ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 25

“ಸದಾ ಎಚ್ಚರವಾಗಿರಿ”

“ಸದಾ ಎಚ್ಚರವಾಗಿರಿ”

25:1-12

ಯೇಸು ಹತ್ತು ಕನ್ಯೆಯರ ಕುರಿತ ದೃಷ್ಟಾಂತವನ್ನು ತನ್ನ ಅಭಿಷಿಕ್ತ ಹಿಂಬಾಲಕರನ್ನು ಮನಸ್ಸಿನಲ್ಲಿಟ್ಟು ಹೇಳಿದನಾದರೂ ಅದರಲ್ಲಿರುವ ಸಂದೇಶ ಎಲ್ಲಾ ಕ್ರೈಸ್ತರಿಗೆ ಅನ್ವಯವಾಗುತ್ತದೆ. (w15 3/15 ಪುಟ 12-16) “ಆದುದರಿಂದ ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.” (ಮತ್ತಾ 25:13) ಯೇಸು ಕೊಟ್ಟ ದೃಷ್ಟಾಂತವನ್ನು ನೀವು ವಿವರಿಸಬಲ್ಲಿರಾ?

  • ಮದುಮಗ (ವಚನ 1)—ಯೇಸು

  • ಸಿದ್ಧವಾಗಿದ್ದ ಬುದ್ಧಿವಂತೆಯರಾದ ಕನ್ಯೆಯರು (ವಚನ 2)—ತಮ್ಮ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಲು ಸಿದ್ಧವಾಗಿರುವ ಮತ್ತು ಕೊನೆಯ ತನಕ ಬೆಳಕು ಕೊಡುವ ವ್ಯಕ್ತಿಗಳಾಗಿ ಹೊಳೆಯುವ ಅಭಿಷಿಕ್ತ ಕ್ರೈಸ್ತರು (ಫಿಲಿ 2:15)

  • “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗು (ವಚನ 6) —ಯೇಸುವಿನ ಸಾನ್ನಿಧ್ಯದ ಪುರಾವೆ

  • ಬುದ್ಧಿಹೀನೆಯರಾದ ಕನ್ಯೆಯರು (ವಚನ 8)—ಮದುಮಗನನ್ನು ಬರಮಾಡಿಕೊಳ್ಳಲು ಹೋದವರು, ಆದರೆ ಎಚ್ಚರವಾಗಿರಲು ತಪ್ಪಿಹೋದ ಮತ್ತು ಸಮಗ್ರತೆ ಕಾಪಾಡಿಕೊಳ್ಳದೆ ಹೋದ ಅಭಿಷಿಕ್ತ ಕ್ರೈಸ್ತರು

  • ಬುದ್ಧಿವಂತೆಯರಾದ ಕನ್ಯೆಯರು ತಮ್ಮ ಎಣ್ಣೆಯನ್ನು ಕೊಡುವುದಿಲ್ಲ (ವಚನ 9)—ಕೊನೆಯ ಮುದ್ರೆ ಒತ್ತಿಯಾದ ಮೇಲೆ ನಂಬಿಗಸ್ತ ಅಭಿಷಿಕ್ತರು ಅಪನಂಬಿಗಸ್ತರಾದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ

  • “ಮದುಮಗನು ಬಂದನು” (ವಚನ 10)—ಮಹಾ ಸಂಕಟ ಅಂತ್ಯಗೊಳ್ಳುವಾಗ ಯೇಸು ನ್ಯಾಯತೀರಿಸಲು ಬರುವನು

  • ಬುದ್ಧಿವಂತೆಯರಾದ ಕನ್ಯೆಯರು ಮದುಮಗನೊಂದಿಗೆ ಮದುವೆಯ ಔತಣಕ್ಕೆ ಹೋಗುತ್ತಾರೆ ಮತ್ತು ಬಾಗಿಲನ್ನು ಮುಚ್ಚಲಾಗುತ್ತದೆ (ವಚನ 10)—ಯೇಸು ತನ್ನ ನಂಬಿಗಸ್ತ ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾನೆ, ಆದರೆ ಅಪನಂಬಿಗಸ್ತರು ತಮ್ಮ ಸ್ವರ್ಗೀಯ ಬಹುಮಾನವನ್ನು ಕಳಕೊಳ್ಳುತ್ತಾರೆ