ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ದೇವರ ಮಾತನ್ನು ಆಲಿಸಿ—ಇದನ್ನು ಉಪಯೋಗಿಸುವ ವಿಧ

ದೇವರ ಮಾತನ್ನು ಆಲಿಸಿ—ಇದನ್ನು ಉಪಯೋಗಿಸುವ ವಿಧ

ಓದಲು ಬಾರದವರಿಗೆ ಚಿತ್ರಗಳ ಮೂಲಕ ಬೈಬಲ್‌ ಸತ್ಯಗಳನ್ನು ಕಲಿಸಲಿಕ್ಕಾಗಿ ದೇವರ ಮಾತನ್ನು ಆಲಿಸಿ ಎಂಬ ಕಿರುಹೊತ್ತಗೆಯನ್ನು ರಚಿಸಲಾಗಿದೆ. ಪ್ರತಿ ಪಾಠಗಳಲ್ಲಿ ಚಿತ್ರಗಳಿವೆ. ಯಾವ ಚಿತ್ರದ ನಂತರ ಯಾವುದನ್ನು ಚರ್ಚಿಸಬೇಕೆಂದು ತಿಳಿಯಲು ಚಿತ್ರಗಳಲ್ಲಿ ಬಾಣದ ಗುರುತಿದೆ.

ದೇವರ ಮಾತನ್ನು ಆಲಿಸಿ ಮತ್ತು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಎಂಬ ಎರಡೂ ಕಿರುಹೊತ್ತಗೆಗಳಲ್ಲಿ ಒಂದೇ ರೀತಿಯ ಚಿತ್ರಗಳಿವೆ. ಆದರೆ ಆಲಿಸಿ ಜೀವಿಸಿ ಕಿರುಹೊತ್ತಗೆಯಲ್ಲಿ ಹೆಚ್ಚು ವಾಕ್ಯಗಳಿವೆ. ಇದನ್ನು ಅಲ್ಪ-ಸ್ವಲ್ಪ ಓದಲು ಗೊತ್ತಿರುವ ವಿದ್ಯಾರ್ಥಿಗಳು ಉಪಯೋಗಿಸಬಹುದು. ಸಾಮಾನ್ಯವಾಗಿ, ವಿದ್ಯಾರ್ಥಿಗಳು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾರೆ, ಅಧ್ಯಯನ ನಡೆಸುವರು ಆಲಿಸಿ ಜೀವಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾರೆ. ಅನೇಕ ಪುಟಗಳಲ್ಲಿ ಹೆಚ್ಚಿನ ಮಾಹಿತಿ ಇರುವ ಚಿಕ್ಕ ಚೌಕವಿದೆ, ಇದನ್ನು ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಚರ್ಚಿಸಬಹುದು.

ತಿಂಗಳ ನೀಡುವಿಕೆಯಾಗಿರುವಾಗ ಮಾತ್ರ ಈ ಕಿರುಹೊತ್ತಗೆಗಳನ್ನು ನೀಡಬೇಕೆಂದಿಲ್ಲ, ಯಾವಾಗ ಬೇಕಾದರೂ ಕೊಡಬಹುದು. ಬೈಬಲ್‌ ಅಧ್ಯಯನ ಮಾಡುವಾಗ ಇದರಲ್ಲಿರುವ ಚಿತ್ರಗಳನ್ನು ಉಪಯೋಗಿಸಿ ಬೈಬಲ್‌ ವೃತ್ತಾಂತಗಳನ್ನು ವಿವರಿಸಿ. ವಿದ್ಯಾರ್ಥಿಗೆ ವಿಷಯ ಅರ್ಥವಾಗಿದೆಯಾ ಎಂದು ತಿಳಿಯಲು ಪ್ರಶ್ನೆಗಳನ್ನು ಕೇಳಿ. ಪ್ರತಿ ಪುಟದ ಕೊನೆಯಲ್ಲಿರುವ ವಚನಗಳನ್ನು ಓದಿ ಚರ್ಚಿಸಿ. ಕಿರುಹೊತ್ತಗೆಯನ್ನು ಮುಗಿಸಿದ ನಂತರ ಬೈಬಲ್‌ ಬೋಧಿಸುತ್ತದೆ ಅಥವಾ ಬೈಬಲ್‌ ಕಲಿಸುತ್ತದೆ ಪುಸ್ತಕದಿಂದ ಅಧ್ಯಯನ ಮಾಡಿ. ಇದು ವಿದ್ಯಾರ್ಥಿ ದೀಕ್ಷಾಸ್ನಾನಕ್ಕೆ ಅರ್ಹನಾಗಲು ಸಹಾಯಮಾಡುತ್ತದೆ.