ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಒಳ್ಳೇ ಪತ್ರಗಳನ್ನು ಬರೆಯಿರಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಒಳ್ಳೇ ಪತ್ರಗಳನ್ನು ಬರೆಯಿರಿ

ಯಾಕೆ ಪ್ರಾಮುಖ್ಯ: ಪೌಲನು ತನ್ನ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸಲು ಬರೆದ 14 ಪತ್ರಗಳಲ್ಲಿ ಒಂದನೇ ಕೊರಿಂಥ ಪುಸ್ತಕವೂ ಒಂದು. ಒಂದು ಪತ್ರ ಬರೆಯುವಾಗ ನಾವು ಒಂದೊಂದೇ ಪದಗಳನ್ನು ಯೋಚಿಸಿ ಬರೆಯಲು ಸಾಧ್ಯವಾಗುತ್ತದೆ. ನಾವು ಯಾರಿಗೆ ಪತ್ರ ಬರೆಯುತ್ತೇವೋ ಅವರು ಅದನ್ನು ಎಷ್ಟು ಸಾರಿ ಬೇಕಾದರೂ ಓದಬಹುದು. ನಮ್ಮ ಸಂಬಂಧಿಕರಿಗೆ ಮತ್ತು ಪರಿಚಯಸ್ಥರಿಗೆ ಸಾಕ್ಷಿ ನೀಡಲು ಪತ್ರ ಒಂದು ಒಳ್ಳೇ ಸಾಧನ. ಅದರಲ್ಲೂ ಒಬ್ಬ ವ್ಯಕ್ತಿಯೊಂದಿಗೆ ನೇರವಾಗಿ ಮಾತಾಡಲು ಸಾಧ್ಯವಾಗದೇ ಇರಬಹುದು. ಉದಾಹರಣೆಗೆ, ಕೆಲವರಿಗೆ ಆಸಕ್ತಿ ಇದ್ದರೂ ಮನೆಯಲ್ಲಿ ಸಿಗುವುದು ಕಷ್ಟ ಆಗಿರಬಹುದು. ನಮ್ಮ ಸೇವಾಕ್ಷೇತ್ರದಲ್ಲಿರುವ ಕೆಲವರು ಬಿಗಿ-ಭದ್ರತೆಯಿರುವ ಅಪಾರ್ಟ್‌ಮೆಂಟ್‌ಗಳಲ್ಲಿ, ಕಾವಲುಗಾರರನ್ನು ಇಟ್ಟಿರುವ ಲೇಔಟ್‌ಗಳಲ್ಲಿ ಅಥವಾ ದೂರದೂರದ ಸ್ಥಳಗಳಲ್ಲಿ ವಾಸಿಸುತ್ತಿರಬಹುದು. ಇಂಥವರಿಗೆ ಪರಿಣಾಮಕಾರಿಯಾಗಿ ಸಾಕ್ಷಿ ನೀಡಲು ಒಂದು ಪತ್ರ ಸಹಾಯಮಾಡುತ್ತದೆ. ಹಾಗಾದರೆ, ಪತ್ರ ಬರೆಯುವಾಗ ಯಾವೆಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಡಬೇಕು? ಅಪರಿಚಿತರಿಗೆ ಪತ್ರ ಬರೆಯುವಾಗ ಯಾವ ಜಾಗ್ರತೆ ವಹಿಸಬೇಕು?

ಹೇಗೆ ಮಾಡಬೇಕು:

  • ನೀವು ನೇರವಾಗಿ ಸಿಕ್ಕಿದ್ದರೆ ಏನು ಹೇಳುತ್ತಿದ್ದಿರೋ ಅದನ್ನೇ ಪತ್ರದಲ್ಲಿ ಬರೆಯಿರಿ. ಆರಂಭದಲ್ಲೇ ನಿಮ್ಮನ್ನು ಪರಿಚಯಿಸಿಕೊಳ್ಳಿರಿ ಮತ್ತು ಯಾಕೆ ಈ ಪತ್ರ ಬರೆಯುತ್ತಾ ಇದ್ದೀರಿ ಎಂದು ಸ್ಪಷ್ಟವಾಗಿ ತಿಳಿಸಿ. ಅವರು ಯೋಚಿಸಲು ಒಂದು ಪ್ರಶ್ನೆಯನ್ನು ಕೇಳಿ ಮತ್ತು ನಮ್ಮ ವೆಬ್‌ಸೈಟ್‌ ನೋಡಲು ಪ್ರೋತ್ಸಾಹಿಸಿ. ನಂತರ ನಮ್ಮ ಆನ್‌ಲೈನ್‌ ಬೈಬಲ್‌ ಅಧ್ಯಯನದ ಬಗ್ಗೆನೋ ಅಥವಾ ಮನೆಯಲ್ಲಿ ಬೈಬಲ್‌ ಅಧ್ಯಯನ ಮಾಡುವುದರ ಬಗ್ಗೆನೋ ತಿಳಿಸಿರಿ. ಬೈಬಲ್‌ ಅಧ್ಯಯನ ಮಾಡಲು ನಾವು ಉಪಯೋಗಿಸುವ ಯಾವುದಾದರೂ ಒಂದು ಪ್ರಕಾಶನದಲ್ಲಿರುವ ಕೆಲವು ಶೀರ್ಷಿಕೆಗಳನ್ನು ಬರೆಯಿರಿ. ಕಾಂಟ್ಯಾಕ್ಟ್‌ ಕಾರ್ಡ್‌, ಆಮಂತ್ರಣ ಪತ್ರ ಅಥವಾ ಕರಪತ್ರವನ್ನು ಅದರಲ್ಲಿ ಇಟ್ಟು ಕಳುಹಿಸಬಹುದು.

  • ಸಂದೇಶ ಚುಟುಕಾಗಿರಲಿ. ಪತ್ರ ತುಂಬ ದೊಡ್ಡದಾಗಿದ್ದರೆ ಅದನ್ನು ಪಡೆದವರು ಅದನ್ನು ಓದಿ ಮುಗಿಸುವಷ್ಟರಲ್ಲಿ ಸುಸ್ತಾಗಿಬಿಡುತ್ತಾರೆ.—ಪುಟ 8​ರಲ್ಲಿರುವ ಮಾದರಿ ಪತ್ರ ನೋಡಿ.

  • ಪತ್ರ ಬರೆದು ಮುಗಿಸಿದ ಮೇಲೆ ಅದನ್ನು ಪುನಃ ಓದಿ. ಏನಾದರೂ ತಪ್ಪುಗಳಿದ್ದರೆ ಅದನ್ನು ತಿದ್ದಿ. ಸುಲಭವಾಗಿ ಅರ್ಥವಾಗುವ ರೀತಿ ಬರೆದಿದ್ದೀರಾ ಎಂದು ನೋಡಿ. ಪತ್ರ ಒಬ್ಬ ಸ್ನೇಹಿತನ ಹತ್ತಿರ ಮಾತಾಡಿದಂತೆ ಇರಬೇಕು. ಜಾಣ್ಮೆ ಕೂಡ ಮುಖ್ಯ. ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯಿರಿ. ಎಷ್ಟು ರೂಪಾಯಿಯ ಸ್ಟ್ಯಾಂಪ್‌ ಹಾಕಬೇಕೋ ಅಷ್ಟನ್ನು ಹಾಕಿ ಕಳುಹಿಸಿ.