ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ವಿಪತ್ತಿನ ನಂತರ ನೆರವು ನೀಡೋದು

ವಿಪತ್ತಿನ ನಂತರ ನೆರವು ನೀಡೋದು

ನೈಸರ್ಗಿಕ ವಿಪತ್ತು ದಿನೇದಿನೇ ಹೆಚ್ಚಾಗುತ್ತಾ ಇದೆ. ವಿಪತ್ತುಗಳು ಸಂಭವಿಸಿದಾಗ ವ್ಯವಸ್ಥಿತವಾಗಿ ಪರಿಹಾರ ಕೆಲಸಗಳನ್ನ ಮಾಡಬೇಕಾಗುತ್ತೆ. ಅದಕ್ಕಾಗಿ ಆಡಳಿತ ಮಂಡಲಿ ಪ್ರತಿ ಬ್ರಾಂಚ್‌ ಆಫೀಸ್‌ನಲ್ಲಿ ವಿಪತ್ತು ಪರಿಹಾರ ಡಿಪಾರ್ಟ್‌ಮೆಂಟನ್ನು ನೇಮಿಸಿದೆ.

ಈ ಡಿಪಾರ್ಟ್‌ಮೆಂಟ್‌ನ ಸಹೋದರರು ವಿಪತ್ತು ಆದ ಕೂಡಲೇ ಸ್ಥಳೀಯ ಹಿರಿಯರನ್ನು ಸಂಪರ್ಕಿಸಿ ಪ್ರಚಾರಕರಿಗೆ ಏನು ಅಗತ್ಯ ಇದೆ ಅಂತ ತಿಳಿದುಕೊಳ್ಳುತ್ತಾರೆ. ಸ್ಥಳೀಯ ಪ್ರಚಾರಕರಿಗೆ ನಿಭಾಯಿಸಲು ಆಗದಷ್ಟು ಹಾನಿಯಾಗಿದ್ದರೆ, ಕೆಲವು ಅರ್ಹ ಸಹೋದರರನ್ನು ಬ್ರಾಂಚ್‌ ಆಫೀಸ್‌ ಪರಿಹಾರ ಕೆಲಸಕ್ಕೆ ನೇಮಿಸುತ್ತೆ. ಈ ಸಹೋದರರು ಸ್ವಯಂ ಸೇವಕರಿಗಾಗಿ ಕೇಳಿಕೊಳ್ಳಬಹುದು, ನಿರ್ದಿಷ್ಟ ವಸ್ತುಗಳನ್ನು ಕಾಣಿಕೆಯಾಗಿ ಕೊಡಲು ಕೇಳಿಕೊಳ್ಳಬಹುದು ಅಥವಾ ಅಗತ್ಯವಿರುವ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಿ ಸಹೋದರರಿಗೆ ಹಂಚಬಹುದು.

ನಮ್ಮ ಇಷ್ಟಕ್ಕೆ ಬಂದಹಾಗೆ ಮಾಡುವ ಬದಲು ಸಂಘಟನೆಯ ಏರ್ಪಾಡಿಗೆ ಅನುಸಾರವಾಗಿ ಕೆಲಸ ಮಾಡಿದರೆ ತುಂಬ ಪ್ರಯೋಜನ ಆಗುತ್ತೆ. ಇದರಿಂದ ಗಲಿಬಿಲಿ, ಗೊಂದಲ ಆಗಲ್ಲ. ಹಣ ಮತ್ತು ವಸ್ತುಗಳು ವೇಸ್ಟ್‌ ಆಗಲ್ಲ ಮತ್ತು ಒಂದೇ ಕೆಲಸವನ್ನು ಎರಡು ಸಲ ಮಾಡೋದು ತಪ್ಪುತ್ತೆ.

ಬ್ರಾಂಚ್‌ ಆಫೀಸ್‌ ಕಳಿಸಿ ಕೊಟ್ಟ ಸಹೋದರರು ಪರಿಹಾರ ಕೆಲಸಕ್ಕಾಗಿ ಎಷ್ಟು ಹಣ ಮತ್ತು ಸ್ವಯಂ ಸೇವಕರು ಬೇಕು ಅಂತ ನಿರ್ಧರಿಸಬಹುದು. ಇವರು ವಿಪತ್ತು ನಡೆದ ಜಾಗದ ಸ್ಥಳೀಯ ಅಧಿಕಾರಿಗಳನ್ನು ಕೂಡ ಸಂಪರ್ಕಿಸಬಹುದು. ನಮ್ಮ ಪರಿಹಾರ ಕೆಲಸವನ್ನು ಬೇಗ ಮುಗಿಸೋಕೆ ಈ ಅಧಿಕಾರಿಗಳು ಸಹಾಯ ಮಾಡಬಹುದು. ಹಾಗಾಗಿ ನಿಮ್ಮಷ್ಟಕ್ಕೆ ನೀವೇ ಹಣ ಒಟ್ಟುಗೂಡಿಸಲು ದಯವಿಟ್ಟು ಹೋಗಬೇಡಿ. ಪರಿಹಾರದ ವಸ್ತುಗಳನ್ನು ಕಳಿಸಬೇಡಿ. ಅಷ್ಟೇ ಅಲ್ಲ, ನಿಮ್ಮನ್ನ ಕೇಳಿಕೊಳ್ಳದಿದ್ದರೆ ನೀವಾಗಿಯೇ ವಿಪತ್ತು ನಡೆದಿರೋ ಜಾಗಕ್ಕೆ ಹೋಗಬೇಡಿ.

ಆದರೆ ಸಹೋದರ ಸಹೋದರಿಯರನ್ನ ನಾವು ಪ್ರೀತಿಸೋದ್ರಿಂದ ವಿಪತ್ತುಗಳಾದಾಗ ಅವರಿಗೆ ಸಹಾಯ ಮಾಡಲು ಬಯಸ್ತೀವಿ. (ಇಬ್ರಿ 13:16) ಇನ್ಯಾವ ರೀತಿಯಲ್ಲಿ ನಾವು ಅವರಿಗೆ ಸಹಾಯ ನೀಡಬಹುದು? ವಿಪತ್ತಿನಿಂದಾಗಿ ನಷ್ಟ ಆದ ಸಹೋದರರಿಗಾಗಿ ಮತ್ತು ಪರಿಹಾರ ಕೆಲಸದಲ್ಲಿ ಸಹಾಯ ಮಾಡ್ತಾ ಇರುವವರಿಗಾಗಿ ಪ್ರಾರ್ಥಿಸಬಹುದು. ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆ ಸಹ ಕೊಡಬಹುದು. ನಾವು ಕೊಡೋ ಕಾಣಿಕೆಯನ್ನು ಎಲ್ಲಿ ಖರ್ಚು ಮಾಡಬೇಕಂತ ಆಡಳಿತ ಮಂಡಲಿಯ ನಿರ್ದೇಶನದ ಪ್ರಕಾರ ಬ್ರಾಂಚ್‌ ಆಫೀಸ್‌ ನಿರ್ಧಾರ ಮಾಡುತ್ತೆ. ಪರಿಹಾರ ಕೆಲಸದಲ್ಲಿ ಕೈ ಜೋಡಿಸಲು ನಿಮಗೆ ಇಷ್ಟ ಇದ್ರೆ ಲೋಕಲ್‌ ಡಿಸೈನ್‌/ಕನ್‌ಸ್ಟ್ರಕ್ಷನ್‌ ವಾಲಿಂಟಿಯರ್‌ ಅಪ್ಲಿಕೇಷನ್‌ (DC-50) ಫಾರ್ಮ್‌ ಭರ್ತಿ ಮಾಡಿ.

ಬ್ರೆಜಿಲ್‌ನಲ್ಲಾದ ಭೀಕರ ಪ್ರವಾಹ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ತರ ಕೊಡಿ:

2020ರಲ್ಲಿ ಬ್ರೆಜಿಲ್‌ನಲ್ಲಾದ ವಿಪತ್ತಿನ ನಂತರ ಯೆಹೋವನ ಸಾಕ್ಷಿಗಳು ಮಾಡಿದ ಪರಿಹಾರ ಕೆಲಸದ ಬಗ್ಗೆ ನಿಮಗೆ ಹೇಗನಿಸ್ತು?