ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ನಿಮ್ಮ ಆಸೆಗಳನ್ನು ನಿಯಂತ್ರಿಸಿ

ನಿಮ್ಮ ಆಸೆಗಳನ್ನು ನಿಯಂತ್ರಿಸಿ

ನಾವು ತಪ್ಪು ಮಾಡೋ ಮನುಷ್ಯರಾಗಿರೋದ್ರಿಂದ ನಮ್ಮ ಆಸೆಗಳನ್ನ ನಿಯಂತ್ರಿಸೋಕೆ ಯಾವಾಗ್ಲೂ ಪ್ರಯತ್ನ ಮಾಡಬೇಕು. ಒಂದುವೇಳೆ ನಾವು, ನಮಗೆ ಇಷ್ಟ ಆಗಿರೋದನ್ನೇ ಮಾಡೋದಾದ್ರೆ ಯೆಹೋವ ದೇವರ ಸ್ನೇಹ ಕಳೆದುಕೊಳ್ತೀವಿ. ಉದಾಹರಣೆಗೆ, ಕೆಲವರಿಗೆ ದೇವರಿಗಿಂತ ಊಟ, ಬಟ್ಟೆ, ಮನೆನೇ ಮುಖ್ಯ. ಇನ್ನೂ ಕೆಲವರು, ದೇವರ ನಿಯಮಗಳನ್ನ ಮುರಿದು ತಮ್ಮ ಲೈಂಗಿಕ ಆಸೆಗಳನ್ನ ತಣಿಸಿಕೊಳ್ತಾರೆ. (ರೋಮ 1:26, 27) ಮತ್ತೂ ಕೆಲವರು, ಜನರ ಮೆಚ್ಚುಗೆ ಪಡಿಯೋಕೆ ತಪ್ಪಾದ ವಿಷಯಗಳನ್ನ ಮಾಡೋಕೂ ರೆಡಿ ಇರ್ತಾರೆ.—ವಿಮೋ 23:2.

ನಮ್ಮ ಆಸೆಗಳನ್ನ ನಿಯಂತ್ರಿಸೋಕೆ ಏನು ಮಾಡಬೇಕು? ಅದಕ್ಕಾಗಿ, ಯೆಹೋವ ದೇವರಿಗೆ ಇಷ್ಟ ಆಗೋ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕು. (ಮತ್ತಾ 4:4) ಅಷ್ಟೆ ಅಲ್ಲ, ನಮ್ಮ ಆಸೆಗಳನ್ನು ನಿಯಂತ್ರಿಸಲು ಯೆಹೋವನ ಹತ್ತಿರ ಸಹಾಯ ಕೇಳಬೇಕು. ಯಾಕಂದ್ರೆ ನಮಗೆ ಯಾವುದು ಒಳ್ಳೇದು, ನಮ್ಮ ಆಸೆಗಳನ್ನ ಹೇಗೆ ತೃಪ್ತಿ ಪಡಿಸಬೇಕಂತ ಆತನಿಗೆ ಚೆನ್ನಾಗಿ ಗೊತ್ತು.—ಕೀರ್ತ 145:16.

ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ ಅನ್ನೋ ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ಕೆಲವರು ಯಾಕೆ ಸಿಗರೇಟ್‌ ಸೇದುತ್ತಾರೆ?

  • ಸಿಗರೇಟ್‌ ಸೇದಿದರೆ ಏನಾಗುತ್ತೆ?

  • ಸಿಗರೇಟ್‌ ಅಥವಾ ಎಲೆಕ್ಟ್ರಾನಿಕ್‌ ಸಿಗರೇಟ್‌ ಸೇದೋದು ಯಾಕೆ ತಪ್ಪು?—2ಕೊರಿಂ 7:1

  • ಸಿಗರೇಟ್‌ ಸೇದಬೇಕು ಅನ್ನೋ ಆಸೆಯ ವಿರುದ್ಧ ಹೋರಾಡೋಕೆ ನಿಮ್ಮಿಂದಾಗುತ್ತೆ!

    ಸಿಗರೇಟ್‌ ಸೇದೋಕೆ ಯಾರಾದರು ಕರೆದಾಗ ನೀವೇನು ಮಾಡ್ತೀರಾ? ಅಥವಾ ಸೇದೋ ಚಟ ಬಿಡೋಕೆ ನೀವೇನು ಮಾಡ್ತೀರಾ?