ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಶಿಸ್ತು—ಯೆಹೋವನು ಪ್ರೀತಿ ತೋರಿಸೋ ಒಂದು ವಿಧ

ಶಿಸ್ತು—ಯೆಹೋವನು ಪ್ರೀತಿ ತೋರಿಸೋ ಒಂದು ವಿಧ

ಶಿಸ್ತು ಅನ್ನೋದು ಬೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿರೋದಾದ್ರೂ ಅದ್ರಲ್ಲಿ ವಿಷಯಗಳನ್ನ ಸರಿಪಡಿಸೋದು ಮತ್ತು ಶಿಕ್ಷೆ ಕೊಡೋದು ಸಹ ಸೇರಿದೆ. ಕೆಲವೊಮ್ಮೆ ಯೆಹೋವನಿಗೆ ಇಷ್ಟ ಆಗೋ ತರ ಆತನನ್ನ ಆರಾಧಿಸಲು ತಪ್ಪಿಹೋದಾಗ ಆತನು ನಮಗೆ ಶಿಸ್ತು ಕೊಡ್ತಾನೆ. (ರೋಮ 12:1; ಇಬ್ರಿ 12:10, 11) ಶಿಸ್ತು ಸಿಕ್ಕಾಗ ನೋವಾಗುತ್ತೆ ನಿಜ. ಆದ್ರೆ ಅದ್ರಿಂದ ಹಲವಾರು ಪ್ರಯೋಜನಗಳು ಮತ್ತು ಆಶೀರ್ವಾದಗಳು ಸಿಗುತ್ತೆ. (ಜ್ಞಾನೋ 10:7) ಹಾಗಾದ್ರೆ ಶಿಸ್ತು ಕೊಡೋರು ಮತ್ತು ಶಿಸ್ತು ಸ್ವೀಕರಿಸೋರು ಯಾವ ವಿಷಯಗಳನ್ನ ಮನಸ್ಸಲ್ಲಿಡಬೇಕು?

ಶಿಸ್ತು ಕೊಡೋರು. ಯೆಹೋವನು ದಯೆ ಮತ್ತು ಪ್ರೀತಿಯಿಂದ ಶಿಸ್ತು ಕೊಡೋ ಹಾಗೆ ಹಿರಿಯರು, ಹೆತ್ತವರು, ಮತ್ತು ಇತರರು ಸಹ ದಯೆ ಮತ್ತು ಪ್ರೀತಿಯಿಂದ ಶಿಸ್ತು ಕೊಡಲು ತುಂಬ ಪ್ರಯತ್ನಿಸ್ತಾರೆ. (ಯೆರೆ 46:28) ಗಂಭೀರ ಶಿಸ್ತು ಕೊಡಬೇಕಾದ್ರೂ ಅದನ್ನ ಸನ್ನಿವೇಶಕ್ಕೆ ತಕ್ಕ ಹಾಗೆ ಪ್ರೀತಿಯಿಂದ ಕೊಡಬೇಕು.—ತೀತ 1:13.

ಶಿಸ್ತು ಸ್ವೀಕರಿಸೋರು. ಯಾವುದೇ ರೀತಿಯ ಶಿಸ್ತು ಸಿಗೋದಾದ್ರೂ ಅದನ್ನ ನಾವು ತಿರಸ್ಕರಿಸಬಾರದು. ಬದಲಿಗೆ ತಕ್ಷಣ ಅದನ್ನ ಅನ್ವಯಿಸೋಕೆ ಪ್ರಯತ್ನಿಸಬೇಕು. (ಜ್ಞಾನೋ 3:11, 12) ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ನಮಗೆ ಒಂದಲ್ಲಾ ಒಂದು ರೀತಿಯ ಶಿಸ್ತು ಬೇಕೇ ಬೇಕಾಗುತ್ತೆ. ಅದು ಬೇರೆ ಬೇರೆ ರೀತಿಯಲ್ಲಿ ಸಿಗಬಹುದು. ನಾವು ಬೈಬಲ್‌ ಓದುವಾಗ ಅಥವಾ ಸಭೆಯಲ್ಲಿ ಭಾಷಣ ಕೇಳುವಾಗ ಅದ್ರಿಂದ ನಮಗೆ ಶಿಸ್ತು ಸಿಗಬಹುದು. ಅಥವಾ ಕೆಲವೊಮ್ಮೆ ನ್ಯಾಯನಿರ್ಣಾಯಕ ಕಮಿಟಿಯಿಂದ ಶಿಸ್ತು ಸಿಗಬಹುದು. ಶಿಸ್ತನ್ನು ಸ್ವೀಕರಿಸೋದಾದ್ರೆ ನಮ್ಮ ಜೀವನ ಇನ್ನೂ ಚೆನ್ನಾಗಿರುತ್ತೆ ಮತ್ತು ಅದು ಶಾಶ್ವತ ಜೀವನಕ್ಕೆ ನಡೆಸುತ್ತೆ.—ಜ್ಞಾನೋ 10:17.

‘ಯೆಹೋವನು ತಾನು ಪ್ರೀತಿಸುವವರನ್ನೇ ಶಿಕ್ಷಿಸುತ್ತಾನೆ’ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಕ್ಯಾನನ್‌ ಚಿಕ್ಕವರಿದ್ದಾಗ ಅವರ ಜೀವನ ಹೇಗಿತ್ತು? ದೊಡ್ಡವರಾಗ್ತಾ ಹೇಗೆ ಬದಲಾಯ್ತು?

  • ಯೆಹೋವ ದೇವ್ರಿಂದ ಯಾವ ಪ್ರೀತಿಯ ಶಿಸ್ತನ್ನ ಕ್ಯಾನನ್‌ ಪಡೆದ್ರು?

  • ಯೆಹೋವನು ಕೊಡೋ ಶಿಸ್ತನ್ನ ಪ್ರೀತಿಸಲು ಕಲಿಯಿರಿ

    ಕ್ಯಾನನ್‌ ಅವರ ಅನುಭವದಿಂದ ನಾವು ಯಾವ ಪಾಠ ಕಲಿಬಹುದು?