ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ

ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ

ಯೆಹೂದ್ಯರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟಿದ್ದರಿಂದ ಬರಲಿರುವ ನಾಶನದ ಬಗ್ಗೆ ಅವರನ್ನು ಎಚ್ಚರಿಸುವಂತೆ ಯೆರೆಮೀಯನಿಗೆ ಹೇಳಲಾಯಿತು. (ಯೆರೆ 13:25) ಇಡೀ ಜನಾಂಗ ಆಧ್ಯಾತ್ಮಿಕವಾಗಿ ಇಂಥ ವಿಷಾದಕರ ಸ್ಥಿತಿಗೆ ಬರಲು ಕಾರಣವೇನು? ಕಾರಣ, ಇಸ್ರಾಯೇಲ್ಯ ಕುಟುಂಬಗಳಲ್ಲಿ ಆಧ್ಯಾತ್ಮಿಕತೆಯೇ ಇರಲಿಲ್ಲ. ಯಾಕೆಂದರೆ ಧರ್ಮೋಪದೇಶಕಾಂಡ 6:5-7⁠ರಲ್ಲಿರುವ ಯೆಹೋವನ ಮಾರ್ಗದರ್ಶನವನ್ನು ಕುಟುಂಬದ ಶಿರಸ್ಸು ಪಾಲಿಸುತ್ತಿರಲಿಲ್ಲ.

ಇಂದು ಸಹ ಕುಟುಂಬಗಳು ಆಧ್ಯಾತ್ಮಿಕವಾಗಿ ದೃಢವಾಗಿದ್ದರೆ ಸಭೆಗಳು ಬಲವಾಗಿರುತ್ತವೆ. ಕುಟುಂಬ ಆರಾಧನೆಯನ್ನು ತಪ್ಪದೆ, ಅರ್ಥಪೂರ್ಣವಾಗಿ ಮಾಡುವ ಮೂಲಕ ಕುಟುಂಬದವರು ಯೆಹೋವನನ್ನು ಸದಾ ನೆನಪಿನಲ್ಲಿಡಲು ಕುಟುಂಬದ ಶಿರಸ್ಸು ಸಹಾಯಮಾಡಬಹುದು. (ಕೀರ್ತ 22:27) ಈ ಮಾತುಗಳು ನಿಮ್ಮ ಹೃದಯದಲ್ಲಿರಬೇಕು’—ಕುಟುಂಬ ಸಂದರ್ಶನಗಳು ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ತಮ್ಮ ಕುಟುಂಬ ಆರಾಧನೆಗೆ ಬಂದ ತಡೆಗಳನ್ನು ಕೆಲವು ಕುಟುಂಬಗಳು ಹೇಗೆ ಎದುರಿಸಿದವು?

  • ಕುಟುಂಬ ಆರಾಧನೆಯನ್ನು ತಪ್ಪದೆ ಮತ್ತು ಅರ್ಥಪೂರ್ಣವಾಗಿ ಮಾಡುವುದರಿಂದ ಯಾವ ಪ್ರಯೋಜನವಿದೆ?

  • ಕುಟುಂಬ ಆರಾಧನೆ ಮಾಡಲು ನನಗಿರುವ ಅಡ್ಡಿತಡೆಗಳೇನು ಮತ್ತು ಅವುಗಳನ್ನು ನಿಭಾಯಿಸಲು ನಾನು ಏನು ಮಾಡುತ್ತೇನೆ?