ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ

ಏಕೆ ಪ್ರಾಮುಖ್ಯ: ಅಧ್ಯಯನ ಮಾಡಲಿರುವ ಭಾಗವನ್ನು ಬೈಬಲ್‌ ವಿದ್ಯಾರ್ಥಿಗಳು ಮೊದಲೇ ಓದಿ ತಯಾರಿ ಮಾಡಿದರೆ ಅಧ್ಯಯನ ಮಾಡುವಾಗ ನಾವು ಕಲಿಸುವ ವಿಷಯಗಳು ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಅವನ್ನು ನೆನಪಲ್ಲಿಡುತ್ತಾರೆ. ಅವರು ಎಷ್ಟು ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೋ ಮತ್ತು ಎಷ್ಟು ಹೆಚ್ಚು ನೆನಪಲ್ಲಿಟ್ಟುಕೊಳ್ಳುತ್ತಾರೋ ಅಷ್ಟೇ ಬೇಗ ಪ್ರಗತಿ ಮಾಡುತ್ತಾರೆ. ದೀಕ್ಷಾಸ್ನಾನ ಆದಮೇಲೂ ‘ಸದಾ ಎಚ್ಚರವಾಗಿರಲು’ ಅವರು ಕೂಟಗಳಿಗೆ ಮತ್ತು ಸೇವೆಗೆ ತಯಾರಿ ಮಾಡಬೇಕಾಗಿದೆ. (ಮತ್ತಾ 25:13) ಅಧ್ಯಯನ ಮಾಡುವುದು ಹೇಗೆ ಎಂದು ಅವರಿಗೆ ಗೊತ್ತಾದರೆ ಮತ್ತು ಒಳ್ಳೇ ಅಧ್ಯಯನ ರೂಢಿ ಬೆಳೆಸಿಕೊಂಡರೆ ಜೀವನಪೂರ್ತಿ ಪ್ರಯೋಜನ ಪಡೆಯುತ್ತಾರೆ. ಆದ್ದರಿಂದ ಬೈಬಲ್‌ ಅಧ್ಯಯನಕ್ಕಾಗಿ ತಯಾರಿ ಮಾಡುವ ರೂಢಿ ಬೆಳೆಸಿಕೊಳ್ಳಲು ನಾವು ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಸಹಾಯ ಮಾಡಬೇಕು.

ಹೇಗೆ ಮಾಡುವುದು:

  • ಒಳ್ಳೇ ಮಾದರಿ ಇಡಿ. (ರೋಮ 2:21) ವಿದ್ಯಾರ್ಥಿಯನ್ನು ಮನಸ್ಸಲ್ಲಿಟ್ಟು ಅಧ್ಯಯನಕ್ಕೆ ಪ್ರತಿ ಸಾರಿ ತಯಾರಿ ಮಾಡಿ. (ರಾಜ್ಯ ಸೇವೆ 11/15 ಪುಟ 3) ನಿಮ್ಮ ಪ್ರತಿಯಲ್ಲಿ ಹೇಗೆ ತಯಾರಿ ಮಾಡಿದ್ದೀರಿ ಎಂದು ವಿದ್ಯಾರ್ಥಿಗೆ ತೋರಿಸಿ

  • ತಯಾರಿ ಮಾಡಲು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ. ನಿಮಗೆ ಸಿಕ್ಕಿರುವ ಹೊಸ ಬೈಬಲ್‌ ಅಧ್ಯಯನ ಮುಂದುವರಿಯುವ ಹಾಗೆ ಕಂಡರೆ ತಯಾರಿ ಮಾಡುವುದು ಎಷ್ಟು ಮುಖ್ಯ ಎಂದು ತಿಳಿಸಿ ಮತ್ತು ಅದರ ಪ್ರಯೋಜನಗಳನ್ನು ವಿವರಿಸಿ. ಇದಕ್ಕೆ ಹೇಗೆ ಸಮಯ ಮಾಡಿಕೊಳ್ಳುವುದೆಂದು ತಿಳಿಸಿ. ಕೆಲವು ಪ್ರಚಾರಕರು ಅಧ್ಯಯನಕ್ಕೆ ಹೋದಾಗ ತಯಾರಿ ಮಾಡಿರುವ ತಮ್ಮ ಪ್ರತಿಯನ್ನು ವಿದ್ಯಾರ್ಥಿಗೆ ಕೊಡುತ್ತಾರೆ. ಹೀಗೆ, ತಯಾರಿ ಮಾಡುವುದರಿಂದ ಎಷ್ಟು ಪ್ರಯೋಜನ ಇದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ. ವಿದ್ಯಾರ್ಥಿ ತಯಾರಿ ಮಾಡಿದಾಗ ಪ್ರಶಂಸಿಸಿ

  • ಹೇಗೆ ತಯಾರಿ ಮಾಡಬೇಕೆಂದು ತೋರಿಸಿ. ಕೆಲವು ಪ್ರಚಾರಕರು ಆರಂಭದಲ್ಲೇ ಒಂದು ಇಡೀ ಅಧ್ಯಯನದ ಅವಧಿಯನ್ನು ಉಪಯೋಗಿಸಿ ಹೇಗೆ ತಯಾರಿ ಮಾಡಬೇಕೆಂದು ಕಲಿಸುತ್ತಾರೆ