ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ

ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ

ನಾವು ಕಲಿಸುವ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ದೃಶ್ಯ ಸಾಧನಗಳು ಸಹಾಯ ಮಾಡುತ್ತವೆ. ಇದನ್ನೇ ನಮ್ಮ ಮಹೋನ್ನತ ಬೋಧಕನಾದ ಯೆಹೋವನು ಸಹ ಪ್ರಾಮುಖ್ಯ ಪಾಠಗಳನ್ನು ಕಲಿಸುವಾಗ ಉಪಯೋಗಿಸಿದನು. (ಆದಿ 15:5; ಯೆರೆ 18:1-6) ಮಹಾ ಬೋಧಕನಾದ ಯೇಸು ಕೂಡ ದೃಶ್ಯ ಸಾಧನಗಳನ್ನು ಬಳಸಿದನು. (ಮತ್ತಾ 18:2-6; 22:19-21) ಇತ್ತೀಚಿಗೆ ವಿಡಿಯೋಗಳನ್ನು ಉಪಯೋಗಿಸುವುದರಿಂದ ತುಂಬ ಪ್ರಯೋಜನ ಸಿಕ್ಕಿದೆ. ನೀವು ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುವಾಗ ವಿಡಿಯೋಗಳನ್ನು ಚೆನ್ನಾಗಿ ಉಪಯೋಗಿಸುತ್ತೀರಾ?

ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯಲ್ಲಿರುವ ಪಾಠಗಳನ್ನು ಕಲಿಸಲು ಸಹಾಯ ಮಾಡುವ ಹತ್ತು ವಿಡಿಯೋಗಳನ್ನು ತಯಾರಿಸಲಾಗಿದೆ. ಹೆಚ್ಚಿನಾಂಶ, ಪ್ರತಿಯೊಂದು ವಿಡಿಯೋವಿನ ಶೀರ್ಷಿಕೆಯು ಕಿರುಹೊತ್ತಗೆಯಲ್ಲಿ ದಪ್ಪಕ್ಷರದಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಪ್ರಶ್ನೆ ತರ ಇದೆ. ಈ ಕಿರುಹೊತ್ತಗೆಯನ್ನು ನಮ್ಮ ವೆಬ್‌ಸೈಟಲ್ಲಿ ತೆಗೆದು ನೋಡಿದರೆ ಅಲ್ಲಿ ಯಾವ ವಿಡಿಯೋವನ್ನು ಯಾವಾಗ ತೋರಿಸಬೇಕೆಂದು ಕೊಡಲಾಗಿದೆ. ಜೊತೆಗೆ ನಮ್ಮ ಬೋಧನಾ ಸಲಕರಣೆಯಲ್ಲಿ ನಾವು ಅಧ್ಯಯನ ಮಾಡಲು ಉಪಯೋಗಿಸುವ ಬೇರೆ ಪ್ರಕಾಶನಗಳು ಸಹ ಇವೆ. ಈ ಪ್ರಕಾಶನಗಳಲ್ಲಿರುವ ಮಾಹಿತಿಗೆ ಪೂರಕವಾಗಿ ಬೇರೆ ವಿಡಿಯೋಗಳನ್ನು ಸಹ ತಯಾರಿಸಲಾಗಿದೆ.

ನೀವು ನಿಮ್ಮ ವಿದ್ಯಾರ್ಥಿ ಜೊತೆ ಚರ್ಚಿಸುತ್ತಿರುವ ವಿಷಯ ಅವರಿಗೆ ಅರ್ಥಮಾಡಿಕೊಳ್ಳಲು ಕಷ್ಟ ಆಗುತ್ತಿದೆಯಾ? ಅಥವಾ ನಿಮ್ಮ ಬೈಬಲ್‌ ವಿದ್ಯಾರ್ಥಿ ಯಾವುದಾದರೂ ಪರೀಕ್ಷೆಯನ್ನು ಎದುರಿಸುತ್ತಿದ್ದಾರಾ? jw.orgನಲ್ಲಿ ಮತ್ತು JW ಪ್ರಸಾರದಲ್ಲಿರುವ ಯಾವ ವಿಡಿಯೋದಿಂದ ಅವರಿಗೆ ಸಹಾಯ ಆಗಬಹುದು ಎಂದು ಹುಡುಕಿ. ಅಂಥ ವಿಡಿಯೋ ಸಿಕ್ಕಿದರೆ ನೀವು ಅದನ್ನು ವಿದ್ಯಾರ್ಥಿ ಜೊತೆ ನೋಡಿ ಚರ್ಚಿಸಬಹುದು.

ಪ್ರತಿ ತಿಂಗಳು ಹೊಸ-ಹೊಸ ವಿಡಿಯೋಗಳು ಬರುತ್ತಾ ಇರುತ್ತವೆ. ನೀವು ಆ ವಿಡಿಯೋಗಳನ್ನು ನೋಡುವಾಗ, ‘ಬೇರೆಯವರಿಗೆ ಕಲಿಸುವಾಗ ನಾನು ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು’ ಎಂದು ಯೋಚಿಸಿ.