ನಮ್ಮ ಕ್ರೈಸ್ತ ಜೀವನ
ಪ್ರತಿದಿನ ಬೈಬಲ್ ಓದಿ, ವಿವೇಕಕ್ಕಾಗಿ ಹುಡುಕಿ
ದೇವರಿಂದ ಸಿಗೋ ವಿವೇಕ, ಬಚ್ಚಿಟ್ಟಿರೋ ನಿಧಿ ತರ. ಸರಿಯಾಗಿ ಯೋಚಿಸೋಕೆ ಮತ್ತು ಒಳ್ಳೇ ನಿರ್ಣಯ ಮಾಡೋಕೆ ಅದು ನಮಗೆ ಸಹಾಯ ಮಾಡುತ್ತೆ. (ಜ್ಞಾನೋ 2:1-6) ಅಷ್ಟೇ ಅಲ್ಲ, ಇದು ನಮ್ಮನ್ನ ಕಾಪಾಡುತ್ತೆ. ಹಾಗಾಗಿ ವಿವೇಕ “ತುಂಬಾ ಮುಖ್ಯ.” (ಜ್ಞಾನೋ 4:5-7) ದೇವರ ವಾಕ್ಯದಲ್ಲಿರೋ ನಿಧಿಯನ್ನ ಪಡೆಯಬೇಕಾದ್ರೆ “ಹಗಲುರಾತ್ರಿ” ಅಂದ್ರೆ ಪ್ರತಿದಿನ ದೇವರ ವಾಕ್ಯವನ್ನ ಓದೋಕೆ ಶ್ರಮ ಹಾಕಬೇಕು. (ಯೆಹೋ 1:8) ಹೀಗೆ ಮಾಡಕ್ಕೆ ನಿಮಗೆ ಯಾವುದು ಸಹಾಯ ಮಾಡುತ್ತೆ ಅಂತ ಬರೆದಿಡಿ.
ಬೈಬಲನ್ನು ಪ್ರೀತಿಸುವ ಯುವಜನರು ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಬೈಬಲನ್ನ ಪ್ರತಿದಿನ ಓದೋಕೆ ಈ ಯುವಜನರಿಗೆ ಯಾಕೆ ಕಷ್ಟ ಆಯ್ತು? ಅವರಿಗೆ ಯಾವುದು ಸಹಾಯ ಮಾಡಿತು?
-
ಮೆಲಾನಿ
-
ಸ್ಯಾಮ್ವೇಲ್
-
ಸೆಲೀನ್
-
ರಫಾಯೆಲೊ
ಬೈಬಲ್ ಓದಲಿಕ್ಕಾಗಿ ನನ್ನ ಶೆಡ್ಯುಲ್: