.) lff ಪಾಠ 16 ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ. ‘ಯೇಸುಗೆ ಮದುವೆ ಆಗಿತ್ತಾ’ ಅಂತ ವಿದ್ಯಾರ್ಥಿ ಕೇಳಿದಾಗ ಅದ್ರ ಬಗ್ಗೆ ಹೇಗೆ ಸಂಶೋಧನೆ ಮಾಡೋದು ಅಂತ ತೋರಿಸಿ. (lmd ಪಾಠ 11 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 114

7. ಡೇಟಿಂಗ್‌ ಮಾಡುವಾಗ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಏನು ಮಾಡಬೇಕು?

(15 ನಿ.) ಚರ್ಚೆ.

“ಒಬ್ಬ ಹುಡುಗ ಹುಡುಗಿ ಇಷ್ಟಪಟ್ಟು ಒಬ್ಬರನ್ನೊಬ್ಬರು ಚೆನ್ನಾಗಿ ತಿಳ್ಕೊಳ್ಳೋಕೆ ಕಳೆಯೋ ಸಮಯನೇ ಡೇಟಿಂಗ್‌.” ಅವ್ರು ಡೇಟಿಂಗ್‌ ಮಾಡ್ತಿರೋದ್ರ ಬಗ್ಗೆ ಬೇರೆವ್ರಿಗೆ ಹೇಳಬಹುದು ಅಥವಾ ಹೇಳದೇನೂ ಇರಬಹುದು. ಇದನ್ನ ಎಲ್ಲರೂ ಇರೋವಾಗ ಮಾಡಬಹುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇಬ್ಬರೇ ಇರೋವಾಗ್ಲೂ ಮಾಡಬಹುದು. ಡೇಟಿಂಗನ್ನ ನೇರವಾಗಿ, ಫೋನಲ್ಲಿ ಅಥವಾ ಮೆಸೆಜ್‌ ಮಾಡ್ತಾನೂ ಮಾಡಬಹುದು. ಕ್ರೈಸ್ತರಾದ ನಾವು ಡೇಟಿಂಗನ್ನ ಮನರಂಜನೆಗಾಗಿ ಅಲ್ಲ, ಮದ್ವೆಗೆ ಮುಂಚೆ ಒಬ್ಬರನ್ನೊಬ್ಬರು ತಿಳ್ಕೊಳ್ಳೋಕೆ ಮಾಡ್ತೀವಿ. ಇದು ಮದ್ವೆ ಮಾಡ್ಕೊಳ್ಳೋಕೆ ಇಷ್ಟ ಇರೋರು ತಗೊಬೇಕಾದ ಮುಖ್ಯವಾದ ಹೆಜ್ಜೆ. ಡೇಟಿಂಗ್‌ ಮಾಡೋರು ಯುವಕರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಲೈಂಗಿಕ ಅನೈತಿಕತೆಯ ಬಲೆಗೆ ಬೀಳದೇ ಇರೋಕೆ ಯಾವ ವಿಷ್ಯಗಳಲ್ಲಿ ಹುಷಾರಾಗಿ ಇರ್ಬೇಕು?—ಜ್ಞಾನೋ 22:3.

ಮದುವೆ ಜೀವನಕ್ಕಾಗಿ ತಯಾರಿ—ಭಾಗ 1: ನಾನೀಗ ಡೇಟಿಂಗ್‌ ಮಾಡಬಹುದಾ?—ತುಣುಕು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಒಬ್ಬ ವ್ಯಕ್ತಿ ಮದುವೆ ಮಾಡ್ಕೊಳ್ಳೋಕೆ ರೆಡಿ ಇದ್ದರೆ ಮಾತ್ರ ಡೇಟಿಂಗ್‌ ಮಾಡಬೇಕು ಯಾಕೆ? (ಜ್ಞಾನೋ 13:12; ಲೂಕ 14:28-30)

  • ಡೇಟಿಂಗ್‌ ವಿಷ್ಯದಲ್ಲಿ ಅಪ್ಪ ಅಮ್ಮ ತಮ್ಮ ಮಗಳಿಗೆ ಸಹಾಯ ಮಾಡಿದ್ರಲ್ಲಿ ನಿಮಗೇನು ಇಷ್ಟ ಆಯ್ತು?

ಜ್ಞಾನೋಕ್ತಿ 28:26 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಲೈಂಗಿಕ ಅನೈತಿಕತೆಗೆ ನಡೆಸೋ ಸನ್ನಿವೇಶ ಬರದೇ ಇರೋ ತರ ಹುಡುಗ ಹುಡುಗಿ ಯಾವ ಎಚ್ಚರಿಕೆಗಳನ್ನ ತಗೊಬೇಕು?

  • ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸೋಕೆ ಕೈ ಹಿಡ್ಕೊಳ್ಳೋದು, ಮುತ್ತು ಕೊಡೋದು ಈ ವಿಚಾರದಲ್ಲಿ ಹುಡುಗ ಹುಡುಗಿ ಏನು ಮಾಡಬಾರದು ಅಂತ ಮೊದಲೇ ಮಾತಾಡ್ಕೊಳ್ಳೋದು ಯಾಕೆ ಒಳ್ಳೇದು?

ಎಫೆಸ 5:3, 4 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಫೋನ್‌ನಲ್ಲಿ ಮಾತಾಡೋವಾಗ ಅಥವಾ ಆನ್‌ಲೈನ್‌ನಲ್ಲಿ ಮಾತಾಡೋವಾಗ ಹುಡುಗ ಹುಡುಗಿ ಏನನ್ನ ಮನಸ್ಸಲ್ಲಿ ಇಟ್ಕೊಬೇಕು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 38 ಮತ್ತು ಪ್ರಾರ್ಥನೆ