ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೋಬ 6-10

ನಂಬಿಗಸ್ತ ಯೋಬನು ತನ್ನ ದುಃಖವನ್ನು ಹೇಳಿಕೊಂಡನು

ನಂಬಿಗಸ್ತ ಯೋಬನು ತನ್ನ ದುಃಖವನ್ನು ಹೇಳಿಕೊಂಡನು

ಯೋಬ ಗತಿಗೆಟ್ಟವನಾಗಿ, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ನಂಬಿಗಸ್ತನಾಗಿ ಉಳಿದನು. ಯೋಬ ನಿರುತ್ತೇಜನಗೊಂಡು ನಂಬಿಗಸ್ತಿಕೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳಬೇಕೆಂದು ಸೈತಾನ ಪ್ರಯತ್ನಿಸುತ್ತಿದ್ದನು. ಸಂತೈಸಲು ಯೋಬನ ಮೂವರು “ಸ್ನೇಹಿತರು” ಬಂದರು. ಮೊದಲು, ಯೋಬನ ಕಡೆಗೆ ಕನಿಕರ ಇರುವಂತೆ ಎಲ್ಲರ ಮುಂದೆ ನಾಟಕವಾಡಿದರು. ಯೋಬನಿಗೆ ಸಾಂತ್ವನದ ಒಂದು ಮಾತನ್ನೂ ಆಡದೆ ಏಳು ದಿನ ಸುಮ್ಮನೆ ಕುಳಿತರು. ನಂತರ, ಯೋಬನ ಮೇಲೆ ತಪ್ಪು ಹೊರಿಸುತ್ತಾ ಮನಸ್ಸನ್ನು ಚುಚ್ಚುವಂಥ ಮಾತುಗಳನ್ನು ಆಡಿದರು.

ತೀವ್ರ ಒತ್ತಡದ ಮಧ್ಯೆಯೂ ಯೋಬ ಯೆಹೋವನಿಗೆ ನಿಷ್ಠೆಯಿಂದಿದ್ದನು

6:3; 7:16; 9:20-22; 10:1, 12

  • ಯೋಬನು ಅನುಭವಿಸಿದ ದುಃಖ ಮತ್ತು ಕಷ್ಟಗಳು ಅವನು ತಪ್ಪಾಗಿ ಯೋಚಿಸುವಂತೆ ಮಾಡಿದವು ಆದ್ದರಿಂದ ತಾನು ನಂಬಿಗಸ್ತನಾಗಿದ್ದರೂ ದೇವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದನು

  • ಯೋಬ ಎಷ್ಟು ನಿರುತ್ತೇಜನಗೊಂಡಿದ್ದನೆಂದರೆ ಅವನು ‘ನನ್ನ ಕಷ್ಟಕ್ಕೆ ಬೇರೇನಾದರೂ ಕಾರಣ ಇರಬಹುದಾ?’ ಅಂತ ಯೋಚನೆ ಕೂಡ ಮಾಡಲಿಲ್ಲ

  • ದುಃಖದಲ್ಲಿ ಮುಳುಗಿದ್ದರೂ ಯೆಹೋವನ ಕಡೆಗೆ ಅವನಿಗಿರುವ ಪ್ರೀತಿಯ ಬಗ್ಗೆ ತನ್ನ ಗೆಳೆಯರೊಂದಿಗೆ ಮಾತಾಡಿದನು