ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸ್ವಂತ ನಿರೂಪಣೆಯನ್ನು ತಯಾರಿಸಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸ್ವಂತ ನಿರೂಪಣೆಯನ್ನು ತಯಾರಿಸಿ

ಏಕೆ ಪ್ರಾಮುಖ್ಯ: ಕೂಟದ ಕೈಪಿಡಿಯಲ್ಲಿ ಬರುವ ಮಾದರಿ ನಿರೂಪಣೆಗಳಲ್ಲಿ ಒಳ್ಳೇ ಸಲಹೆಗಳಿರುವುದಾದರೂ ಅವು ಕೇವಲ ಹೊರಮೇರೆಗಳಷ್ಟೇ. ನೀವು ನಿಮ್ಮ ಸ್ವಂತ ಮಾತಿನಲ್ಲಿ ಅದನ್ನು ಹೇಳಬೇಕು. ಅಲ್ಲಿ ಕೊಟ್ಟದ್ದಕ್ಕಿಂತ ಭಿನ್ನ ರೀತಿಯ ನಿರೂಪಣೆ ನಿಮ್ಮ ಮನಸ್ಸಿಗೆ ಬರಬಹುದು ಅಥವಾ ಬೇರಾವುದೋ ವಿಷಯ ಸ್ಥಳೀಯರಿಗೆ ಹಿಡಿಸಬಹುದು. ಆದ್ದರಿಂದ ಕರಪತ್ರವನ್ನು ಓದಿದ ನಂತರ, ಮಾದರಿ ನಿರೂಪಣೆಗಳನ್ನು ಮತ್ತು ಅದರ ವಿಡಿಯೋಗಳನ್ನು ನೋಡಿ. ನಂತರ ಈ ಕೆಳಗಿನ ಸಲಹೆಗಳನ್ನು ಅನುಸರಿಸುತ್ತಾ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ. ವಚನ ಓದುವ ಅಥವಾ ಸಾಹಿತ್ಯ ಕೊಡುವ ಮುಂಚೆ ಯಾವಾಗಲೂ ಮನೆಯವರಿಗೆ ಆಸಕ್ತಿ ಇದೆಯಾ ಎಂದು ತಿಳಿದುಕೊಳ್ಳಿ.—ನಮ್ಮ ರಾಜ್ಯ ಸೇವೆ 2/08 ಪು. 10.

ಹೇಗೆ ಮಾಡುವುದು:

‘ಮಾದರಿ ನಿರೂಪಣೆಗಳಲ್ಲಿ ಯಾವುದಾದರೊಂದನ್ನು ಉಪಯೋಗಿಸಲಾ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

ಸರಿ

  • ಆರಂಭದ ಮಾತುಗಳನ್ನು ತಯಾರಿಸಿ. ಮನೆಯವರನ್ನು ವಂದಿಸಿದ ನಂತರ ನೀವು ಯಾಕೆ ಬಂದಿದ್ದೀರೆಂದು ತಿಳಿಸಿ. (ಉದಾಹರಣೆ: “ನಾನು . . . ಕ್ಕೋಸ್ಕರ ಬಂದಿದ್ದೇನೆ.”)

  • ಪ್ರಶ್ನೆ ಕೇಳುವ, ವಚನ ತೋರಿಸುವ ಮತ್ತು ಪತ್ರಿಕೆ ಕೊಡುವ ಮುನ್ನ ಏನು ಮಾತಾಡಬೇಕು ಅಂತ ಮೊದಲೇ ಯೋಚಿಸಿ. (ಉದಾಹರಣೆ: ವಚನವನ್ನು ಪರಿಚಯಿಸಲು, “ಆ ಪ್ರಶ್ನೆಗೆ ಉತ್ತರ ಇಲ್ಲಿದೆ” ಎನ್ನಬಹುದು.)

ಬೇಡ

  • ಕರಪತ್ರದಲ್ಲಿ ನಿಮಗೆ ಇಷ್ಟವಾಗುವ ಮತ್ತು ನಿಮ್ಮ ಟೆರಿಟೊರಿಯಲ್ಲಿರುವ ಜನರ ಆಸಕ್ತಿ ಕೆರಳಿಸುವ ಒಂದು ಅಂಶವನ್ನು ಆರಿಸಿಕೊಳ್ಳಿ

  • ಮನೆಯವರನ್ನು ಯೋಚಿಸುವಂತೆ ಮಾಡಿ ಸಂಭಾಷಣೆಯನ್ನು ಮುಂದುವರಿಸಲು ಒಂದು ದೃಷ್ಟಿಕೋನ ಪ್ರಶ್ನೆಯನ್ನು ತಯಾರಿಸಿ. ಆದರೆ ಕಷ್ಟದ ಪ್ರಶ್ನೆ ಕೇಳಬೇಡಿ. (ಉದಾಹರಣೆ: ಕರಪತ್ರಗಳ ಶೀರ್ಷಿಕೆಯಲ್ಲಿ ಕಂಡುಬರುವ ಪ್ರಶ್ನೆ.)

  • ಓದಲು ಒಂದು ವಚನವನ್ನು ಆರಿಸಿ.

  • ಆ ಕರಪತ್ರವನ್ನು ಓದುವುದರಿಂದ ಏನು ಪ್ರಯೋಜನವಿದೆ ಎಂದು ತಿಳಿಸುವ ಒಂದೆರಡು ವಾಕ್ಯಗಳನ್ನು ತಯಾರಿಸಿ.

ಏನೇ ಆದರೂ

  • ಪುನರ್ಭೇಟಿಗಾಗಿ ಒಂದು ಪ್ರಶ್ನೆಯನ್ನು ತಯಾರಿಸಿ

  • ಮುಂದಿನ ಬಾರಿ ನೀವು ಹೇಳಲು ಬಯಸುವ ವಿಷಯವನ್ನು ಮರೆಯದಿರಲು ಚಿಕ್ಕ ಟಿಪ್ಪಣಿ ಬರೆದಿಡಿ