ಬೈಬಲಿನಲ್ಲಿರುವ ನಿಧಿ
ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?
ಆಸ ದೊಡ್ಡ ಸೈನ್ಯವನ್ನ ಸೋಲಿಸಲು ಯೆಹೋವನ ಮೇಲೆ ಆತುಕೊಂಡ (2ಪೂರ್ವ 14:9-12; ಕಾವಲಿನಬುರುಜು21.03 ಪುಟ 5 ಪ್ಯಾರ 12)
ನಂತರ ಒಂದು ಚಿಕ್ಕ ಸೈನ್ಯವನ್ನ ಸೋಲಿಸಲು ಸಿರಿಯದ ಸಹಾಯ ಪಡೆದ (2ಪೂರ್ವ 16:1-3; ಕಾವಲಿನಬುರುಜು21.03 ಪುಟ 5 ಪ್ಯಾರ 13)
ಆಸ ಯಾವಾಗಲೂ ಯೆಹೋವನ ಮೇಲೆ ಆತುಕೊಳ್ಳಲಿಲ್ಲ, ಅದಕ್ಕೆ ಯೆಹೋವನಿಗೆ ಕೋಪ ಬಂತು (2ಪೂರ್ವ 16:7-9)
ಜೀವನದಲ್ಲಿ ನಾವು ದೊಡ್ಡ ನಿರ್ಣಯಗಳನ್ನ ಮಾಡುವಾಗ ಯೆಹೋವನ ಮೇಲೆ ಆತುಕೊಳ್ಳುತ್ತೀವಿ. ಆದರೆ ಚಿಕ್ಕಚಿಕ್ಕ ತೀರ್ಮಾನಗಳನ್ನ ಮಾಡುವಾಗ್ಲೂ ಹಾಗೇ ಮಾಡ್ತೀವಾ? ನಾವೇನೇ ಮಾಡಿದ್ರೂ ಯೆಹೋವನ ಮೇಲೆ ಆತುಕೊಳ್ಳೋದನ್ನ ಮರೆಯಬಾರದು.—ಜ್ಞಾನೋ 3:5, 6; ಕಾವಲಿನಬುರುಜು21.03 ಪುಟ 5 ಪ್ಯಾರ 14.