ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೋಬ 1-5

ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು

ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು

ಇಸ್ರಾಯೇಲ್ಯರು ಐಗುಪ್ತದಲ್ಲಿ ಬಂಧಿವಾಸಿಗಳಾಗಿದ್ದಾಗ ಯೋಬ ಊಚ್‌ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದನು. ಯೋಬ ಇಸ್ರಾಯೇಲ್ಯನಲ್ಲದಿದ್ದರೂ ಯೆಹೋವ ದೇವರನ್ನು ನಿಷ್ಠೆಯಿಂದ ಆರಾಧಿಸುತ್ತಿದ್ದನು. ಅವನಿಗೆ ದೊಡ್ಡ ಕುಟುಂಬ, ಆಸ್ತಿ-ಪಾಸ್ತಿ ಮತ್ತು ಘನತೆ-ಗೌರವವಿತ್ತು. ಅವನು ಜನರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳುತ್ತಾ ಭೇದಭಾವ ಮಾಡದೆ ನ್ಯಾಯತೀರಿಸುತ್ತಿದ್ದನು. ಕಷ್ಟದಲ್ಲಿರುವವರಿಗೆ ಮತ್ತು ಬಡವರಿಗೆ ಉದಾರವಾಗಿ ದಾನ ಮಾಡುತ್ತಿದ್ದನು. ಯೋಬನು ಸಮಗ್ರತೆ ಕಾಪಾಡಿಕೊಂಡನು.

ತನ್ನ ಜೀವನದಲ್ಲಿ ಯೆಹೋವನೇ ತುಂಬಾ ಮುಖ್ಯ ಎಂದು ಯೋಬನು ಸ್ಪಷ್ಟವಾಗಿ ತೋರಿಸಿದನು

1:8-11, 22; 2:2-5

  • ಯೋಬನ ಸಮಗ್ರತೆಯನ್ನು ಸೈತಾನನು ಗಮನಿಸಿದನು. ಯೋಬನು ದೇವರಿಗೆ ವಿಧೇಯನಾಗಿದ್ದಾನೆಂಬ ವಿಷಯವನ್ನು ಸೈತಾನನು ಅಲ್ಲಗಳೆಯಲಿಲ್ಲ. ಬದಲಾಗಿ ಅವನ ಉದ್ದೇಶವನ್ನು ಪ್ರಶ್ನಿಸಿದನು

  • ಯೋಬನು ಸ್ವಾರ್ಥಕ್ಕಾಗಿ ಯೆಹೋವನನ್ನು ಆರಾಧಿಸುತ್ತಿದ್ದಾನೆಂದು ಸೈತಾನನು ಆರೋಪಿಸಿದನು

  • ಈ ಆರೋಪ ಸುಳ್ಳೆಂದು ರುಜುಪಡಿಸಲು ನಂಬಿಗಸ್ತ ಯೋಬನನ್ನು ಪರೀಕ್ಷಿಸುವಂತೆ ಯೆಹೋವನು ಅನುಮತಿಸಿದನು. ಸೈತಾನನು ಯೋಬನಿಗೆ ಕಷ್ಟಗಳ ಸುರಿಮಳೆ ಸುರಿಸಿದನು

  • ಯೋಬ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡಾಗ ಸೈತಾನನು ಎಲ್ಲಾ ಮಾನವರ ಸಮಗ್ರತೆಯ ಬಗ್ಗೆ ಪ್ರಶ್ನಿಸಿದನು

  • ಯೋಬನು ಪಾಪಮಾಡಲೂ ಇಲ್ಲ, ದೇವರ ಮೇಲೆ ತಪ್ಪು ಹೊರಿಸಲೂ ಇಲ್ಲ