ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 12-16

ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು

ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು

ಯೆಹೋವನು ಯೆರೆಮೀಯನಿಗೆ ಕೊಟ್ಟ ಕಠಿಣ ನೇಮಕದಿಂದ, ಯೆಹೂದ ಮತ್ತು ಯೆರೂಸಲೇಮಿನ ದುರಂಹಕಾರವನ್ನು ನಾಶಮಾಡಲು ಯೆಹೋವನಿಗಿದ್ದ ದೃಢತೆ ನಮಗೆ ಗೊತ್ತಾಗುತ್ತದೆ

ಯೆರೆಮೀಯನು ನಾರಿನ ನಡುಕಟ್ಟನ್ನು ಕೊಂಡುಕೊಂಡನು

13:1, 2

  • ಸೊಂಟಕ್ಕೆ ಬಿಗಿದುಕೊಂಡಿದ್ದ ನಡುಕಟ್ಟು ಯೆಹೋವನ ಮತ್ತು ಇಸ್ರಾಯೇಲ್‌ ಜನಾಂಗದ ಮಧ್ಯೆ ಇದ್ದ ಆಪ್ತ ಸಂಬಂಧವನ್ನು ಸೂಚಿಸಿತು

ಯೆರೆಮೀಯನು ನಡುಕಟ್ಟನ್ನು ಯೂಫ್ರೇಟೀಸ್‌ ನದಿಗೆ ತೆಗೆದುಕೊಂಡು ಹೋದನು

13:3-5

  • ಆ ನಡುಕಟ್ಟನ್ನು ಬಂಡೆಯ ಸಂದಿಯೊಳಗೆ ಬಚ್ಚಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು

ನಡುಕಟ್ಟನ್ನು ಮತ್ತೆ ತರಲು ಯೆರೆಮೀಯನು ಯೂಫ್ರೇಟೀಸ್‌ ನದಿಗೆ ಹೋದನು

13:6, 7

  • ನಡುಕಟ್ಟು ಹಾಳಾಗಿಹೋಗಿತ್ತು

ಯೆರೆಮೀಯನು ತನ್ನ ಈ ನೇಮಕವನ್ನು ಪೂರೈಸಿದ ನಂತರ ಯೆಹೋವನು ಅವನಿಗೆ ವಿಷಯವನ್ನು ವಿವರಿಸಿದನು

13:8-11

  • ಅಷ್ಟೇನು ದೊಡ್ಡದಲ್ಲದ ಈ ಕೆಲಸಕ್ಕೆ ಯೆರೆಮೀಯನು ತೋರಿಸಿದ ವಿಧೇಯತೆಯು ಒಳ್ಳೇ ಹೃದಯದ ಜನರನ್ನು ತಲುಪಲು ಯೆಹೋವನು ಮಾಡಿದ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿತು