ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅಂಧರಿಗೆ ಸತ್ಯದ ಉಡುಗೊರೆ
ಯಾಕೆ ಪ್ರಾಮುಖ್ಯ: ಅಂಧರಾದ ಅನೇಕ ಜನರು ಪರಿಚಯವಿಲ್ಲದ ಜನರೊಂದಿಗೆ ಮಾತಾಡಲು ಇಷ್ಟಪಡಲ್ಲ. ಹಾಗಾಗಿ ಅಂಥವರಿಗೆ ಸಾಕ್ಷಿ ಕೊಡುವ ಕೌಶಲ್ಯತೆ ಬೆಳೆಸಿಕೊಳ್ಳಬೇಕು. ಯೆಹೋವ ದೇವರು ಅಂಧರಿಗೆ ಕಾಳಜಿ ತೋರಿಸುತ್ತಾರೆ. (ಯಾಜ 19:14) ದೇವರೊಂದಿಗೆ ಸ್ನೇಹ ಬೆಳಸಿಕೊಳ್ಳಲು ಅಂಧರಿಗೆ ಸಹಾಯ ಮಾಡುವ ಮೂಲಕ ನಾವು ಸಹ ಕಾಳಜಿ ತೋರಿಸಬಹುದು.
ಹೇಗೆ ಮಾಡಬಹುದು:
-
ಅಂಧರನ್ನು ‘ಹುಡುಕಿ.’ (ಮತ್ತಾ 10:11) ನಿಮಗೆ ಗೊತ್ತಿರುವ ಒಂದು ಕುಟುಂಬದಲ್ಲಿ ಅಂಧರು ಯಾರಾದರೂ ಇದ್ದಾರಾ? ನಿಮ್ಮ ಟೆರಿಟೊರಿಯಲ್ಲಿ ಅಂಧರ ಶಾಲೆ, ಸಂಸ್ಥೆ ಅಥವಾ ಆಸ್ಪತ್ರೆ ಇದ್ದರೆ ಅವರಿಗಾಗಿಯೇ ತಯಾರಾದ ಸಾಹಿತ್ಯಗಳನ್ನು ಕೊಡಲು ಆಗುತ್ತಾ?
-
ಆಸಕ್ತಿ ತೋರಿಸಿ. ಆಸಕ್ತಿ ತೋರಿಸಿ ಸ್ನೇಹಭಾವದಿಂದ ಅವರೊಂದಿಗೆ ಮಾತಾಡಿದರೆ ಅವರೂ ನಮ್ಮೊಂದಿಗೆ ಯಾವುದೇ ಹೆದರಿಕೆ ಇಲ್ಲದೆ ಆರಾಮಾಗಿ ಮಾತಾಡುತ್ತಾರೆ. ಆ ಟೆರಿಟೊರಿಯ ಜನರಿಗೆ ಯಾವುದರ ಬಗ್ಗೆ ಆಸಕ್ತಿ ಇದೆ ಅಂತ ಯೋಚಿಸಿ ಅದರ ಬಗ್ಗೆ ಸಂಭಾಷಣೆ ಆರಂಭಿಸಿ
-
ಯೆಹೋವನ ಬಗ್ಗೆ ತಿಳಿಯಲು ಸಹಾಯ ಮಾಡಿ. ಅಂಧರಿಗೆ ಅಂತಾನೇ ನಮ್ಮ ಸಂಘಟನೆ ಬೇರೆ ಬೇರೆ ಶೈಲಿಯಲ್ಲಿ ಸಾಹಿತ್ಯಗಳನ್ನು ತಯಾರಿಸಿದೆ. ಅವರಿಗೆ ಯಾವ ಶೈಲಿಯಲ್ಲಿ ಸಾಹಿತ್ಯ ಬೇಕು ಅಂತ ಕೇಳಿ. ಸಾಹಿತ್ಯ ಸೇವಕನು ಅವರಿಗೆ ಬೇಕಾದ ಶೈಲಿಯಲ್ಲಿ ಸಾಹಿತ್ಯಗಳನ್ನು ಆರ್ಡರ್ ಮಾಡುವಂತೆ ಸೇವಾ ಮೇಲ್ವಿಚಾರಕರು ನೋಡಿಕೊಳ್ಳುತ್ತಾರೆ