ಮಾರ್ಚ್ 3-9
ಜ್ಞಾನೋಕ್ತಿ 3
ಗೀತೆ 118 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಯೆಹೋವನ ಮೇಲೆ ನಂಬಿಕೆ ಇಡಿ
(10 ನಿ.)
ನಿಮ್ಮ ಮೇಲಲ್ಲ, ಯೆಹೋವನ ಮೇಲೆ ನಂಬಿಕೆ ಇಡಿ (ಜ್ಞಾನೋ 3:5; ijwbv-E ಲೇಖನ 14 ¶4-5)
ಯೆಹೋವನ ಮಾರ್ಗದರ್ಶನೆ ಕೇಳಿ ಅದನ್ನ ಪಾಲಿಸೋ ಮೂಲಕ ಆತನ ಮೇಲೆ ನಂಬಿಕೆ ಇದೆ ಅಂತ ತೋರಿಸಿ (ಜ್ಞಾನೋ 3:6; ijwbv-E ಲೇಖನ 14 ¶6-7)
ನಿಮಗೇ ಎಲ್ಲಾ ಗೊತ್ತು ಅಂತ ಅಂದ್ಕೊಳ್ಳಬೇಡಿ (ಜ್ಞಾನೋ 3:7; be 77 ¶5)
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಏನೇ ಮಾಡಿದ್ರೂ ಎಲ್ಲಾ ವಿಷ್ಯಗಳಲ್ಲಿ ಯೆಹೋವನ ಮಾರ್ಗದರ್ಶನೆಯನ್ನ ಕೇಳ್ತೀನಾ?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಜ್ಞಾನೋ 3:3—ಶಾಶ್ವತ ಪ್ರೀತಿ ಮತ್ತು ಸತ್ಯವನ್ನ ಕೊರಳಿಗೆ ಕಟ್ಕೊಳ್ಳೋದು ಮತ್ತು ಹೃದಯದ ಹಲಗೆ ಮೇಲೆ ಬರೆದುಕೊಳ್ಳೋದು ಅಂದ್ರೇನು? (w06 10/1 4 ¶4)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 3:1-18 (th ಪಾಠ 12)
4. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಏನು ಮಾಡಬೇಕು ಅಂತ ತೋರಿಸಿ. (lmd ಪಾಠ 1 ಪಾಯಿಂಟ್ 5)
5. ಸಂಭಾಷಣೆ ಶುರುಮಾಡಿ
(4 ನಿ.) ಸಾರ್ವಜನಿಕ ಸಾಕ್ಷಿ. jw.org ಬಗ್ಗೆ ಹೇಳಿ ಮತ್ತು ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (lmd ಪಾಠ 3 ಪಾಯಿಂಟ್ 3)
6. ಭಾಷಣ
(5 ನಿ.) w11 3/15 14 ¶7-10—ವಿಷ್ಯ: ಜನ ಆಸಕ್ತಿ ತೋರಿಸದೇ ಇದ್ದಾಗ ದೇವರ ಮೇಲೆ ನಂಬಿಕೆ ಇಡಿ. (th ಪಾಠ 20)
ಗೀತೆ 156
7. ಸಂಘಟನೆಯ ಮೇಲೆ ನಂಬಿಕೆ ತೋರಿಸಿ
(15 ನಿ.) ಚರ್ಚೆ.
ಬೈಬಲಿಂದ ನಮಗೆ ಮಾರ್ಗದರ್ಶನೆ ಸಿಕ್ಕಾಗ ನಾವು ಹಿಂದೆ ಮುಂದೆ ನೋಡದೇ ಅದನ್ನ ನಂಬ್ತೀವಿ. ಆದ್ರೆ ಸಂಘಟನೆಯನ್ನ ಮುನ್ನಡೆಸ್ತಿರೋ ಅಪರಿಪೂರ್ಣ ವ್ಯಕ್ತಿಗಳು ಮಾರ್ಗದರ್ಶನೆ ಕೊಟ್ಟಾಗ ಅದರಲ್ಲೂ ಆ ಮಾರ್ಗದರ್ಶನೆ ಅರ್ಥ ಆಗದೇ ಇದ್ದಾಗ ಅಥವಾ ಇಷ್ಟ ಆಗದೇ ಇದ್ದಾಗ ನಂಬಿಕೆ ತೋರಿಸೋಕೆ ತುಂಬಾ ಕಷ್ಟ ಪಡ್ತೀವಿ.
ಮಲಾಕಿ 2:7 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
-
ಯೆಹೋವ ಅಪರಿಪೂರ್ಣ ವ್ಯಕ್ತಿಗಳನ್ನ ಬಳಸಿ ತನ್ನ ಜನರನ್ನ ಮುನ್ನಡೆಸೋದನ್ನ ನೋಡುವಾಗ ನಾವು ಯಾಕೆ ಆಶ್ಚರ್ಯ ಪಡಬಾರದು?
ಮತ್ತಾಯ 24:45 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
-
ಯೆಹೋವನ ಸಂಘಟನೆಯಿಂದ ಬರೋ ಮಾರ್ಗದರ್ಶನೆಯನ್ನ ನಾವು ಯಾಕೆ ನಂಬಬೇಕು?
ಇಬ್ರಿಯ 13:17 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
-
ಯೆಹೋವ ಯಾರನ್ನ ನಂಬಿ ತನ್ನ ಸಂಘಟನೆಯನ್ನ ಮುನ್ನಡೆಸೋಕೆ ನೇಮಿಸಿದ್ದಾನೋ ಅವ್ರ ಮಾರ್ಗದರ್ಶನೆಯನ್ನ ನಾವು ಯಾಕೆ ಕೇಳಬೇಕು?
2021 ಆಡಳಿತ ಮಂಡಲಿ ಅಪ್ಡೇಟ್ #9—ತುಣುಕು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
-
ಕೋವಿಡ್ ಸಮಯದಲ್ಲಿ ಸಿಕ್ಕ ನಿರ್ದೇಶನದಿಂದ ಯೆಹೋವನ ಸಂಘಟನೆ ಮೇಲೆ ನಿಮ್ಮ ನಂಬಿಕೆ ಹೇಗೆ ಜಾಸ್ತಿ ಆಯ್ತು?
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 23 ¶9-15, ಪುಟ 184, 186ರಲ್ಲಿರೋ ಚೌಕಗಳು