ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಮುಖ್ಯ ವಿಷಯಗಳನ್ನ ವಿವರಿಸಿ

ಮುಖ್ಯ ವಿಷಯಗಳನ್ನ ವಿವರಿಸಿ

ಬೈಬಲ್‌ ಅಧ್ಯಯನ ಅಥವಾ ಪುನರ್ಭೇಟಿಗಳನ್ನ ಮಾಡುವಾಗ ಮುಖ್ಯ ವಿಷಯವನ್ನ ಅರ್ಥಮಾಡಿಕೊಳ್ಳಲು ಕೇಳುಗರಿಗೆ ಬೇಕಾದ ಸಹಾಯ ಮಾಡಬೇಕು. ಮುಖ್ಯ ಅಂಶಗಳನ್ನ ಚೆನ್ನಾಗಿ ವಿವರಿಸಿದ್ರೆ ವಿಷಯ ಜನರ ಹೃದಯ ಮುಟ್ಟುತ್ತೆ ಮತ್ತು ಅದನ್ನ ನೆನಪಲ್ಲಿಟ್ಟುಕೊಳ್ಳಲು ಸುಲಭ ಆಗುತ್ತೆ.

ನೀವು ಪುನರ್ಭೇಟಿಗಾಗಿ ಅಥವಾ ಬೈಬಲ್‌ ಅಧ್ಯಯನಕ್ಕಾಗಿ ತಯಾರಿ ಮಾಡುವಾಗ ವಿಷಯಗಳನ್ನ ವಿವರಿಸಲು ಮುಖ್ಯ ಅಂಶಗಳನ್ನ ಆರಿಸಿಕೊಳ್ಳಿ. ಪ್ಯಾರದಲ್ಲಿ ಇರೋ ಪ್ರತಿಯೊಂದು ವಿಷಯನೂ ವಿವರಿಸಲು ಹೋದ್ರೆ ಕೇಳುಗರಿಗೆ ಅರ್ಥಮಾಡಿಕೊಳ್ಳಲು ಕಷ್ಟ ಆಗುತ್ತೆ ಅನ್ನೋದನ್ನ ಮನಸ್ಸಲ್ಲಿಡಿ. ನಂತ್ರ ಅದಕ್ಕೆ ಸೂಕ್ತವಾದ, ಕೇಳುಗರಿಗೆ ಅರ್ಥವಾಗೋ ಉದಾಹರಣೆಗಳನ್ನ ಆರಿಸಿಕೊಳ್ಳಿ. (ಮತ್ತಾ 5:14-16; ಮಾರ್ಕ 2:21; ಲೂಕ 14:7-11) ಕೇಳುಗರ ಹಿನ್ನಲೆ ಮತ್ತು ಇಷ್ಟಗಳನ್ನ ಮನಸ್ಸಲ್ಲಿಟ್ಟು ತಯಾರಿಸಿ. (ಲೂಕ 5:2-11; ಯೋಹಾ 4:7-15) ಕೇಳುಗರಿಗೆ ವಿಷಯ ಚೆನ್ನಾಗಿ ಅರ್ಥ ಆದಾಗ ಅವರ ಮುಖ ಅರಳುತ್ತೆ. ಇದನ್ನ ನೋಡ್ವಾಗ ನಿಮಗೂ ತುಂಬ ಖುಷಿ ಆಗುತ್ತೆ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮುಖ್ಯ ವಿಷಯಗಳನ್ನು ವಿವರಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ವಿದ್ಯಾರ್ಥಿಗಳಿಗೆ ಬೈಬಲ್‌ ವಚನಗಳನ್ನ ಅರ್ಥಮಾಡಿಕೊಳ್ಳಲು ಯಾಕೆ ಸಹಾಯ ಬೇಕಾಗಬಹುದು?

  • ರೋಮನ್ನರಿಗೆ 5:12 ರಲ್ಲಿ ಇರೋ ಸತ್ಯನ ನೀತಾ ಹೇಗೆ ವಿವರಿಸಿದ್ರು?

  • ಚೆನ್ನಾಗಿ ವಿವರಿಸಿದ್ರೆ ವಿಷಯ ಜನರ ಮನ ಮುಟ್ಟುತ್ತೆ

    ವಿಷಯಗಳನ್ನ ಚೆನ್ನಾಗಿ ವಿವರಿಸಿದ್ರೆ ಕೇಳುಗರಿಗೆ ಹೇಗೆ ಸಹಾಯ ಆಗುತ್ತೆ?

  • ಯೆಹೋವನ ಸಂಘಟನೆ ಕೊಟ್ಟಿರೋ ವಿಡಿಯೋಗಳನ್ನ ಮತ್ತು ಇತರ ಬೋಧನಾ ಸಾಧನಗಳನ್ನ ಸೇವೆಯಲ್ಲಿ ಯಾಕೆ ಉಪಯೋಗಿಸಬೇಕು?