“ಯಾಕೋಬನ ಮದುವೆ”
ಯಾಕೋಬನಿಗೆ ಮದುವೆಯಾದ ಮೇಲೆ ಕಷ್ಟಗಳು ಬಂದವು. ರಾಹೇಲ ಮತ್ತು ಲೇಯ ಒಬ್ಬರನ್ನೊಬ್ಬರು ಇಷ್ಟಪಡುತ್ತಿರಲಿಲ್ಲ. (ಆದಿ 29:32; 30:1, 8) ಇಂಥ ಕಷ್ಟದ ಸಮಯದಲ್ಲೂ ಯೆಹೋವನು ತನ್ನೊಂದಿಗೆ ಇರುವುದನ್ನು ಯಾಕೋಬ ನೋಡಿದ. (ಆದಿ 30:29, 30, 43) ಮುಂದೆ ಯಾಕೋಬನ ಸಂತತಿ ಇಸ್ರಾಯೇಲ್ ಎಂಬ ದೊಡ್ಡ ಜನಾಂಗವಾಯಿತು.—ರೂತ 4:11.
ನಮ್ಮೀ ದಿನಗಳಲ್ಲೂ ಮದುವೆ ಆದವರಿಗೆ ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತೆ. (1ಕೊರಿಂ 7:28) ಆದರೆ ಯೆಹೋವನ ಮೇಲೆ ಆತುಕೊಂಡು ಬೈಬಲ್ ಸಲಹೆಗಳನ್ನು ಪಾಲಿಸಿದರೆ ಸಂತೋಷಕರ ಮತ್ತು ಯಶಸ್ವಿಕರ ಮದುವೆಯ ಬಂಧ ನಮ್ಮದಾಗುತ್ತೆ.—ಜ್ಞಾನೋ 3:5, 6; ಎಫೆ 5:33.