ಬೈಬಲಿನಲ್ಲಿರುವ ನಿಧಿ
ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು
ರಾಜ ದಾವೀದ ಆಲಯದ ಕೆಲಸಕ್ಕಾಗಿ ಲೇವಿಯರನ್ನು ಮತ್ತು ಪುರೋಹಿತರನ್ನು ನೇಮಿಸಿದನು (1ಪೂರ್ವ 23:6, 27, 28; 24:1, 3; it-2-E ಪುಟ 241, 686)
ನಿಪುಣ ಗಾಯಕರನ್ನು ಮತ್ತು ಕಲಿಯುತ್ತಾ ಇರುವವರನ್ನು ದೇವರಿಗೆ ಹಾಡಿ ಹೊಗಳಲು ನೇಮಿಸಲಾಯಿತು (1ಪೂರ್ವ 25:1, 8; ಕಾವಲಿನಬುರುಜು94 5/1 ಪುಟ 10-11 ಪ್ಯಾರ 8)
ಲೇವಿಯರನ್ನ ಬಾಗಿಲು ಕಾಯುವ, ಖಜಾನೆಗಳನ್ನು ನೋಡಿಕೊಳ್ಳುವ ಮತ್ತು ಇತರ ಅಧಿಕಾರಿಗಳನ್ನಾಗಿ ನೇಮಿಸಲಾಯಿತು (1ಪೂರ್ವ 26:16-20; it-1-E ಪುಟ 898)
ಯೆಹೋವನು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ದೇವರು. ಹಾಗಾಗಿ ನಾವು ಆತನನ್ನು ಸಂಘಟಿತವಾಗಿ ಆರಾಧಿಸುತ್ತೇವೆ.—1ಕೊರಿಂ 14:33.
ನಿಮ್ಮನ್ನೇ ಕೇಳಿಕೊಳ್ಳಿ: ಇಂದು ಕ್ರೈಸ್ತ ಸಭೆಯಲ್ಲಿ ಯೆಹೋವನ ಆರಾಧನೆ ಹೇಗೆ ಸಂಘಟಿತವಾಗಿದೆ?