ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಇದನ್ನು ಉಪಯೋಗಿಸುವ ವಿಧ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಇದನ್ನು ಉಪಯೋಗಿಸುವ ವಿಧ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಎಂಬ ಕಿರುಹೊತ್ತಗೆಯನ್ನು ಪ್ರತಿ ಅಧ್ಯಯನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಬೈಬಲ್‌ ವಿದ್ಯಾರ್ಥಿಗಳ ಜೊತೆ ಚರ್ಚಿಸಲಿಕ್ಕಾಗಿ ರಚಿಸಲಾಗಿದೆ. * 1ರಿಂದ 4ನೇ ಪಾಠ ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವನ ಸಾಕ್ಷಿಗಳನ್ನು ಪರಿಚಯಿಸುತ್ತದೆ, 5ರಿಂದ 14ನೇ ಪಾಠ ನಮ್ಮ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಹಾಯಮಾಡುತ್ತದೆ, 15ರಿಂದ 28ನೇ ಪಾಠ ನಮ್ಮ ಸಂಘಟನೆ ಹೇಗೆ ಕೆಲಸ ಮಾಡುತ್ತೆ ಎಂದು ತೋರಿಸುತ್ತದೆ. ಮೊದಲ ಪಾಠದಿಂದ ಆರಂಭಿಸಿ ಕೊನೆಯವರೆಗೆ ಕ್ರಮಬದ್ಧವಾಗಿ ಚರ್ಚಿಸುವುದು ಉತ್ತಮ. ಆದರೆ ವಿದ್ಯಾರ್ಥಿಯ ಸನ್ನಿವೇಶದ ಮೇರೆಗೆ ಬೇರೆ ಪಾಠಗಳನ್ನೂ ಪರಿಗಣಿಸಬಹುದು. ಪ್ರತಿಯೊಂದು ಪುಟದಲ್ಲಿ ಒಂದೊಂದು ಪಾಠವಿದ್ದು ಅದನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಆವರಿಸಬಹುದು.

  • ಪಾಠದ ಮೇಲ್ಬರಹವಾಗಿರುವ ಪ್ರಶ್ನೆಯ ಕಡೆಗೆ ವಿದ್ಯಾರ್ಥಿಯ ಗಮನ ಸೆಳೆಯಿರಿ

  • ಇಡೀ ಪಾಠವನ್ನು ಒಂದೇ ಸಲ ಓದಬಹುದು ಅಥವಾ ಒಂದೊಂದೇ ಪ್ಯಾರಗಳನ್ನು ಓದಿ ಚರ್ಚಿಸಬಹುದು

  • ನೀವು ಓದಿದ ವಿಷಯವನ್ನು ಚರ್ಚಿಸಿ. ಪಾಠದ ಕೊನೆಯಲ್ಲಿರುವ ಪ್ರಶ್ನೆಗಳನ್ನು ಮತ್ತು ಚಿತ್ರಗಳನ್ನು ಉಪಯೋಗಿಸಿ. ಕೊಟ್ಟಿರುವ ವಚನಗಳಲ್ಲಿ ಯಾವುದನ್ನು ಓದಿ, ಚರ್ಚಿಸಬೇಕು ಎಂದು ನಿರ್ಣಯಿಸಿ. ದಪ್ಪಕ್ಷರದಲ್ಲಿರುವ ಉಪಶೀರ್ಷಿಕೆಗಳು ಹೇಗೆ ಪಾಠದ ಮೇಲ್ಬರಹದಲ್ಲಿನ ಪ್ರಶ್ನೆಗೆ ಉತ್ತರ ನೀಡುತ್ತವೆ ಎಂದು ತಿಳಿಸಿ

  • ಪ್ರತಿ ಪಾಠದಲ್ಲಿ ‘ಇನ್ನಷ್ಟು ತಿಳಿಯಲು . . .’ ಎಂಬ ಚೌಕ ಇದೆ. ಅದನ್ನು ಒಟ್ಟಾಗಿ ಓದಿ ಮತ್ತು ಅಲ್ಲಿರುವುದನ್ನು ಮಾಡುವಂತೆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ

^ ಪ್ಯಾರ. 3 ಆನ್‌ಲೈನ್‌ನಲ್ಲಿರುವ ಕಿರುಹೊತ್ತಗೆ ಇತ್ತೀಚೆಗಿನ ಆವೃತಿಯಾಗಿರುತ್ತದೆ.