ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮಾದರಿ ಪತ್ರ

ಮಾದರಿ ಪತ್ರ
  • ಪತ್ರ ಯಾರಿಂದ ಅನ್ನುವ ಕಡೆ ನಿಮ್ಮ ವಿಳಾಸವನ್ನು ಬರೆಯಿರಿ. ನಿಮ್ಮ ವಿಳಾಸ ಕೊಡುವುದು ಒಳ್ಳೇದಲ್ಲ ಎಂದು ನಿಮಗೆ ಅನಿಸಿದರೆ ಹಿರಿಯರ ಅನುಮತಿ ಪಡೆದು ರಾಜ್ಯ ಸಭಾಗೃಹದ ವಿಳಾಸವನ್ನು ಬರೆಯಿರಿ. ಆದರೆ ಯಾವತ್ತೂ ಶಾಖಾ ಕಚೇರಿಯ ವಿಳಾಸವನ್ನು ಬರೆಯಬೇಡಿ.

  • ಮನೆಯವರ ಹೆಸರು ಗೊತ್ತಿದ್ದರೆ ಅದನ್ನು ಪತ್ರದಲ್ಲಿ ಸೇರಿಸಿಕೊಳ್ಳಿ. ಇಲ್ಲ ಅಂದರೆ ಇದೊಂದು ಜಾಹೀರಾತು ಪತ್ರ ಅಂತ ಮನೆಯವರು ಅಂದುಕೊಳ್ಳುತ್ತಾರೆ.

  • ಅಕ್ಷರ ತಪ್ಪು ಬರೆಯಬೇಡಿ, ವ್ಯಾಕರಣ ಸರಿ ಇರಲಿ. ವಿರಾಮ ಚಿಹ್ನೆ ಸರಿಯಾಗಿ ಬಳಸಿ. ಪತ್ರ ನೀಟಾಗಿ ಇರಬೇಕು, ಕೋಳಿ ಕಾಲು ತರ ಇರಬಾರದು. ನೀವು ಟೈಪ್‌ ಮಾಡದೆ ಕೈಯಲ್ಲೇ ಬರೆದರೆ ಅಕ್ಷರ ದುಂಡುದುಂಡಾಗಿ, ಓದಲು ಸುಲಭವಾಗಿ ಇರಬೇಕು. ತುಂಬ ಮಾಮೂಲಿ ಭಾಷೆನೂ ಬೇಡ, ಯಾವುದೋ ದೊಡ್ಡ ಆಫೀಸಿಂದ ಬಂದಿರುವ ತರ ಅನಿಸುವುದೂ ಬೇಡ.

ಈ ಅಂಶಗಳನ್ನು ಮನಸ್ಸಲ್ಲಿಟ್ಟು ಕೆಳಗಿರುವ ಪತ್ರವನ್ನು ಬರೆಯಲಾಗಿದೆ. ಇದೊಂದು ಮಾದರಿ ಅಷ್ಟೆ. ಇದರಲ್ಲಿರುವುದನ್ನು ಪ್ರತಿ ಸಾರಿ ಹಾಗೇ ತಗೊಂಡು ನಿಮ್ಮ ಪತ್ರದಲ್ಲಿ ಸೇರಿಸಿ ಕಳುಹಿಸಬೇಕು ಅಂತ ಇಲ್ಲ. ನೀವು ಯಾವ ಉದ್ದೇಶಕ್ಕಾಗಿ ಪತ್ರ ಬರೆಯುತ್ತಿದ್ದೀರೋ ಅದಕ್ಕೆ ತಕ್ಕ ಹಾಗೆ ಬರೆಯಿರಿ. ಸ್ಥಳೀಯ ಸನ್ನಿವೇಶ ಪದ್ಧತಿಗಳು ಏನು ಅನ್ನುವುದನ್ನು ಮನಸ್ಸಲ್ಲಿಟ್ಟು ಬರೆಯಿರಿ.